Andolana originals

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ

ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ

ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ ಹೊಣೆ. ಆದರೆ ಬೆಳಗಾದರೆ ಪೌರಕಾರ್ಮಿಕರು ಬೀದಿಗೆ ಇಳಿದು, ಮನೆ ಮನೆಗಳಿಂದ ಕಸವನ್ನು ಶೇಖರಿಸಿ, ತಮ್ಮ ಕೈಯಾರ ಹಸಿ ಕಸ, ಒಣ ಕಸದ ವಿಭಜನೆ ಮಾಡಿ, ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಿ, ಅದರ ಮುಂದಿನ ಸಂಸ್ಕರಣೆಗೆ ಸಹಾಯ ಮಾಡುತ್ತಿದ್ದಾರೆ. ದಿನ ನಿತ್ಯ ಈ ನಿಸ್ವಾರ್ಥಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳು ಎಷ್ಟೇ ಇದ್ದರೂ ನಿರಂತರವಾಗಿ ಜನರ ಮತ್ತು ನಗರದ ಸೌಂದರ್ಯ ಮತ್ತು ಪರಿಸರದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಇವರನ್ನು ಗೌರವಿಸುವುದು ನಮ್ಮ ಕರ್ತವ್ಯ ಅನಿಸುತ್ತಿದೆ.

ಪಾಲಿಕೆಯು ಪಾದರಕ್ಷೆ, ಕೈಚೀಲ, ಮಾಸ್ಕ್, ಸಮವಸ ಮುಂತಾದ ಮುಂಜಾಗ್ರತಾ ಪರಿಕರಗಳನ್ನು ಕೊಟ್ಟಿರುವುದು ಸರಿಯಷ್ಟೆ, ಆದರೆ ಪೌರ ಕಾರ್ಮಿಕರು ಹಲವಾರು ಕಾರಣಗಳಿಂದ ತಮ್ಮ ಕೈಯಾರೆ ಕಸವನ್ನು ವಿಂಗಡಿಸುವ ಪ್ರಮೇಯವನ್ನು ಎದುರಿಸುತ್ತಿದ್ದಾರೆ. ಈ ಅಭ್ಯಾಸ ಪೌರ ಕಾರ್ಮಿಕರನ್ನು ಸಾಂಕ್ರಾಮಿಕ ರೋಗ ರುಜಿನಗಳಿಗೆ ತುತ್ತಾಗುವ ಆತಂಕವನ್ನು ತರುತ್ತದೆ.

ಅವರು ಅಸಹ್ಯಪಡದೆ ಕಸದಲ್ಲಿ ಕೈ ಹಾಕಿ ಕ್ರಿಮಿಕೀಟಗಳ ಇರುವಿಕೆ ಮತ್ತು ಆ ಕಸದಲ್ಲಿರುವ ದುರ್ವಾಸನೆಯನ್ನೂ ಪರಿಗಣಿಸದೆ ತಮ್ಮ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುವ ಸಮಯದಲ್ಲಿ ಅವರಿಗೆ ಯಾವ ತರಹದ ಅನಾರೋಗ್ಯಗಳಾದರೂ ಬರಬಹುದು. ಈ ನಿಸ್ವಾರ್ಥತಾ ಸೇವೆ ಮಾಡುವವರಿಗೆ ನಾವು ಚಿರ ಋಣಿಗಳಾಗಿರಬೇಕು. ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇದೊಂದು ಗ್ಯಾರಂಟಿ ಸಲಹೆ – ಅವರುಗಳಿಗೆ ಉಚಿತವಾಗಿ ಸೋಪುಗಳನ್ನು ಒದಗಿಸಿ. ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ ಮತ್ತು ಡೆಟರ್ಜೆಂಟ್ಸ ಲಿಮಿಟೆಡ್ ಕುಂಪೆನಿಯು ಲಾಭದಾಯಕವಾಗಿ ನಡೆಯುತ್ತಿದೆ, ಇದರ ಮೈಸೂರು ಸ್ಯಾಂಡಲ್ ಸೋಪ್ ಜಗಜಹೀರವಾಗಿದೆ ಮತ್ತು ತನ್ನ ಗಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ಲಾಭದ ಪಾಲನ್ನು ನೀಡುತ್ತಿದೆ.

ಅಲ್ಲದೆ, ಈ ಸರ್ಕಾರಿ ಕುಂಪೆನಿಯು ಹಲವಾರು ಇತರೆ ಉತ್ಪನ್ನಗಳನ್ನೂ ಹೊಂದಿವೆ. ಇವುಗಳಲ್ಲಿ ಒಂದಾದ ಮೈಸೂರು ಕಾರ್ಬೋಲಿಕ್ ಹೈಜಿನಿಕ್ ಬಾತ್ ಸೋಪ್ ಹೆಚ್ಚಿನ ಸೂಕ್ಷ್ಮಜೀವಿಗಳ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಕೊಬ್ಬಿನಾಮ್ಲ ಅಂಶ ಮತ್ತು ಶಕ್ತಿಯುತವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇಂತಹ ಉತ್ಪನ್ನಗಳು ನಮ್ಮ ಬಳಿಯೇ ಇರುವುದನ್ನು ಸದುಪಯೋಗ ಗಳಿಸುವುದು ಒಳಿತು. ಆದುದರಿಂದ ತಿಂಗಳಿಗೊಮ್ಮೆ ಪ್ರತಿ ಪೌರಕಾರ್ಮಿಕರಿಗೂ ಎರಡು ಸ್ಯಾಂಡಲ್ ಸೋಪ್ ಮತ್ತು ಎರಡು ಕಾರ್ಬಾಲಿಕ್ ಸೋಪುಗಳನ್ನು ಉಚಿತವಾಗಿ ನೀಡಿದರೆ ಅನುಕೂಲವಾಗುತ್ತದೆ. ಇದಕ್ಕೆ ತಗಲುವ ಖರ್ಚು ವೆಚ್ಚವನ್ನು, ಕುಂಪೆನಿಯು ತನ್ನದೇ ಆದ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಹಣದಲ್ಲಿ ನೀಡಬಹುದು. ಪೌರಕಾರ್ಮಿಕರರಿಗಾಗಿ ಈ ಸಾಮಾಜಿಕ ಕಳಕಳಿ ಕಾರ್ಯಕ್ರಮವನ್ನು ಗ್ಯಾರಂಟಿಯಾಗಿ ರಾಜ್ಯಾದ್ಯಂತ ಪಾರದರ್ಶಿತವಾಗಿ ಹಮ್ಮಿಕೊಂಡರೆ ಒಳಿತು ಅನಿಸುತ್ತದೆ.

ಲೇಖಕರು ಪರಿಸರವಾದಿ ಮತ್ತು ಹೋರಾಟಗಾರರು, ಮೈಸೂರು

” ತಿಂಗಳಿಗೊಮ್ಮೆ ಪ್ರತಿ ಪೌರಕಾರ್ಮಿಕರಿಗೂ ಎರಡು ಸ್ಯಾಂಡಲ್ ಸೋಪ್ ಮತ್ತು ಎರಡು ಕಾರ್ಬಾಲಿಕ್ ಸೋಪುಗಳನ್ನು ಉಚಿತವಾಗಿ ನೀಡಿದರೆ ಅನುಕೂಲವಾಗುತ್ತದೆ. ಇದಕ್ಕೆ ತಗಲುವ ಖರ್ಚು ವೆಚ್ಚವನ್ನು, ಕುಂಪೆನಿಯು ತನ್ನದೇ ಆದ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಹಣದಲ್ಲಿ ನೀಡಬಹುದು”

 

 

ಆಂದೋಲನ ಡೆಸ್ಕ್

Recent Posts

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

5 mins ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

19 mins ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

28 mins ago

ಡೋರ್ನಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿತ್ಯ ಸವಾರರಿಗೆ ಕಿರಿಕಿರಿ

ಭೇರ್ಯ ಮಹೇಶ್ ವಾಹನ ದಟ್ಟಣೆ ಹೆಚ್ಚಳವಾಗಿರುವುದರಿಂದ ಮೇಲ್ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ಬೇಡಿಕೆ   ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿ ರೈಲ್ವೆ ಅಂಡರ್…

35 mins ago

21 ದಿನಗಳ ದೀಪಾಲಂಕಾರಕ್ಕೆ 2,60,920 ಯೂನಿಟ್ ಬಳಕೆ

ಕೆ.ಬಿ.ರಮೇಶನಾಯಕ ೮೦ ಆಕರ್ಷಕ ದೀಪಾಲಂಕೃತ ಪ್ರತಿಕೃತಿಗಳ ನಿರ್ಮಾಣ; ೩,೫೦೦ ಡ್ರೋನ್‌ಗಳ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಸಿದ್ಧತೆ  ಮೈಸೂರು: ನಾಡಹಬ್ಬ…

44 mins ago

ಓದುಗರ ಪತ್ರ: ಪರಿಸರಪ್ರೇಮಿಯ ಕೂಗು ಕೊನೆಗೂ ಕೇಳಲೇ ಇಲ್ಲ …

ಬೋಗಾದಿ ರಸ್ತೆಯಲ್ಲಿ ವೈಟ್ ಟೈಪಿಂಗ್ ಕಾರ್ಯ ಮುಗಿದಿದೆ. ಅದನ್ನು ಪ್ರಾರಂಭಿಸಿದ ಸಂದರ್ಭದಲ್ಲಿ, ರಸ್ತೆಯ ಎರಡೂ ಬದಿಯಲ್ಲಿ ಮರ ಬೆಳೆಸಲು ಅವಕಾಶ…

1 hour ago