ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆಯಂತೆ ಇದು ಸಹ ಸಮಸ್ಯೆ ಅಂತಾ ತಿಳಿಯಬೇಕು. ಒಂದೂವರೆ ಲಕ್ಷ ಕಮರ್ಷಿಯಲ್ ಗ್ಯಾಸ್ ಬೇಕು. ಮೂರುವರೆ ಲಕ್ಷ ಗೃಹಬಳಕೆ ಸಿಲಿಂಡರ್ ಬೇಕಾಗುತ್ತದೆ. ನಾವು ಶೇ.75ರಷ್ಟು ಹೊರದೇಶದ ಮೇಲೆ ಡಿಪೆಂಡ್ ಆಗಿದ್ದೇವೆ ಎಂದು ಹೇಳಿದರು.
ಇನ್ನೆರಡು ದಿನದಲ್ಲಿ ಮುಂಬೈಗೆ ಗ್ಯಾಸ್ ಸಿಲಿಂಡರ್ ಬರಲಿದೆ. ಹಡಗು ಬರಲು ಬಿಟ್ಟಿರುವುದರಿಂದ ಸಮಸ್ಯೆ ಬಗೆಹರಿಯಲಿದೆ. ಎರಡು ದಿನದಲ್ಲಿ ಒಂದು ಹಡಗು 10 ದಿನದಲ್ಲಿ ಮತ್ತೊಂದು ಹಡಗು ಬರುತ್ತದೆ. ಜಿಲ್ಲಾಧಿಕಾರಿಗೂ ಸೂಚನೆ ನೀಡಲಾಗಿದೆ. ಇದರಲ್ಲಿ ಗೊಂದಲ ಬೇಡ. ನಾನು ಸಾರ್ವಜನಿಕರಲ್ಲೂ ಮನವಿ ಮಾಡುತ್ತೇನೆ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಗ್ಯಾಸ್ ಬುಕ್ ಮಾಡಿಕೊಳ್ಳಿ. ಹೋಟೆಲ್, ಆಸ್ಪತ್ರೆ, ಶಾಲೆಗಳಿಗೆ ಕಮರ್ಷಿಯಲ್ ಗ್ಯಾಸ್ ಬೇಕಾಗುತ್ತದೆ ಎಂದು ತಿಳಿಸಿದರು.
ಕಾಂಗೀರ ಬೋಪಣ್ಣ ಸೂಕ್ತ ತನಿಖೆಗೆ ಪರಿಸರವಾದಿಗಳ ಒತ್ತಾಯ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ವಿರಾಜಪೇಟೆ: ಅಚ್ಚ ಹಸಿರಿನ ಸುಂದರ…
ದಾಸೇಗೌಡ ಮಾ.೧೯ರಿಂದ ೩ ದಿನಗಳ ಕಾಲ ಉತ್ಸವ; ಹಾಲುಗಡ, ಇಟ್ನ ಗ್ರಾಮಗಳಲ್ಲಿ ಮನೆ ಮಾಡಿದ ಸಂಭ್ರಮ ಸರಗೂರು: ಇತಿಹಾಸ ಪ್ರಸಿದ್ಧ…
ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ…
ಅಮೃತಸರ : ಪಂಜಾಬ್ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.…
ಹೊಸದಿಲ್ಲಿ : ಇರಾನ್ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿರುವ…
ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…