ರಾಜ್ಯ

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ತಲೆತಗ್ಗಿಸುವ ಘಟನೆ: ಅರಗ ಜ್ಞಾನೇಂದ್ರ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸುವ ಘಟನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತೆ ಎನ್ನುವ ಮಹಿಳೆ ಮೇಲೆ ದೌರ್ಜನ್ಯ ಆಗಿದೆ. ಇದೊಂದು ಅಮಾನುಷವಾದ ಘಟನೆ. ಸುಪ್ರೀಂಕೋರ್ಟ್‌ ಆದೇಶ ಇದೆ. ಮಹಿಳೆಯ ಬಂಧನಕ್ಕೆ ನಿಯಮ ಇದೆ. ಬಿಜೆಪಿ ಕಾರ್ಯಕರ್ತೆಯನ್ನು ಟೆರರಿಸ್ಟ್‌, ದರೋಡೆಕೋರರನ್ನು ಬಂಧನ ಮಾಡುವ ರೀತಿ ಬಂಧನ ಆಗಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಕಾರ್ಪೋರೇಟರ್‌ ಸ್ಟೇಷನ್‌ಗೆ ಹೋಗಿದ್ದಾರೆ. ಇದೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ. ಇದೆಲ್ಲವೂ ಸಂಶಯಾಸ್ಪದವಾಗಿದೆ. ಈ ಸರ್ಕಾರ ಬಂದ ಮೇಲೆ ಇಂತಹ ದೌರ್ಜನ್ಯ ಪ್ರಕರಣಗಳು ಜಾಸ್ತಿ ಆಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಡಿಕೇರಿ ನಗರದ ಅನಧಿಕೃತ ಹೋಂಸ್ಟೇಗಳಿಗೆ ನೋಟಿಸ್

ಪುನೀತ್ ಮಡಿಕೇರಿ ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಮತ್ತು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ನಗರದ ಹೋಂಸ್ಟೇಗಳಿಗೆ…

2 mins ago

ಮಿರ್ಲೆ: ಹುಣಸಮ್ಮ ತಾಯಿ ಸಿಡಿ ಉತ್ಸವಕ್ಕೆ ಸಕಲ ಸಿದ್ಧತೆ

ಕೆ.ಟಿ.ಮೋಹನ್ ಕುಮಾರ್ ಫೆ.೨೭ರಂದು ನವಗ್ರಾಮದೇವತೆ ಹುಣಸಮ್ಮತಾಯಿ ಸಿಡಿ ಉತ್ಸವ, ೨೮ರಂದು ರಥೋತ್ಸವ ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ…

6 mins ago

ಮೊಬೈಲ್ ವ್ಯಸನ; ಕೊರೊನಾ ಸಂದರ್ಭ ಮೂಲ ಕಾರಣ

ಕೆ.ಎಸ್.ಚಂದ್ರಶೇಖರಮೂರ್ತಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಚಿಂತನೆಗೆ ಶಿಕ್ಷಕ ವೃಂದ ಸ್ವಾಗತ  ಮೈಸೂರು: ಆಧುನಿಕತೆ ಬೆಳೆಯುತ್ತಾ ಹೋದಂತೆ ಆಧುನಿಕ ತಂತ್ರಜನ…

10 mins ago

‘ಮೈಸೂರು ಮತ್ತೆ ಸ್ವಚ್ಛ ನಗರಿ ಗರಿ ಧರಿಸಬೇಕು’

ಪ್ರಶಾಂತ್ ಎನ್.ಮಲ್ಲಿಕ್ ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್…

42 mins ago

ಸಫಾರಿ ಕಾಡಿನ ನಾಶಕ್ಕೆ ರಹದಾರಿ: ರೈತರ ಆರೋಪ

ಗಿರೀಶ್ ಹುಣಸೂರು ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ …

47 mins ago