ಎಡಿಟೋರಿಯಲ್

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ ಕೆಲವು ಹೊಸ ಸಂಪ್ರದಾಯಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುನ್ನುಡಿ ಬರೆದಿದ್ದಾರೆ. ಶಿವಕುಮಾರ್ ಅವರಿಗೆ ಅವರು ಮುಖ್ಯಮಂತ್ರಿಯಾದ ನಂತರ ಇದು ಮೊದಲ ದಸರಾ. ಮೈಸೂರಿನಲ್ಲಿ ಶನಿವಾರ ಅವರು ದಸರಾ ಉತ್ಸವದ ಸಿದ್ಧತೆಗಳನ್ನು ಕುರಿತು ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿ ಕೆಲವು ಸೂಚನೆಗಳನ್ನೂ ನೀಡಿದ್ದಾರೆ. ರಾಜಕೀಯಕ್ಕೆ ಅವಕಾಶವಿಲ್ಲದಂತೆ ದಸರಾ ನಡೆಸಬೇಕು, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕೆಂಬ ಅವರ ಆಶಯ ಸ್ವಾಗತಾರ್ಹವಾದುದು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮತ್ತೊಂದು ಸೂಚನೆ  ಗಮನಾರ್ಹವಾದುದು ಹಾಗೂ ಶ್ಲಾಘನೀಯವಾದದ್ದು ಕೂಡ. ಮೈಸೂರು ದಸರಾ  ಸಂದರ್ಭದಲ್ಲಿ ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕೆಂದು ಅವರು ತಾಕೀತು ಮಾಡಿರುವುದು ಪ್ರಶಂಸನೀಯವಾದ ನಡೆ. ಅಧಿಕಾರಿ ಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಫ್ಲೆಕ್ಸ್ ಹಾವಳಿಯಿಂದ ಈಗಾಗಲೇ ತತ್ತರಿಸಿರುವ ಮೈಸೂರು ನಗರಕ್ಕೆ ಸ್ವಲ್ಪವಾದರೂ ನಿರಾಳ ಎನಿಸುತ್ತದೆ.  ಪಾರಂಪರಿಕ ನಗರಿ ಮೈಸೂರಿನ ಸೌಂದರ್ಯ ಕಾಪಾಡಲು ಇದು ನೆರವಾಗುತ್ತದೆ.

ಮೈಸೂರು ದಸರಾ ಉತ್ಸವದ  ಜಂಬೂ ಸವಾರಿಯಲ್ಲಿ ಏಕತಾನತೆ ಯನ್ನು ಹೋಗಲಾಡಿಸಲು ಈ ಬಾರಿ ಕ್ರಮ ಕೈಗೊಂಡಿರುವುದು ಸೂಕ್ತಎನಿಸಿದೆ. ಹೊರರಾಜ್ಯಗಳ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳಿಗೂ ಈ ಬಾರಿ ಅವಕಾಶ ಕಲ್ಪಿಸಿರುವುದು ಮೆಚ್ಚುವಂಥದ್ದು. ವಿದೇಶ ರಾಯಭಾರಿಗಳಿಗೆ ಆಹ್ವಾನ ನೀಡಿರುವುದು ಮೈಸೂರು ದಸರಾ ಉತ್ಸವವನ್ನು ಹೊರ ದೇಶಗಳಲ್ಲಿ ಪ್ರಚಾರ ಮಾಡಲು ಮತ್ತಷ್ಟು ನೆರವಾಗುತ್ತದೆ. ಈ ಬಾರಿ ವಿಭಾಗವಾರು ಅತ್ಯುತ್ತಮ ಸ್ತಬ್ಧಚಿತ್ರಗಳು ಇರಲಿವೆ. ಕಲಾತಂಡಗಳನ್ನು ಅದೇ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತಿದೆ. ೩೧ ಜಿಗಳ ಬದಲಿಗೆ ಹದಿನೈದು ಜಿಲ್ಲೆಗಳ ಸ್ತಬ್ಧಚಿತ್ರಗಳಷ್ಟೇ ಇರಲಿದ್ದು, ಈ  ಬಾರಿ ತಮಿಳುನಾಡು,ಕೇರಳ,ಆಂಧ್ರಪ್ರ ದೇಶ, ತೆಲಂಗಾಣ ರಾಜ್ಯಗಳ ಸ್ತಬ್ಧ ಚಿತ್ರಗಳು ಭಾಗವಹಿಸುವಂತೆ ಮಾಡುವ ಮೂಲಕ ಕರ್ನಾಟಕದಲ್ಲಿ ನೆಲೆಸಿರುವ ಆಯಾ ರಾಜ್ಯಗಳ ಜನರಿಗೆ ಕಣ್ತುಂಬಿಕೊಳ್ಳುವಂತೆ ಮಾಡಲಾಗುತ್ತಿದೆ.

ಭೂಸೇನೆ, ವಾಯುಪಡೆ, ನೌಕಾಪಡೆಗಳು ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಥಸಂಚಲನ ನಡೆಸುವ ಜತೆಗೆ,ತಮ್ಮ ಸಾಧನೆಗಳನ್ನು ಬಿಂಬಿಸು ವಂತಹ ಸ್ತಬ್ಧಚಿತ್ರಗಳನ್ನೂ ಪ್ರದರ್ಶಿಸಲಿವೆ. ಇದು ಜಂಬೂಸವಾರಿಗೆ ಹೊಸ ಮೆರುಗು ನೀಡಲಿದೆ. ಅರಮನೆ ಒಳಗೆ ಗಣ್ಯರ ಸಾಲಿನಲ್ಲಿ ಕುಳಿತು ವೀಕ್ಷಣೆ ಮಾಡುತ್ತಿದ್ದ ಸ್ಯಾಂಡಲ್‌ವುಡ್ ನಟ-ನಟಿಯರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಕರ್ನಾಟಕ ಚಲನಚಿತ್ರರಂಗ ಬೆಳೆದು ಬಂದ ಹಾದಿಯ ಬಗ್ಗೆ ಸ್ತಬ್ದಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಗಮನಾರ್ಹವಾಗಿದೆ.

ದಸರೆಯ ಸಂಪೂರ್ಣ ಜವಾಬ್ದಾರಿಯನ್ನು ಮೈಸೂರು ಜಿ ಉಸ್ತುವಾರಿ ಸಚಿವರು ಹೊತ್ತುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮೈಸೂರು ಜಿ ಉಸ್ತುವಾರಿ ಸಚಿವರೊಬ್ಬರಿಗೇ ಒತ್ತಡ ಹೆಚ್ಚಾಗುವುದನ್ನು ತಡೆಯಲಾಗಿದೆ. ಪ್ರತಿದಿನ ಇಬ್ಬರು ಸಚಿವರಂತೆ ೨೨ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೆರವಾಗಲು ನಿಯೋಜಿಸಲಾಗಿದೆ. ಇದು ಉತ್ತಮ ನಿರ್ಧಾರ. ದಸರೆಯ ಸಂದರ್ಭದಲ್ಲಿ ಏನಾದರೂ ಲೋಪವಾದರೂ ತಕ್ಷಣ  ಸರಿಪಡಿಸಲು ಇದು ಸಹಾಯವಾಗಲಿದೆ.

” ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮತ್ತೊಂದು ಸೂಚನೆ ಗಮನಾರ್ಹವಾದುದು ಹಾಗೂ ಶ್ಲಾಘನೀಯವಾದದ್ದು ಕೂಡ. ಮೈಸೂರು ದಸರಾ ಸಂದರ್ಭದಲ್ಲಿ ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕೆಂದು ಅವರು ತಾಕೀತು ಮಾಡಿರುವುದು ಪ್ರಶಂಸನೀಯವಾದ ನಡೆ. ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಫ್ಲೆಕ್ಸ್ ಹಾವಳಿಯಿಂದ ಈಗಾಗಲೇ ತತ್ತರಿಸಿರುವ ಮೈಸೂರು ನಗರಕ್ಕೆ ಸ್ವಲ್ಪವಾ ದರೂ ನಿರಾಳ ಎನಿಸುತ್ತದೆ. ಪಾರಂಪರಿಕ ನಗರಿ ಮೈಸೂರಿನ ಸೌಂದರ್ಯ ಕಾಪಾಡಲು ಇದು ನೆರವಾಗುತ್ತದೆ.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

‘40 ವರ್ಷದ ಗೆಳೆತನಕ್ಕೆ ಬಿರುಕು ಸಾಧ್ಯವೇ ಇಲ್ಲ’: ಸಂಸದ ಸುನಿಲ್‌ ಬೋಸ್‌

ಮೈಸೂರು: ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮುನಿಸು ಮೂಡಿದೆ ಎಂಬ ವರದಿಗಳಿಗೆ ಸಂಸದ ಸುನಿಲ್‌ ಬೋಸ್‌ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರದ್ದು…

22 hours ago

ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಪದೇ ಪದೇ ಮಾಲಿನ್ಯ ತಪಾಸಣೆ ಮಾಡಿಸಬೇಕಿಲ್ಲ

ನವದೆಹಲಿ: ನಿಮ್ಮ ಖಾಸಗಿ ಕಾರು ಅಥವಾ ಬೈಕ್‌ ಬಿಎಸ್‌-6 ಮಾದರಿಯದ್ದೇ? ಹಾಗಿದ್ದರೆ ಮಾಲಿನ್ಯ ತಪಾಸಣೆಯ ಅವಧಿಯಲ್ಲಿ ನಿಮಗೊಂದು ಸಿಹಿಸುದ್ದಿ ಇದೆ.…

22 hours ago

ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚುವ ಸಾಧ್ಯತೆ, ವಿಜಯಪುರದಲ್ಲಿ 12.9°C ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ನವೆಂಬರ್‌ 20ರ ಹವಾಮಾನ ವರದಿ ಪ್ರಕಾರ, ರಾಜ್ಯದ ಬಯಲು ಪ್ರದೇಶಗಳ ಪೈಕಿ…

22 hours ago

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಯೂನಸ್‌ ಮನೆಗೆ ಬೆಂಕಿ, ಘರ್ಷಣೆಗಳಲ್ಲಿ ನಾಲ್ವರು ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಉದ್ವಿಗ್ನತೆ ಭುಗಿಲೆದ್ದಿದೆ. ಅವಾಮಿ ಲೀಗ್‌ ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ನಡೆದ ಘರ್ಷಣೆಗಳಲ್ಲಿ ನಾಲ್ವರು…

22 hours ago

ಒಡಿಶಾ ಕರಾವಳಿಗೆ ‘ಅಕ್ವಾನ್’ ಭೀತಿ: 1.2 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, 69 ರೈಲು ರದ್ದು

ಒಡಿಶಾ: ‘ಅಕ್ವಾನ್’ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ 1 ಲಕ್ಷ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ…

22 hours ago

ವ್ಯಕ್ತಿ ಮೇಲೆ ಕಾಡುಕೋಣ ದಾಳಿ : ಸಾವು

ಮಂಡ್ಯ : ಹಸು ಮೇಯಿಸಲು ಆರಣ್ಯದಂಚಿಗೆ ತೆರಳಿದ್ದ ವೃದ್ಧರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾ ಮ ಅವರು…

22 hours ago