Rally of Chikkamagaluru
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ನಡೆದ 2025ರ ರ‍್ಯಾಲಿ ಆಫ್ ಚಿಕ್ಕಮಗಳೂರು INTSDRC-1ರಲ್ಲಿ ಎನ್.ಮಹೇಶ್ವರನ್ ಮತ್ತು ಸಹ-ಚಾಲಕ ಪ್ರಕಾಶ್ ಮುತ್ತುಸಾಮಿ ಅವರು ಅಸಾಧಾರಣ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು.
ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ ಕ್ಲಬ್ಸ್ ಆಫ್ ಇಂಡಿಯಾ (FMSCI) ಆಯೋಜಿಸಿದ ಭಾರತೀಯ ನ್ಯಾಷನಲ್ ಟೈಮ್ ಸ್ಪೀಡ್ ಡಿಸ್ಟನ್ಸ್ ರ‍್ಯಾಲಿ ಚಾಂಪಿಯನ್‌ಶಿಪ್ (4W) 2025ರ ಮೊದಲ ಅರ್ಹತಾ ಸುತ್ತಾಗಿ ಈ ರ್ಯಾಲಿ ನಡೆಯಿತು. ಒಟ್ಟು ಎಂಟು ವಿಭಾಗಗಳಲ್ಲಿ 130ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ ಈ ಸುತ್ತು, ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಗರಿಷ್ಠ ಭಾಗವಹಿಸುವಿಕೆಯನ್ನು ದಾಖಲಿಸಿದೆ.
ಇತರ ವಿಭಾಗಗಳ ವಿಜೇತರಲ್ಲಿ ಎ.ವಿನೋದ್ (INTSDRC-2), ಅಪರ್ಣಾ ಪಠಕ್ (ಮಹಿಳಾ ಮತ್ತು ಕರ್ನಾಟಕ ರಾಜ್ಯ ವಿಭಾಗಗಳು), ವಿನಯ್ ಪ್ರಸನ್ನ (ಪ್ರೋ ಸ್ಟಾಕ್), ಭವಾನಿ ಬಾಲಕೃಷ್ಣನ್ (ಕಪಲ್ ಮತ್ತು ಸೂಪರ್ ಕಾರ್ ವಿಭಾಗಗಳು) ಸೇರಿದ್ದರು.
INTSDRC-1 ವಿಭಾಗದಲ್ಲಿ, ಮಹೇಶ್ವರನ್ ಎನ್ ಮತ್ತು ಪ್ರಕಾಶ್ ಮುತ್ತುಸ್ವಾಮಿ ಪ್ರಥಮ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿದ್ದ ತಂಡಕ್ಕಿಂತ ಸುಮಾರು ಒಂದು ನಿಮಿಷ ಮುನ್ನಡೆಯಿದ್ದರು. ಸಂತೋಷ್ ಕುಮಾರ್ ವಿ ಮತ್ತು ಟಿ. ನಾಗರಾಜನ್ ಎರಡನೇ ಸ್ಥಾನದಲ್ಲಿದ್ದು, ಗಣೇಶ್ ಮೂರ್ತಿ ಮತ್ತು ಚಂದ್ರಶೇಖರ್ ಮೂರನೇ ಸ್ಥಾನ ಪಡೆದರು.
INTSDRC-2 ವಿಭಾಗದಲ್ಲಿ, ಎ.ವಿನೋದ್ ಮತ್ತು ಎನ್.ಮುರುಗನ್ ಮೊದಲ ಸ್ಥಾನ ಪಡೆದರೆ, ಮಂಜು ಜೈನ್ ಮತ್ತು ಡಿಂಕಿ ವರ್ಗೀಸ್ ಎರಡನೇ ಸ್ಥಾನ ಹಾಗೂ ರಾಹೀಲ್ ಅಹ್ಮದ್ ಮತ್ತು ಸಕಾಯನ ಕುಮಾರ್ ಮೂರನೇ ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ, ಅಪರ್ಣಾ ಪಠಕ್ ಮತ್ತು ಲಲಿತಾ ಗೌಡ ತಂಡ ಒಂದು ಗಂಟೆಗೂ ಹೆಚ್ಚು ಮುನ್ನಡೆಯೊಂದಿಗೆ ಗೆಲುವು ಸಾಧಿಸಿತು. ಕ್ಷಮತಾ ಮತ್ತು ಅಮ್ಮೋಲ್ ತಂಡ ಎರಡನೇ ಸ್ಥಾನ ಪಡೆದರೆ, ವನ್ಹ್ರೀ ಪಠಕ್ ಮತ್ತು ರಾಮುಚಂದ್ರ ಮೂರನೇ ಸ್ಥಾನ ಪಡೆದರು.
ಪ್ರೋ ಸ್ಟಾಕ್ ವಿಭಾಗದಲ್ಲಿ, ವಿನಯ್ ಪ್ರಸನ್ನ ಮತ್ತು ಆದಿ ಆಂಥನಿ ಮೊದಲ ಸ್ಥಾನದಲ್ಲಿದ್ದರು. ಡಿ ಕೀರ್ತಿ ಪ್ರಸಾದ್ ಮತ್ತು ಸಿ ಸಖ್ತಿವೇಲ್ ಎರಡನೇ ಸ್ಥಾನ, ವಿನಯ್ ಕುಮಾರ್ ಎಂ ಮತ್ತು ವೈ ಅರುಣ್ ಮೂರನೇ ಸ್ಥಾನ ಪಡೆದರು.
ಕಪಲ್ ವಿಭಾಗದಲ್ಲಿ, ಭವಾನಿ ಬಾಲಕೃಷ್ಣನ್ ಮತ್ತು ಆನಂದರಾಜ್ ಎಸ್ 6 ನಿಮಿಷಗಳ ಮುನ್ನಡೆಯೊಂದಿಗೆ ಜಯ ಸಾಧಿಸಿದರು. ಶ್ರುತಾ ಜಯಂತ್ ಮತ್ತು ಜಯಂತ್ ಎಂ ಜೈನ್ ಎರಡನೇ ಸ್ಥಾನ, ರಾವಮಿ ಮಾಬೆಲ್ ಮತ್ತು ವಿನೋತ್ ಕುಮಾರ್ ಮೂರನೇ ಸ್ಥಾನ ಪಡೆದರು.
ಸೂಪರ್ ಕಾರ್ ವಿಭಾಗದಲ್ಲೂ, ಭವಾನಿ ಬಾಲಕೃಷ್ಣನ್ ಮತ್ತು ಆನಂದರಾಜ್ ಎಸ್ ಮೊದಲ ಸ್ಥಾನ ಪಡೆದರೆ, ಕರ್ನಾಟಕ ರಾಜ್ಯ ವಿಭಾಗದಲ್ಲಿ ಅಪರ್ಣಾ ಪಠಕ್ ಮತ್ತು ಲಲಿತಾ ಗೌಡ ಮೊದಲ ಸ್ಥಾನ ಪಡೆದರು. ನಾನ್ಲು ಜಾನ್ ಮತ್ತು ಡಿಂಕಿ ವರ್ಗೀಸ್ ದ್ವಿತೀಯ ಸ್ಥಾನ ಹಾಗೂ ರಾಹೀಲ್ ಅಹ್ಮದ್ ಮತ್ತು ಸರವಣ ಕುಮಾರ್ ತೃತೀಯ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.
ಚಿಕ್ಕಮಗಳೂರಿನ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (MSCC) ಆಯೋಜಿಸಿದ್ದ ಈ ಇವೆಂಟ್‌ನ್ನು ಜೆಕೆ ಟೈರ್ ಮೋಟಾರ್ ಸ್ಪೋರ್ಟ್ಸ್ ಸಹಯೋಗದಲ್ಲಿ ಹಾಗೂ ವಾಮ್ಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ಸಹ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. ಸೌತ್ ಝೋನ್‌ನ ರೌಂಡ್ 1 ತಜ್ಞರು ಹಾಗೂ ಹೊಸ ಪ್ರತಿಭೆಗಳನ್ನು ಒಟ್ಟುಗೂಡಿಸಿ, ಸುಂದರ ಆದರೆ ತಾಂತ್ರಿಕವಾಗಿ ಸವಾಲುಗಳಿರುವ ಚಿಕ್ಕಮಗಳೂರಿನ ಹಾದಿಗಳನ್ನು ನವೀನ ಧೈರ್ಯದಿಂದ ನವಿರಾಗಿ ನಿರ್ವಹಿಸಲು ಪೂರಕವಾಗಿದೆ.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…