Andolana originals

ರಾಷ್ಟ್ರಪಿತನ ‘ಸತ್ಯಾನ್ವೇಷಣೆ’ಗೆ ನೂರು ವರುಷ

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ

ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಭಾಗಿತ್ವದಲಿ ಎಳೆಯ ಮಕಳ ಅಂಗಳಕೆ ಗಾಂಧಿ ಚಿಂತನೆಯ ಪರಿಚಯ

ಭಾರತದ ಐತಿಹಾಸಿಕ ಆಂದೋಲನ ‘ಸ್ವಾತಂತ್ರ್ಯದ ಚಳವಳಿ’ಯಲ್ಲಿ ಸಹಸ್ರ ಸಹಸ್ರ ಹೋರಾಟಗಾರರು ತ್ಯಾಗ, ಬಲಿದಾನ ಗೈದಿದ್ದಾರೆ. ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟ ಕ್ಕಿಂತಲೂ ಭಾರತದ ಸ್ವಾತಂತ್ರ್ಯದ ಹೋರಾಟದ ಹಾದಿ ಜಗತ್ತನ್ನೇ ಬೆರಗಾಗಿಸಿತು.

ಇದಕ್ಕೆ ಕಾರಣ ಗಾಂಧೀಜಿಯವರ ಅಹಿಂಸಾ ಮಾರ್ಗದ ಚಳವಳಿ. ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಚಳವಳಿಯನ್ನು ಮುನ್ನಡೆಸಿದ ರೀತಿಗೆ ಬ್ರಿಟಿಷ್ ಸರ್ಕಾರ ನಡುಗಿ ಹೋಯಿತು ಮತ್ತು ಭಾರತವು ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವಂತಾಯಿತು. ಅಂದರೆ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸಾ ಮಾರ್ಗದ ಹೋರಾಟಕ್ಕೆ ಹಿಂಸೆಯನ್ನು ಮೆಟ್ಟಿ ನಿಲ್ಲುವ ಶಕ್ತಿಯಿತ್ತು ಎಂಬುದು ಸ್ಪಷ್ಟ. ಮಹಾತ್ಮ ಗಾಂಧೀಜಿ ಅವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ರಚನೆಯಾಗಿ ೧೦೦ ವರ್ಷಗಳು ಸಂದಿರುವ ಈ ಸಂದರ್ಭ ನಮಗೆ ಅತ್ಯಂತ ಆಪ್ಯಾಯಮಾನವಾಗಿದೆ. ಈ ಸಮಯವು ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಲು ಸಿಕ್ಕ ಸುಸಂದರ್ಭ ಎಂದು ಭಾವಿಸಬೇಕಿದೆ. ಗಾಂಧೀಜಿ ಅವರು ನಡೆದ ಸತ್ಯದ ದಾರಿ ಹಾಗೂ ಅಹಿಂಸೆಯ ಮಾರ್ಗ ಇಂದಿನ ಪೀಳಿಗೆಗೆ ದಾರಿದೀಪವಾಗ ಬೇಕಿದೆ. ಜನರಿಗೆ ಸತ್ಯದ ಅರಿವಾಗಬೇಕಿದೆ. ಅಹಿಂಸೆಯ ಮಾರ್ಗಕ್ಕೆ ಜಗತ್ತನ್ನೇ ಗೆಲ್ಲುವ ಶಕ್ತಿಯಿದೆ ಎಂಬುದನ್ನು ತಿಳಿಯಬೇಕಿದೆ. ಸಹ ಬಾಳ್ವೆ, ಸಹಿಷ್ಣುತೆ, ಜೀವಪರ ನಿಲುವುಗಳ ಮಹತ್ವ ಅರಿಯಬೇಕಿದೆ. ನಮಗೆ ಬೇಕಿರುವುದು ಹೊಡಿ ಬಡಿ ಸಂಸ್ಕೃತಿಯಲ್ಲ, ನಡೆ ನುಡಿಯ ಸಂಸ್ಕೃತಿ. ಇದನ್ನು ಈ ನಾಡಿಗೆ ತಿಳಿಯಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸಾ ಮಾರ್ಗದ ಹೋರಾಟದಿಂದ ಭಾರತದ ನೆಲೆ ಹೇಗೆ ಶಾಂತಿ ನೆಮ್ಮದಿ ಕಂಡು ಕೊಂಡಿತು ಎಂಬುದು ಇಂದಿನ ಮಕ್ಕಳ ಮನಸ್ಸಿಗೆ ನಾಟಬೇಕಿದೆ.

ಈ ಹಿನ್ನೆಲೆಯಲ್ಲಿ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಗಾಂಧೀಜಿ ಅವರ ಸತ್ಯ, ಅಹಿಂಸೆ, ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಜೀವಪರ ನಿಲುವು ಪ್ರೇರಣೆಯಾಗಬೇಕಿದೆ. ಹಾಗಾಗಿಯೇ ಮಹಾತ್ಮ ಗಾಂಧಿಜಿ ಅವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ರಚನೆಯಾಗಿ ೧೦೦ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ‘ಆಂದೋಲನ’ ದಿನ ಪತ್ರಿಕೆ ಹಾಗೂ ಬೆಂಗಳೂರಿನ ಗಾಂಧಿ ಭವನದ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ಗಾಂಧಿ ವಿಚಾರಧಾರೆ ಹಾಗೂ ಗಾಂಧಿಜಿ ಬದುಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ನಾಡಿನ ನೆಮ್ಮದಿಗೆ ಗಾಂಧಿಜಿಯ ವಿಚಾರಧಾರೆಗಳ ಅನಿವಾರ್ಯತೆ ಎಷ್ಟಿದೆ ಎಂಬುದನ್ನು ತಿಳಿಯಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇದಕ್ಕಾಗಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪೌಢಶಾಲೆಗಳಲ್ಲಿ ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನನ್ನ ಕಣ್ಣಲ್ಲಿ ಗಾಂಧಿಜಿ’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ. ಇದನ್ನು ನಿರಂತರವಾಗಿ ಮುಂದುವರಿಸುತ್ತಾ ಒಂದು ವರ್ಷ ಕಾಲ ಕನಿಷ್ಠ ೧೫೦ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆಗಳನ್ನು ನಡೆಸಿ ಗಾಂಧಿಜಿಯ ವಿಚಾರಧಾರೆಗಳನ್ನು ಪಸರಿಸಲಾಗು ತ್ತದೆ. ಅಂತಿಮವಾಗಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಕ್ವಿಜ್ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುವುದರೊಂದಿಗೆ ಅಭಿಯಾನವನ್ನು ಮುಗಿಸಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಕ್ಕಳ ಬರವಣಿಗೆಯ ತುಣುಕು, ‘ನನ್ನ ಸತ್ಯಾನ್ವೇಷಣೆ’ ಕೃತಿಯ ಆಯ್ದ ಭಾಗ, ಗಾಂಧಿಜಿಯಿಂದ ಪ್ರೇರೇಪಿತರಾಗಿ ಬದುಕನ್ನು ರೂಪಿಸಿಕೊಂಡವರ ಕಥನ ಈ ಅಭಿಯಾನದ ಮೊದಲ ಕಂತಿನ ವಿಶೇಷ ಪುಟದಲ್ಲಿದೆ.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

22 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

22 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

23 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

23 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

23 hours ago