ರಾಜ್ಯ

ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೊನೆಗೂ ಜೈಲಿನಲ್ಲಿ ಕೆಲಸ ಹಂಚಿಕೆಯಾಗಿದೆ. ಪ್ರಜ್ವಲ್ ರೇವಣ್ಣ ಈಗ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ.

ಜೈಲು ಲೈಬ್ರರಿಯಲ್ಲಿ ಖೈದಿಗಳಿಗೆ ಪುಸ್ತಕ ಕೊಡುವುದು ಹಾಗೂ ಯಾರಿಗೆ ಯಾವ್ಯಾವ ಪುಸ್ತಕ ಕೊಡಲಾಗಿದೆ ಎಂದು ನೋಂದಾಣಿ ಮಾಡಿಕೊಳ್ಳುವ ಕ್ಲರ್ಕ್ ಆಗಿ ಪ್ರಜ್ವಲ್ ರೇವಣ್ಣ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಒಂದು ದಿನ ಜೈಲಿನ ಲೈಬ್ರರಿಯಲ್ಲಿ ಕ್ಲರ್ಕ್ ಆಗಿ ಪ್ರಜ್ವಲ್ ರೇವಣ್ಣ ಕೆಲಸ ಮಾಡಿದ್ದಾರೆ. ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಕ್ಕೆ ಪ್ರಜ್ವಲ್ ರೇವಣ್ಣಗೆ ದಿನಕ್ಕೆ 522 ರೂಪಾಯಿ ಕೂಲಿ ಕೂಡ ಸಿಕ್ಕಿದೆ. ಪ್ರತಿನಿತ್ಯ ನೊಂದಾಣಿ ಮಾಡಿ ಕೆಲಸ ಮಾಡಿದ್ರೆ ಮಾತ್ರ ಆ ದಿನದ ಸಂಬಳ ಬರುತ್ತೆ. ಟ್ರಯಲ್ ಗೆ ಕೋರ್ಟ್ ಗೆ ಹೋಗುವುದು ಸೇರಿ ಕೆಲಸಕ್ಕೆ ಹಾಜರಾಗದಿದ್ರೆ ಹಣ ನೀಡುವುದಿಲ್ಲ. ಪುಸ್ತಕಗಳನ್ನ ಕೊಟ್ಟು ಎಂಟ್ರಿ ಮಾಡಿಕೊಳ್ಳುವ ಕೆಲಸಕ್ಕೆ ಪ್ರಜ್ವಲ್ ರೇವಣ್ಣನನ್ನು ನಿಯೋಜನೆ ಮಾಡಲಾಗಿದೆ. ಸದ್ಯ ಟ್ರಯಲ್ ಕೋರ್ಟ್ ಗೆ ಹೋಗೋದು ಹಾಗೂ ವಕೀಲರ ಜೊತೆ ಚರ್ಚೆ ಕೆಲಸಗಳಲ್ಲಿ ಪ್ರಜ್ವಲ್ ರೇವಣ್ಣ ಬ್ಯುಸಿಯಾಗಿದ್ದಾರೆ. ಹೀಗಾಗಿ ಪೂರ್ತಿಯಾಗಿ ಜೈಲು ಲೈಬ್ರರಿ ಕ್ಲರ್ಕ್ ಕೆಲಸಕ್ಕೆ ಪ್ರಜ್ವಲ್ ರೇವಣ್ಣನನ್ನು ನಿಯೋಜಿಸಿಲ್ಲ.

ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿಗಳು ಜೈಲಿನಲ್ಲಿ ಯಾವುದಾದರೊಂದು ಕೆಲಸ ಮಾಡಲೇಬೇಕು. ಖೈದಿಗಳ ಅರ್ಹತೆ, ಆಸಕ್ತಿಗೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಲಾಗುತ್ತೆ. ಪ್ರಜ್ವಲ್ ರೇವಣ್ಣ ತಾನು ಕೃಷಿ ಕೆಲಸ ಮಾಡುತ್ತೇನೆ, ಜೊತೆಗೆ ಜೈಲಿನ ಅಡ್ಮಿನಿಸ್ಟ್ರೇಟೀವ್ ಕೆಲಸ ಕೂಡ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೇ, ಅಂತಿಮವಾಗಿ ಜೈಲು ಅಧಿಕಾರಿಗಳು ಲೈಬ್ರರಿ ಕ್ಲರ್ಕ್ ಕೆಲಸವನ್ನು ಪ್ರಜ್ವಲ್ ರೇವಣ್ಣಗೆ ನೀಡಿದ್ದಾರೆ.

ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೊಟ್ಟಿರುವ ತೀರ್ಪು ಪ್ರಶ್ನಿಸಿ, ಪ್ರಜ್ವಲ್ ರೇವಣ್ಣ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಚಿಂತನೆ ನಡೆಸಿದ್ದಾರೆ.

ಆಂದೋಲನ ಡೆಸ್ಕ್

Recent Posts

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

9 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

10 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

11 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

16 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

23 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

23 hours ago