ಶಿವಮೊಗ್ಗ: ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ ಬಾಲಣ್ಣ ಆನೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅದರ ಬಲಕಿವಿಯಲ್ಲಿ ಗ್ಯಾಂಗ್ರಿನ್ ಸೋಂಕು ಉಂಟಾಗಿದೆ. ಇದರಿಂದಾಗಿ ವೈದ್ಯರು ಆನೆಯ ಕಿವಿ ಕತ್ತರಿಸಿ ತೆಗೆದು ಚಿಕಿತ್ಸೆ ನೀಡುತ್ತಿದ್ದಾರೆ.
ಗ್ಯಾಂಗ್ರಿನ್‌ನಿಂದಾಗಿ ಬಾಲಣ್ಣ ಆನೆಯ ಬಲ ಕಿವಿ ಸಂಪೂರ್ಣ ಕಪ್ಪಗಾಗಿ ಕ್ಯೂ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ಯಾಂಗ್ರಿನ್ ಸೋಂಕಿನಿಂದಾಗಿ ಕಿವಿಯ ಭಾಗವನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ.
ಇದನ್ನು ಓದಿ: ಅನಾರೋಗ್ಯಕ್ಕೀಡಾಗಿದ್ದ ಹುಲಿ ಸೆರೆ: ಚಿಕಿತ್ಸೆಗಾಗಿ ಮೈಸೂರಿನ ಮೃಗಾಲಯಕ್ಕೆ
ಈ ಹಿನ್ನೆಲೆಯಲ್ಲಿ ಆನೆಗೆ ತುರ್ತು ಚಿಕಿತ್ಸೆ ನೀಡಲು ಬೆಂಗಳೂರಿನಿಂದ ಸಕ್ರೆಬೈಲು ಆನೆ ಶಿಬಿರಕ್ಕೆ ಬಂದಿದ್ದ ಡಾ.ಬೆಟ್ಟಿಯಷ್ಟ, ಡಾ.ರಮೇಶ್ ಸೇರಿದಂತೆ ಐವರು ವೈದ್ಯರ ತಂಡ, ಆನೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಆರಂಭಿಸಿದ್ದಾರೆ.
ಬಾಲಣ್ಣ ಆನೆಗೆ ಸೋಂಕು ತೀವ್ರವಾಗಿತ್ತು. ಅಲ್ಲದೇ ಗ್ಯಾಂಗ್ರಿನ್ ಆನೆ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಆನೆಯ ಬಲಕಿವಿಯನ್ನು ಕತ್ತರಿಸಿ ತೆಗೆಯಲಾಗಿದೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…