ರಾಜ್ಯ

ಶವದ ಜೊತೆ ನಾಲ್ಕು ದಿನ ಕಳೆದ ಬುದ್ಧಿಮಾಂದ್ಯ ಪುತ್ರಿ, ಕುಂದಾಪುರದಲ್ಲಿ ಮನಕಲಕುವ ಘಟನೆ

ಉಡುಪಿ: ಮದುಮೇಹ ರಕ್ತದೊತ್ತಡದಿಂದ ಬಳಲುತ್ತಿದ್ದ ತಾಯಿ ಮೃತಪಟ್ಟಿದ್ದಾರೆ. ಇದನ್ನ ಅರಿಯದ ಬುದ್ಧಿಮಾಂದ್ಯ ಪುತ್ರಿ, ಜನ್ಮದಾತೆಯ ಶವದ ಜೊತೆ ನಾಲ್ಕು ದಿನ ದೂಡಿ ಸಾವನ್ನಪ್ಪಿದ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ನಿವಾಸಿ ತಾಯಿ ಜಯಂತಿ ಶೆಟ್ಟಿ(62) ಮಗಳು ಪ್ರಗತಿ ಶೆಟ್ಟಿ(32) ಮೃತಪಟ್ಟವರು. ಮನೆಯಲ್ಲಿ ತಾಯಿಯೇ ಅಡುಗೆ ಕೆಲಸ ಹಾಗೂ ಇತ್ಯಾದಿ ಮಾಡುತ್ತಿದ್ದರು. ತಾಯಿ ಮೃತಪಟ್ಟಿರುವುದು ಅರಿಯದೆ ಮಗಳು ಪ್ರಗತಿ ನಾಲ್ಕು ದಿನ ಅನ್ನ, ನೀರು ಇಲ್ಲದೆ ಕಳೆದಿದ್ದಾರೆ. ಇಂದು (ಮೇ.19) ಶವ ದುರ್ವಾಸನೆ ಬರಲು ಆರಂಭಿಸಿದೆ. ಅನುಮಾನಗೊಂಡ ಅಕ್ಕ-ಪಕ್ಕದ ಜನರು ಮನೆಯೊಳಗೆ ಬಂದು ನೋಡಿದಾಗ ಜಯಂತಿ ಶವ ಕಂಡಿದೆ. ಅಲ್ಲೇ ಪಕ್ಕದಲ್ಲಿ ಮಗಳು ಪ್ರಗತಿ ಕೂಡ ಅಸ್ವಶ್ಥಗೊಂಡು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಈ ವಿಚಾರವನ್ನು ಕುಂದಾಪುರ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತೀವ್ರ ಅಸ್ವಶ್ಥಗೊಂಡು ಬಿದ್ದಿದ್ದ ಪ್ರಗತಿ ಶೆಟ್ಟಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ, ಜಯಂತಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರಗತಿಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಬಳಿಕ ಎರಡು ಶವಗಳ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಕುಂದಾಪುರ ಪೊಲೀಸರು ಹೆಂಗವಳ್ಳಿಯಲ್ಲಿ ತಾಯಿ, ಮಗಳ ಅಂತ್ಯಸಂಸ್ಕಾರವನ್ನ ನೇರವೇರಿಸಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಟ್ರಂಪ್‌ ಮೇಲಿನ ದಾಳಿ ಇದೇ ಮೊದಲೇನಲ್ಲ ; ಈ ಹಿಂದೆಯೂ ನಡೆದಿತ್ತು ಹತ್ಯೆಗೆ ಯತ್ನ !

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ  ಮತ್ತೆ ಹತ್ಯೆಗೆ ಯತ್ನ ನಡೆದಿದೆ. ಹಿಲ್ಟನ್ ಹೋಟೆಲ್‌ನ ಘಟನೆ…

20 mins ago

ಛಡ್ಡಾ ಬಿಜೆಪಿ ಸೇರ್ಪಡೆ ; ಜೆನ್-ಝೀಗಳಿಂದ ಅನ್‌ಫಾಲೋ ಅಭಿಯಾನ

ನವದೆಹಲಿ : ರಾಜ್ಯಸಭಾ ಸಂಸದ ರಾಘವ್‌ ಛಡ್ಡಾ ಅವರು ಎಎಪಿ(ಆಮ್‌ ಆದ್ಮಿ ಪಾರ್ಟಿ) ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಸಾಮಾಜಿಕ…

34 mins ago

ಮೇ.2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ; ಹೈ ಆದೇಶದ ಬೆನ್ನಲ್ಲೇ ಸಕಲ ಸಿದ್ಧತೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಮೇ 2ರಂದು ಐಡಿಎಸ್‌ಜಿ ಫಸ್ಟ್…

49 mins ago

ಓದುಗರ ಪತ್ರ | ಸಿಇಟಿ ; ನಿಯಮಗಳಿಗೆ ತಿದ್ದುಪಡಿ ಅವಶ್ಯ

ವೃತ್ತಿ ಶಿಕ್ಷಣದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಆಗಮಿಸಿದ್ಧ ಜನಿವಾರ ಧರಿಸಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಮತ್ತೊಂದೆಡೆ ಮೂಗುಬಟ್ಟು…

2 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಸೋಲಾದದ್ದು ಮುಚ್ಚುಮರೆಯ ಕ್ಷೇತ್ರ ಪುನರ್‌ ವಿಂಗಡಣೆಗೆ

ದೆಹಲಿ ಕಣ್ಣೋಟ ಸಂಸತ್ತು ಅಂಗೀಕರಿಸಬೇಕಿದ್ದ ಸಂವಿಧಾನದ ೧೩೧ನೇ ತಿದ್ದುಪಡಿ ಮಸೂದೆ ಮಹಿಳಾ ಮೀಸಲಾತಿಯೋ ಅಥವಾ ಜನಗಣತಿಯ ನಂತರ ಲೋಕಸಭೆ ಮತ್ತು…

2 hours ago

ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ : ದಾಳಿಗೆ ಮೋದಿ ಪ್ರತಿಕ್ರಿಯೆ

ನವದೆಹಲಿ : ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಡಿನ್ನರ್ ಕಾರ್ಯಕ್ರದಲ್ಲಿ ಗುಂಡಿನ ದಾಳಿ ನಡೆದ ಘಟನೆ ಕುರಿತು…

2 hours ago