ಕೊಪ್ಪಳ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬುಲ್ಡೋಟಾ ಸ್ಟೀಲ್ ಫ್ಯಾಕ್ಟರಿಯ ಆರಂಭದಿಂದ ಕೊಪ್ಪಳ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಇಂದು ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿದೆ.
ಇಂದು ಕೊಪ್ಪಳ ಸ್ವಯಂಪ್ರೇರಿತ ಬಂದ್‌ಗೆ ಪರಿಸರ ಸಂರಕ್ಷಣಾ ಸಮಿತಿ ಕರೆ ನೀಡಿದ್ದು, ಕೊಪ್ಪಳ ತಾಲ್ಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇಂದಿನ ಬಂದ್‌ಗೆ 130 ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಫ್ಯಾಕ್ಟರಿ ಆರಂಭ ಮಾಡದಂತೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಹೋರಾಟದಲ್ಲಿ ಸಾವಿರಾರು ಜನರು ಭಾಗಿಯಾಗುವ ಸಾಧ್ಯತೆಯಿದೆ.
ಕೊಪ್ಪಳ ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹಲವು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲೂ ಕೂಡ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಇನ್ನು ಇಂದು ಸಂಜೆಯವರೆಗೂ ಕೊಪ್ಪಳ ಬಂದ್ ಆಗಲಿದ್ದು, ಜನತೆ ವ್ಯಾಪಾರ ಮಾಡಲು ಹೊರಗೆ ಬರುವ ಮುನ್ನ ಯೋಚನೆ ಮಾಡಬೇಕಿದೆ.
ಮಂಡ್ಯ: ಜಿಲ್ಲೆಯ ಪ್ರಸಿದ್ಧ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನವೆಂಬರ್ 17ರ ರಾತ್ರಿ 7 ಗಂಟೆಗೆ ಅದ್ಧೂರಿ ರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ.…
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊನ್ನೆ ಮೈಸೂರಿಗೆ ಆಗಮಿಸಿದ್ದಾಗ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಮತ್ತೆ ಸುದ್ದಿಯಾಯಿತು. ಪ್ರಧಾನಮಂತ್ರಿಗಳ ಸಮ್ಮುಖದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಅಂದು ಒಬ್ಬ ಪ್ರತಿಭಾವಂತ ಕಲಾವಿದೆ, ಇಂದು... ಸಣ್ಣ ಸದ್ದಿನೊಂದಿಗೆ ಬಾಗಿಲು ತೆರೆದುಕೊಂಡಾಗ ಕುರ್ಚಿಯಲ್ಲಿ ಕುಳಿತು…
ಲಕ್ಷ್ಮಿಕಾಂತ್ ಕೋಮಾರಪ್ಪ ೩.೫೦ ಕೋಟಿ ರೂ. ವೆಚ್ಚದಲ್ಲಿ ಜಲಪಾತ ಅಭಿವೃದ್ಧಿಪಡಿಸಿದ್ದರೂ ಗ್ರಾಮಕ್ಕಿಲ್ಲ ರಸ್ತೆ ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ…
ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿದ ಕಟ್ಟಡ: ಆರು ತಿಂಗಳಿಂದ ಕಟ್ಟಡಕ್ಕೆ ಬೀಗ; ದುರಸ್ತಿ ಕಾರ್ಯ ಯಾವಾಗ? ಮೈಸೂರು: ತತ್ವಜ್ಞಾನಿ, ಮಾಜಿ…
ಕೆ.ಬಿ.ರಮೇಶನಾಯಕ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ೯.೫೦ ಲಕ್ಷ ಲೀಟರ್; ಈ ವರ್ಷ ೧೧ ಲಕ್ಷ ಲೀ.ಹಾಲು ಸಂಗ್ರಹ ಮೈಸೂರು:…