ರಾಜ್ಯ

ಧರ್ಮಸ್ಥಳದಲ್ಲಿ ಕೊಲೆ, ಅತ್ಯಾಚಾರ : ಎಸ್‌ಐಟಿ ರಚನೆಗೆ ಹೆಚ್ಚಿದ ಒತ್ತಾಯ

ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ಸರಿಯಾದ ರೀತಿ ತನಿಖೆ ನಡೆಯುತ್ತಿಲ್ಲ. ಸಾಕ್ಷಿ, ಪಿರ್ಯಾದುದಾರರ ಹೇಳಿಕೆ ಲೀಕ್ ಆಗ್ತಾ ಇದೆ. ಫಿರ್ಯಾದುದಾರ ಸಾಕ್ಷಿಗೆ ರಾಜ್ಯ ಸರ್ಕಾರ ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡ ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಪ್ರಕರಣ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿಲ್ಲ, ಕೂಡಲೇ ಸರ್ಕಾರ ಪ್ರಮಾಣಿಕ ಅಧಿಕಾರಿಗಳ ಒಳಗೊಂಡ ಎಸ್‌ಐಟಿ ರಚನೆ ಮಾಡಬೇಕು ಎಸ್‌ಐಟಿ ತನಿಖೆಯನ್ನು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮಾಡಬೇಕೆಂದು ಮನವಿ ಮಾಡಿದರು.

ಸಾಕ್ಷಿ, ಪಿರ್ಯಾದುದಾರರ ಬಳಿ ಸಾಕ್ಷಿಗಳು ಇವೆ. ಮೂರು ವಾರವಾದರೂ ಸಾಕ್ಷಿ ಪಿರ್ಯಾದುದಾರ ಹೇಳಿಕೆ ಪಡೆದು ಸರಿಯಾಗಿ ತನಿಖೆ ಮಾಡುತ್ತಿಲ್ಲ. ಇದರ ಹಿಂದೆ ಕಾಣದ ಶಕ್ತಿಗಳು ಇವೆ ಎಂದು ಆರೋಪಿಸಿದರು.

ಧರ್ಮಸ್ಥಳಕ್ಕೆ ಕೋಟ್ಯಾಂತರ ಭಕ್ತರು ಹೋಗುತ್ತಾ ಇದ್ದಾರೆ. ಹತ್ಯೆಗಳು ನಡೆದಿದೆ ಎಂದು ಒಬ್ಬ ಹೇಳುವಾಗ ತೀರ ಮಂದಗತಿ ಕಾರ್ಯ ಸೂಕ್ತ ಅಲ್ಲ. ಸರ್ಕಾರವನ್ನು ಸರಿಯಾದ ರೀತಿ ತೆಗೆದುಕೊಂಡು ಹೋಗುವ ಕೆಲಸ ಮಾಧ್ಯಮ ಮಾಡಬೇಕಿದೆ. ಈ ಪ್ರಕರಣವನ್ನು ಮುಂದೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ, ತಪ್ಪಿತಸ್ಥರನ್ನು ಹುಡುಕಿ ಸತ್ಯಶೋಧನೆ ಮಾಡಬೇಕಿದೆ ಎಂದರು.

ಸತ್ಯಶೋಧನೆ ಮಾಡಬೇಕಿದೆ
ನಾನೊಬ್ಬ ನಿವೃತ್ತ ನ್ಯಾಯಮೂರ್ತಿ ಆಗಿ ಈ ಅನ್ಯಾಯ ನೋಡಿ ಪ್ರತಿಕ್ರಿಯಿಸಿದ್ದೇನೆ. ಕಾನೂನಿನ ಅನ್ವಯ ಸತ್ಯ ಶೋಧನೆ ಮಾಡಬೇಕಿದೆ. 100 ಮೃತ ದೇಹಗಳ ಹೂತು ಹಾಕಲಾಗಿದೆ ಎಂಬ ಮಾಹಿತಿ ಇದೆ. ಸಾಕ್ಷಿ ಪಿರ್ಯಾದುದಾರನಿಗೂ ಒತ್ತಡ ಹಾಕಲಾಗುತ್ತಿದೆ ಎಂದು ಅವನೇ ಹೇಳುತ್ತಾ ಇದ್ದಾನೆ. ಹೀಗಾಗಿ ಸಾಕ್ಷಿ ಪಿರ್ಯಾದುದಾರರನಿಗೆ ಭದ್ರತೆ ನೀಡಬೇಕು. ಈತನಿಗೆ ಏನಾದರೂ ಆದರೆ ಡಿಜಿಪಿ, ಗೃಹಸಚಿವರು ಕಾರಣ ಆಗುತ್ತಾರೆ ಎಂದರು.

ವಕೀಲರಿಗೂ ಬೆದರಿಕೆ
ಸಾಕ್ಷಿ ಪರವಾಗಿ ನಿಂತ ವಕೀಲರಿಗೂ ಬೆದರಿಕೆ ಹಾಕುತ್ತಾ ಇದ್ದಾರೆ. ಸಾಕ್ಷಿ, ವಕೀಲರಿಗೆ ತೊಂದರೆ ಆದರೆ ಡಿಜಿಪಿ, ಗೃಹಸಚಿವರು ಕಾರಣ ಆಗ್ತಾರೆ. ಸುದ್ದಿಗಳಿಗೆ ಪ್ರತಿಭಂದಕಾಜ್ಞೆ ಏಕೆ ತರುತ್ತಾ ಇದ್ದರೆ ಎಂದು ಗೊತ್ತಾಗುತ್ತಿಲ್ಲ. ಯಾರು ತರ್ತಾ ಇದ್ದಾರೆ ಅನ್ನೋದು ಮುಖ್ಯ ವಿಚಾರ. ಮೂಲಭೂತ ಹಕ್ಕನ್ನ ಕಿತ್ತುಕೊಳ್ಳುವ ಕೆಲಸ ಮಾಡಬಾರದು. ವಾಕ್ ಸ್ವಾತಂತ್ರ್ಯ ಮಿತಿಮೀರಿದಾಗ ಮಾತ್ರ ಪ್ರತಿಬಂಧ ಹೇರಬಹುದು. ಸಾಕ್ಷಿ ಪಿರ್ಯಾದುದಾರ ಹೇಳುವ ಹೇಳಿಕೆ ಸುದ್ದಿ ಮಾಡುವುದನ್ನು ನಿರ್ಬಂಧ ಹೇರಬಾರದು. ಪತ್ರಿಕಾ ಸ್ವಾತಂತ್ರ್ಯಕ್ಕೆ ತೊಂದರೆ ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

367 ಸಂತ್ರಸ್ತೆಯರು
ಧರ್ಮಸ್ಥಳದಲ್ಲಿ 367 ಬಾಲಕಿಯರು ಮತ್ತು ಯುವತಿಯರು ಅಪರಿಚಿತ ಶವಗಳಾಗಿ ಪತ್ತೆಯಾಗಿದ್ದಾರೆ. ಪತ್ತೆಯಾಗದ ಶವಗಳೂ ಇನ್ನೂ ಇರುವ ಶಂಕೆಯಿದೆ. ಅವರೆಲ್ಲರಿಗೂ ನ್ಯಾಯ ಸಿಗಬೇಕಾದರೆ ತನಿಖೆ ನಡೆಯಬೇಕು ಎಂದು ವಕೀಲ ಎಸ್.ಬಾಲನ್‌ ಒತ್ತಾಯಿಸಿದರು.

 

 

ಆಂದೋಲನ ಡೆಸ್ಕ್

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

3 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

4 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

4 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

4 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

4 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

5 hours ago