ಹುಬ್ಬಳ್ಳಿ: ಗುರುವಾರ ( ಏಪ್ರಿಲ್ 18 ) ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್‌ಗೆ ಚಾಕುವಿನಿಂದ ಇರಿದು ಕೊಂದ ಪ್ರಕರಣ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದ್ದು, ಆರೋಪಿ ಫಯಾಜ್‌ಗೆ ಗಂಭೀರ ಶಿಕ್ಷೆ ವಿಧಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ. ಒಂದೆಡೆ ಪ್ರಕರಣ ರಾಜಕೀಯ ಸ್ವರೂಪವನ್ನೂ ಸಹ ಪಡೆದುಕೊಳ್ಳುತ್ತಿದೆ.
ಆರಂಭದಲ್ಲಿ ಲವ್ ಜಿಹಾದ್, ಪ್ರೀತಿ ನಿರಾಕರಿಸಿದ್ದಕ್ಕೆ ನಡೆದ ಹತ್ಯೆ ಎಂದು ಹೇಳಲಾಗಿತ್ತಾದರೂ ಸದ್ಯ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದೆ. ಇಬ್ಬರೂ ಜತೆಗಿರುವ ಫೋಟೊಗಳು ವೈರಲ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಫಯಾಜ್ ತಂದೆ ಬಾಬಾಸಾಹೇಬ್ ಸುಬಾನಿ ಮಾತನಾಡಿ ತನ್ನ ಮಗನ ಪರ ಕ್ಷಮೆ ಕೇಳಿದ್ದರು. ಇದೀಗ ಫಯಾಜ್‌ನ ತಾಯಿ ಮುಮ್ತಾಜ್ ಮಾತನಾಡಿದ್ದು, ಮಗ ಮಾಡಿರುವ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ ಹಾಗೂ ನೇಹಾ ತನ್ನ ಮಗನಿಗೆ ಪ್ರೇಮ ನಿವೇದನೆ ಮಾಡಿದ್ದ ವಿಚಾರವನ್ನೂ ಸಹ ಹಂಚಿಕೊಂಡಿದ್ದಾರೆ.
ʼನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಕ್ಷಮೆ ಯಾಚಿಸುತ್ತೇನೆ. ನನ್ನ ಮಗ ಫಯಾಜ್‌ಗೆ ನೇಹಾ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಇದರ ಬಗ್ಗೆ ಹೇಳಿದಾಗ ಬೇಡ ಎಂದು ಹೇಳಿದ್ದೆ. ನೇಹಾ ಬೇರೆ ಅಲ್ಲ, ನನ್ನ ಮಗಳು ಬೇರೆ ಅಲ್ಲ. ನನ್ನ ಮಗನಿಗೆ ತಕ್ಕ ಶಿಕ್ಷೆ ಆಗಬೇಕುʼ ಎಂದು ಮುಮ್ತಾಜ್ ಹೇಳಿದರು.
ಅಲ್ಲದೇ ʼಫಯಾಜ್ ಚಿಕ್ಕ ವಯಸ್ಸಿನಿಂದಲೂ ಚೆನ್ನಾಗಿ ಓದುತ್ತಿದ್ದ. ಆತನನ್ನು ಕೆಎಎಸ್ ಅಧಿಕಾರಿ ಮಾಡುವ ಕನಸು ಕಂಡಿದ್ದೆ. ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆ ಹುಡುಗಿ. ಫಯಾಜ್ – ನೇಹಾ ಮದುವೆಯಾಗಬೇಕು ಎಂದುಕೊಂಡಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕುʼ ಎಂದೂ ಸಹ ಮುಮ್ತಾಜ್ ಹೇಳಿಕೊಂಡರು.
ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…
ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…
ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…
ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…