ರಾಜ್ಯ

ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಚಾಲಕ-ಗೈಡ್ ತರಬೇತಿ ಪ್ರಸ್ತಾವ ಮುಂದಿಟ್ಟ ಉಬರ್

ಬೆಂಗಳೂರು : ಕರ್ನಾಟಕದ ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿರುವ ಉಬರ್ ಇಂಡಿಯಾ ಈ ಯೋಜ‌ನೆ‌ ಜಾರಿಗೆ‌ ತರಲು ಮುಂದಾಗಿದೆ. ಚಾಲನೆ ತರಬೇತಿ ಜೊತೆಗೆ ಪ್ರಮಾಣೀಕೃತ ಪ್ರವಾಸಿ-ಮಾರ್ಗದರ್ಶಿ ಕೌಶಲ್ಯ ಒದಗಿಸುವ ಯೋಜನೆ ಆರಂಭಿಸಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ವಿಕಾಸ ಸೌಧದಲ್ಲಿ ಮಂಗಳವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರೊಂದಿಗೆ ಉಬರ್‌ನ ಏಷ್ಯಾ ಪೆಸಿಫಿಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥ ಮೈಕ್ ಆರ್ಗಿಲ್ ಮಾತುಕತೆ ನಡೆಸಿದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳೊಂದಿಗೆ ಚಾಲಕರನ್ನು ಸಜ್ಜುಗೊಳಿಸುವುದು ವಿಶೇಷವಾಗಿ ತಳ ಸಮುದಾಯದ ಯುವಕರಿಗೆ ಆದಾಯದ ಅವಕಾಶಗಳನ್ನು ಒದಗಿಸುವುದು ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವ ಯೋಜನೆ ಇದಾಗಿದೆ ಎಂದು ಹೇಳಿದರು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್‌ಡಿಸಿ) ಪ್ರಸ್ತುತ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನ ಚಾಲನೆ ತರಬೇತಿ ನೀಡುತ್ತದೆ. 100 ಕ್ಕೂ ಹೆಚ್ಚು ತರಬೇತಿ ಪಡೆದ ಚಾಲಕರು ಈಗಾಗಲೇ ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಉಬರ್ ಸಂಸ್ಥೆ ಗಳಿಕೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು “ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ” ಮಾದರಿಯನ್ನು ಪ್ರಸ್ತಾಪಿಸಿದೆ. “ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದಾದ್ಯಂತ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ವಿವಿಧ ಕೌಶಲ್ಯ ಯೋಜನೆಗಳನ್ನು ನಾವು ಚರ್ಚಿಸಿದ್ದೇವೆ, ಕರ್ನಾಟಕದಲ್ಲಿ ಹೇರಳ ಪ್ರವಾಸೋದ್ಯಮ ತಾಣಗಳಿವೆ. ಅಲ್ಲಿ ಉತ್ತಮ ತರಬೇತಿ ಪಡೆದ ಕ್ಯಾಬ್ ಚಾಲಕರು ಇದ್ದರೆ ಪ್ರವಾಸಿ ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸಬಹುದು” ಎಂದು ಆರ್ಗಿಲ್ ಹೇಳಿದರು.

ಇದನ್ನೂ ಓದಿ:-ಮೈಸೂರು ವಿ.ವಿ | ವಿದ್ಯಾರ್ಥಿ ಸಂಘದ ಚುನಾವಣೆ : ಕೃಷ್ಣಮೂರ್ತಿ ಗಣಿಗನೂರಿಗೆ ಜಯ

ನಂತರ ಸಚಿವ ಡಾ. ಪಾಟೀಲ್ ಮಾತನಾಡಿ, ಚಾಲಕ ತರಬೇತಿಯಲ್ಲಿ ವಿಶೇಷ ಕೌಶಲ್ಯಗಳನ್ನು ಸಂಯೋಜಿಸುವುದು ಪ್ರಯೋಜನಕಾರಿ. ಇದೊಂದು ಉತ್ತಮ ಯೋಜನೆ ಎಂದು ಸ್ವಾಗತಿಸಿದರು ಮತ್ತು ಮಂಡಳಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದು ಭರವಸೆ ನೀಡಿದರು. ಹೈವಿಷನ್ ಇಂಡಿಯಾ, ಸುಧಾರಿತ ತಾಂತ್ರಿಕ ತರಬೇತಿಗಾಗಿ ಜಿಟಿಟಿಸಿ ಜೊತೆ ಒಪ್ಪಂದ ಮತ್ತೊಂದು ಸಭೆಯಲ್ಲಿ, ಐಫೋನ್ ತಯಾರಕ ಫಾಕ್ಸ್‌ಕಾನ್‌ಗೆ ಕ್ಯಾಮೆರಾ ಪರಿಕರಗಳನ್ನು ಒದಗಿಸುವ ಕೊರಿಯನ್ ಸಂಸ್ಥೆಯಾದ ಹೈವಿಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸಚಿವ ಡಾ. ಪಾಟೀಲ್ ಸಮ್ಮುಖದಲ್ಲಿ ಜಿಟಿಟಿಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ತಾಂತ್ರಿಕ ತರಬೇತಿ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಯಾಂತ್ರೀಕೃತತೆ, ನಿಖರ ಯಂತ್ರೋಪಕರಣ ಮತ್ತು ಸಲಕರಣೆಗಳ ಜೋಡಣೆಯಂತಹ ಕ್ಷೇತ್ರಗಳಲ್ಲಿ ಸೌಲಭ್ಯಗಳ ಹಂಚಿಕೆಯಲ್ಲಿ ಸಹಕಾರಕ್ಕಾಗಿ ಈ ಒಪ್ಪಂದವು ಅವಕಾಶವನ್ನು ಒದಗಿಸುತ್ತದೆ.

ಒಪ್ಪಂದಕ್ಕೆ ಹೈವಿಷನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲೀ ಯುನ್ಹೋ ಮತ್ತು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಸಹಿ ಹಾಕಿದರು. ಎರಡೂ ಸಂಸ್ಥೆಗಳು ಅರ್ಹ ಜಿಟಿಟಿಸಿ ಪ್ರಶಿಕ್ಷಣಾರ್ಥಿಗಳಿಗೆ ಕೈಗಾರಿಕಾ ಮಾನ್ಯತೆ, ಇಂಟರ್ನ್‌ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸಮ್ಮತಿಸಿವೆ. ಜೊತೆಗೆ ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಕೈಗಾರಿಕಾ ಸೌಲಭ್ಯಗಳು ಮತ್ತು ಪ್ರಾತ್ಯಕ್ಷಿಕೆ ಸಲಕರಣೆಗಳನ್ನು ಪೂರೈಸಲಿವೆ.

ಆಂದೋಲನ ಡೆಸ್ಕ್

Recent Posts

ಬೇಸಿಗೆ ಆರಂಭದಲ್ಲೇ 99 ಅಡಿಗೆ ತಲುಪಿದ ಕೆಆರ್‌ಎಸ್‌ ಜಲಾಶಯ

ಮಂಡ್ಯ: ಬೇಸಿಗೆ ಆರಂಭದಲ್ಲೇ ಕೆಆರ್‌ಎಸ್‌ ನೀರಿನ ಮಟ್ಟ 99 ಅಡಿಗೆ ಕುಸಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಲ್ಲಿ…

39 mins ago

ಸರಗೂರು| ಹೆಣ್ಣು ಹುಲಿ ಸೆರೆ: ನಿರಾಳರಾದ ಗ್ರಾಮಸ್ಥರು

ಸರಗೂರು: ತಾಲ್ಲೂಕಿನ ಹಾದನೂರು ಬಳಿ ಹಾಡಹಗಲೇ ಪ್ರತ್ಯಕ್ಷವಾಗಿದ್ದ 11 ವರ್ಷದ ಹೆಣ್ಣು ಹುಲಿಯನ್ನು ಕಳೆದ ರಾತ್ರಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.…

2 hours ago

ಮಕ್ಳಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ನನ್ನ ಮನಸ್ಸಿನಲ್ಲಿ ಆಳವಾಗಿ ಇಳಿದ ಗಾಂಧಿಯವರ ಅಹಿಂಸಾ ಮಾರ್ಗ ಗಾಂಧಿಜಿ ಅವರ ಅಹಿಂಸಾ ಮಾರ್ಗ ಮತ್ತು ಸತ್ಯಾಗ್ರಹ ಚಳವಳಿಗಳು ನನ್ನ…

2 hours ago

ಭಾರತದ ಗಾಂಧಿ ಮತ್ತು ಆಫ್ರಿಕಾದ ಗಾಂಧಿ

ಡಾ.ಎಂ.ಡಿ.ಉಮೇಶ ನೆಲ್ಸನ್ ಮಂಡೇಲಾರವರ ಮೇಲೆ ಗಾಂಧೀಜಿ ಅವರು ಆಳವಾದ ಪ್ರಭಾವವನ್ನು ಬೀರಿದ್ದರು. ಮುಖ್ಯವಾಗಿ ಅಹಿಂಸಾತ್ಮಕ ಪ್ರತಿರೋಧ ಮತ್ತು ಸತ್ಯಾಗ್ರಹದ ಮೂಲಕ…

2 hours ago

ಕಾಪಿ ಮಾಡು ಎಂದು ಹೇಳಿದ ಗುರುಗಳ ಮಾತನ್ನು ಧಿಕ್ಕರಿಸಿದೆ, ಆದರೆ ಅವರನ್ನು ದ್ವೇಷಿಸಲಿಲ್ಲ

ನಮ್ಮ ತಂದೆ ಪೋರ್‌ಬಂದರನ್ನು ಬಿಟ್ಟು ರಾಜ ಕೋಬಿಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ, ನನಗೆ ಕೇವಲ ಏಳು ವರ್ಷಗಳು. ಅಲ್ಲಿ…

5 hours ago

ರಾಷ್ಟ್ರಪಿತನ ‘ಸತ್ಯಾನ್ವೇಷಣೆ’ಗೆ ನೂರು ವರುಷ

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಭಾಗಿತ್ವದಲಿ ಎಳೆಯ ಮಕಳ ಅಂಗಳಕೆ…

5 hours ago