ರಾಜ್ಯ

ನೇಹಾ ಕೊಲೆ ಪ್ರಕರಣ: ಫಯಾಜ್‌ ತನ್ನ ತಂದೆಯನ್ನೇ ಕೊಲ್ಲಲು ಯತ್ನಿಸಿದ್ದ; ನೇಹಾ ತಂದೆ ಆರೋಪ

ಹುಬ್ಬಳ್ಳಿ: ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್‌ಗೆ ಚಾಕುವಿನಿಂದ ಇರಿದು ಕೊಂದ ಪ್ರಕರಣ ಸದ್ಯ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಆರೋಪಿ ಫಯಾಜ್‌ಗೆ ಗಂಭೀರ ಶಿಕ್ಷೆ ವಿಧಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ.

ನೇಹಾ ಹಿರೇಮಠ್ ತಂದೆ ನಿರಂಜನ್‌ ಹಿರೇಮಠ್‌ ಮಾಧ್ಯಮದವರ ಜತೆ ಮಾತನಾಡಿ ಫಯಾಜ್‌ ಈ ಹಿಂದೆಯೂ ಕೊಲೆ ಯತ್ನ ಮಾಡಿದ್ದ, ತನ್ನ ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಫಯಾಜ್‌ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನ್ನ ತಂದೆಯನ್ನೇ ಕೊಲ್ಲಲು ಯತ್ನಿಸಿದ್ದ ಎಂಬ ವಿಚಾರ ತಿಳಿದುಬಂದಿದೆ. ಈ ವಿಚಾರ ಹಾಗೂ ನೇಹಾಳನ್ನು ಪ್ರೀತಿಸುತ್ತಿದ್ದ ಎಂಬ ವಿಚಾರವನ್ನು ಮೊದಲೇ ತಿಳಿಸಬಹುದಿತ್ತಲ್ಲವೇ? ಒಂದು ವೇಳೆ ಈ ವಿಚಾರವನ್ನು ಮೊದಲೇ ತಿಳಿಸಿದ್ದರೆ ನಾವು ಎಚ್ಚೆತ್ತುಕೊಂಡು ಮಗಳನ್ನು ರಕ್ಷಣೆ ಮಾಡುತ್ತಿದ್ದೆವಲ್ಲವೇ? ಅದರ ಬದಲು ಈಗ ಕ್ಷಮೆ ಕೇಳುತ್ತಿದ್ದೇನೆ ಎಂದರೆ ಏನು ಪ್ರಯೋಜನ ಎಂದು ನಿರಂಜನ್‌ ಹಿರೇಮಠ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಯಾಜ್‌ ಹಲ್ಲೆ ಮಾಡಿದ ಹಾಗೂ ಕೊಲೆ ಯತ್ನ ಮಾಡಿದ್ದ ವಿಚಾರವಾಗಿ ಆತನ ತಂದೆಯೇ ಪೊಲೀಸರ ಮೊರೆ ಹೋಗಿದ್ದರು. ಆತನನ್ನು ಠಾಣೆಗೆ ಕರೆಸಿದ್ದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಟ್ಟಿದ್ದರು. ಇದರ ಬದಲು ಆಗಲೇ ಆತನ ವಿರುದ್ಧ ಕ್ರಮ ಕೈಗೊಂಡಿದ್ದರೆ ಆತ ಇಷ್ಟು ಮುಂದುವರೆಯುತ್ತಿದ್ದನೇ? ಅಥವಾ ನಮಗಾದರೂ ಮಾಹಿತಿ ನೀಡಿದ್ದರೆ ನಾವೇ ಮುನ್ನೆಚ್ಚರಿಕೆ ವಹಿಸುತ್ತಿದ್ದೆವಲ್ಲವೇ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ ನೇಹಾ ತಂದೆ ನಿರಂಜನ್‌ ಹಿರೇಮಠ್.‌

ಇನ್ನು ಮುಂದುವರಿದು ಮಾತನಾಡಿದ ನಿರಂಜನ್‌ ಕೇವಲ ಕ್ಷಮೆ ಕೇಳುವುದರಿಂದ ಏನು ಪ್ರಯೋಜನವಿಲ್ಲ, ಆತನನ್ನು ಜಾಮೀನು ಕೊಡಿಸಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿ ಬರ್ಬರವಾಗಿ ಕೊಲೆ ಮಾಡಿ. ಇಲ್ಲವಾದರೆ ನೇಣಿಗೇರಿಸಿ. ಆಗ ಮಾತ್ರ ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ, ಅದನ್ನು ಬಿಟ್ಟು ಕ್ಷಮೆ ಎಂದರೆ ಏನೂ ಉಪಯೋಗವಿಲ್ಲ ಎಂದು ಹಿರೇಮಠ ಕಿಡಿಕಾರಿದರು.

ಶ್ರೀನಿವಾಸ ಎ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಡಿ ಬನುಮಯ್ಯ ಕಾಲೇಜಿನಲ್ಲಿ ಪದವಿ ಮುಗಿಸಿದ ನಾನು ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಒನ್‌ಇಂಡಿಯಾ ಕನ್ನಡದಲ್ಲಿ ಸೋಷಿಯಲ್‌ ಮೀಡಿಯಾ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಆರಂಭಿಸಿ ಮೈಖೇಲ್‌ ಕನ್ನಡ ಹಾಗೂ ಕನ್ನಡ ಫಿಲ್ಮಿಬೀಟ್‌ನಲ್ಲಿ ಮೂರು ವರ್ಷಗಳ ಕಾಲ ಸಬ್‌ಎಡಿಟರ್‌ ಆಗಿ ಕೆಲಸ ನಿರ್ವಹಿಸಿದ್ದೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯ ಡಿಜಿಟಲ್‌ ಟೀಮ್‌ ಲೀಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳಾಗಿದ್ದು, ಪ್ರವಾಸ ಮತ್ತು ಫೋಟೋಗ್ರಫಿ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

2 hours ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

2 hours ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

2 hours ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

2 hours ago

ಪೋಕ್ಸೋ ಪ್ರಕರಣ: ಬೇಕು ಮಕ್ಕಳ ಸ್ನೇಹಿ ವಾತಾವರಣ

ಒಡನಾಡಿ ಸ್ಟ್ಯಾನ್ಲಿ ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು…

2 hours ago

ಮೋದಿ ಮುಂದೆ ಮೌನ ಮುರಿದ ಚಿರಾಗ್ ಚೀರಾಟ!

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಬಿಜೆಪಿಯವರನ್ನೂ ನಾಚಿಸುವಂತೆ ಕಟ್ಟಾ ಧಾರ್ಮಿಕ ಭಕ್ತನಂತೆ ಕಾಣುವ ವ್ಯಕ್ತಿತ್ವ ಪ್ರಧಾನಿ…

2 hours ago