ಓದುಗರ ಪತ್ರ

ಓದುಗರ ಪತ್ರ | ಸಿಇಟಿ ; ನಿಯಮಗಳಿಗೆ ತಿದ್ದುಪಡಿ ಅವಶ್ಯ

ವೃತ್ತಿ ಶಿಕ್ಷಣದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಆಗಮಿಸಿದ್ಧ ಜನಿವಾರ ಧರಿಸಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಮತ್ತೊಂದೆಡೆ ಮೂಗುಬಟ್ಟು ಧರಿಸಿದ ವಿದ್ಯಾರ್ಥಿನಿಗೆ ಬಟ್ಟಿಗೆ ಪ್ಲಾಸ್ಟರ್ ಹಾಕಿಸಿ ಪರೀಕ್ಷೆ ಬರೆಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ವಿದ್ಯಾರ್ಥಿಗಳು, ಜನಿವಾರದಲ್ಲಿ ಅಥವಾ ಮೂಗುಬಟ್ಟಿನಲ್ಲಿ ತಂತ್ರಾಂಶ ಇಟ್ಟು, ಪರೀಕ್ಷೆಗಳಲ್ಲಿ ನಕಲು ಮಾಡಲು ಆಗುತ್ತದೆಯೇ? ಒಂದರ್ಥದಲ್ಲಿ ಅಮೆರಿಕ ಮತ್ತು ಇಸ್ರೇಲ್ ಅನ್ನೂ ನಾವು ತಂತ್ರಜ್ಞಾನದಲ್ಲಿ ಮೀರಿಸಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತದೆ. ವಿದ್ಯಾರ್ಥಿಗಳ ತುಂಬು ತೋಳಿನ ಅಂಗಿಗಳನ್ನು ಕತ್ತರಿಸುವುದು, ಜಡೆಗೆ ಹಾಕಿರುವ ಕ್ಲಿಪ್ ತೆಗೆಸುವುದು, ಜನಿವಾರ, ಕಿವಿಯೋಲೆ ಮೂಗುಬಟ್ಟು ತೆಗೆಸುವುದು ಇವ್ಯಾವುದೂ ತರವಲ್ಲ. ಪ್ರವೇಶದ ಮೊದಲು ಕಟ್ಟುನಿಟ್ಟಾದ ದೈಹಿಕ ತಪಾಸಣೆ , ಮೆಟಲ್ ಡಿಟೆಕ್ಟರ್, ಜ್ಯಾಮರ್‌ಗಳು ಮುಂತಾದ ತಂತ್ರಜ್ಞಾನ ಬಳಸಿದರೆ, ಇಂತಹ ಅತಿರೇಕದ ಕ್ರಮಗಳ ಅಗತ್ಯವೇ ಇರುವುದಿಲ್ಲ. ಜನಿವಾರ, ಮೂಗುಬಟ್ಟು, ಕಿವಿಯೋಲೆ ಮುಂತಾದವುಗಳು ಬಹುಮಟ್ಟಿಗೆ ವೈಯಕ್ತಿಕ ನಂಬಿಕೆ, ಸಂಸ್ಕೃತಿ , ಧಾರ್ಮಿಕ ಆಚರಣೆ ಇವುಗಳೊಂದಿಗೆ ಸಂಬಂಧ ಹೊಂದಿರುವವು. ಇವನ್ನು ಪರೀಕ್ಷಾ ಕೇಂದ್ರದಲ್ಲಿ ಬಲವಂತವಾಗಿ ತೆಗೆಸುವುದರಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ಧಕ್ಕೆಯಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ, ಸುರಕ್ಷತೆ -ಗೌರವ ನಡುವೆ ಸಮತೋಲನ ಕಾಪಾಡಿಕೊಂಡು, ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ನಿಯಮ ಪರೀಕ್ಷಾ ಸಿಬ್ಬಂದಿಗೆ ಸೂಕ್ತ ಮಾರ್ಗಸೂಚಿ ಮತ್ತು ತರಬೇತಿ ನೀಡಿ, ಕೆಲವು ಅತ್ಯಂತ ಸೂಕ್ತವಾದ ಕ್ರಮಗಳಾದ ಪ್ರವೇಶಕ್ಕೂ ಮುನ್ನ ಸಮಗ್ರ ತಪಾಸಣೆ, ಸ್ಪಷ್ಟ (ವಸ್ತ್ರ ಸಂಹಿತೆ)ಹಾಗೂ ಮುಂಚಿತ ಮಾಹಿತಿ, ಅನುಮಾನಾಸ್ಪದ ಸಂದರ್ಭಗಳಲ್ಲಿ ಮಾತ್ರ ಹೆಚ್ಚುವರಿ ಪರಿಶೀಲನೆ ಜೊತೆಗೆ ಧಾರ್ಮಿಕ/ಸಾಂಸ್ಕೃತಿಕ ಚಿಹ್ನೆಗಳ ಬಗ್ಗೆ ಸಂವೇದನಾಶೀಲ ನಿಲುವು ತಳೆದು ಕೆಲವು ತಿದ್ದುಪಡಿಗಳನ್ನು ತರಬೇಕಾಗಿರುವುದು ಅವಶ್ಯ. ಬಹುಶಃ ಮುಂದಿನ ಬಾರಿಯ ಪರೀಕ್ಷೆಯಲ್ಲಿ ಸರ್ಕಾರ ಮತ್ತು ಪರೀಕ್ಷಾ ಸಂಸ್ಥೆಗಳು ಹೆಚ್ಚು ಮಾನವೀಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಅಗತ್ಯ.

-ವಿಜಯ್ ಹೆಮ್ಮಿಗೆ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

2 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

3 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

4 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

5 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

10 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

10 hours ago