ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ‘ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2024’ರಲ್ಲಿ ‘ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜನವರಿ 18ರಂದು ಹೈದರಾಬಾದ್‌ನಲ್ಲಿ ನಡೆದ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2024ರ ಸಮಾರಂಭದಲ್ಲಿ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ ವಿಮಾನ ನಿಲ್ದಾಣವು ’25 ಎಮ್‌ಪಿಪಿಎ ಟ್ರಾಫಿಕ್ ಪ್ರಶಸ್ತಿ’ ಯೊಂದಿಗೆ ಗುರುತಿಸಲ್ಪಟ್ಟಿದೆ.
ವಾರ್ಷಿಕವಾಗಿ 25 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಶ್ರೇಷ್ಠತೆ, ಪ್ರಯಾಣಿಕರ ಉತ್ತಮ ಅನುಭವ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಿರುವುದನ್ನು ಗಮನಿಸಿ ಈ ಪ್ರಶಸ್ತಿಗೆ ಕೆಐಎ ಆಯ್ಕೆ ಮಾಡಲಾಗಿದೆ.
ವಿಶ್ವದ ಅತಿದೊಡ್ಡ ಟರ್ಮಿನಲ್ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸಿದೆ.
ತೊಂದರೆ-ಮುಕ್ತ ಅನುಭವವನ್ನು ಸುಲಭಗೊಳಿಸಲು ಹಾಗೂ ಸುಗಮ ಮತ್ತು ಒತ್ತಡ ಮುಕ್ತ ಪ್ರಯಾಣದ ಅನುಭವ ನೀಡಲು ವಿಮಾನ ನಿಲ್ದಾಣ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಮಾಹಿತಿ ಪ್ರದರ್ಶನ ಫಲಕಗಳನ್ನು ಹೆಚ್ಚಾಗಿ ಅಳವಡಿಸಲಾಗಿದೆ. ಚೆಕ್-ಇನ್-ಕೌಂಟರ್‌ಗಳು ಮತ್ತು ತಿಳಿವಳಿಕೆ ಪ್ರದರ್ಶನ ಫಲಕಗಳನ್ನು ಒಳಗೊಂಡಂತೆ ಪ್ರಗತಿಯನ್ನು ಸಾಧಿಸಿದೆ.
ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಟರ್ಮಿನಲ್ 1ನಿಂದ ಟರ್ಮಿನಲ್ 2ಗೆ ಸ್ಥಳಾಂತರಿಸಲಾಗಿದೆ.
ಪ್ರಯಾಣಿಕರು ಹೆಚ್ಚುವರಿಯಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಕೌಂಟರ್‌ಗಳ ಸಂಖ್ಯೆಯನ್ನು ವಿಸ್ತರಿಸಲಾಗಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟ ಏರ್‌ಪೋರ್ಟ್ ಕಾರ್ಬನ್ ಮಾನ್ಯತೆ ಕಾರ್ಯಕ್ರಮದ ಅಡಿಯಲ್ಲಿ ವಿಮಾನ ನಿಲ್ದಾಣವು ಹಂತ 4+ ಪರಿವರ್ತನೆಯ ಸ್ಥಿತಿಯನ್ನು ಹೊಂದಿದೆ.
ನಿಲ್ದಾಣದಲ್ಲಿ ಉತ್ತಮ ಪರಿಸರ ಕಾಪಾಡಿಕೊಳ್ಳುವ ಜತೆಗೆ ಸುಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ನಿಲ್ದಾಣದ ಒಳಗಡೆ ಮತ್ತು ಹೊರಗಡೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ವಿಮಾನ ನಿಲ್ದಾಣವು ಡಿಜಿ ಯಾತ್ರಾ ಮುಖ ಗುರುತಿಸುವಿಕೆ, ಬಿಎಲ್‌ಆರ್ ಪಲ್ಸ್ ಅಪ್ಲಿಕೇಶನ್ ಮತ್ತು ಸ್ವಯಂ-ಬ್ಯಾಗೇಜ್ ಡ್ರಾಪ್ ಸಿಸ್ಟಮ್‌ಗಳಂತಹ ಟೆಕ್-ಸಕ್ರಿಯಗೊಳಿಸಿದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಅಕ್ಟೋಬರ್ 2023ರಲ್ಲಿ, ವಿಮಾನ ನಿಲ್ದಾಣವು ಸತತ ಮೂರು ತಿಂಗಳುಗಳ ಕಾಲ ವಿಶ್ವದ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿತು.
ಕಾರ್ಯಾಚರಣೆಯ ಶ್ರೇಷ್ಠತೆಗೆ ಅದರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಟರ್ಮಿನಲ್ 2 ದೇಶದ ಶ್ರೀಮಂತ ಸಂಸ್ಕ್ರತಿ, ಪರಂಪರೆ ಬಿಂಬಿಸುವ ನಾನಾ ರೂಪದ 60 ಕಲಾಕೃತಿ ಪರದರ್ಶಿಸಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ 5 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ…
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…