ಪ್ಯಾರಿಸ್: ಭಾರತದ ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಕ್ವಾರ್ಟರ್ ಫೈನಲ್ಸ್‌ನಲ್ಲಿ ಕೊರಿಯಾ ಆಟಗಾರ್ತಿ ಮುಂದೆ ಶರಣಾಗುವ ಮೂಲಕ ಒಲಂಪಿಕ್ಸ್ ಅಭಿಯಾನವನ್ನು ಅಂತಿಮಗೊಳಿಸಿದ್ದಾರೆ. ಆ ಮೂಲಕ ಆರ್ಚರಿ ಅಭಿಯಾನ ಇಲ್ಲಿಗೆ ಅಂತ್ಯವಾಗಿದೆ.
ಕೊರಿಯಾದ ಸಯಾನ್ ನಾಮ್ ವಿರುದ್ಧ 6-4ರ ಅಂತರದಿಂದ ಸೋಲುವ ಮೂಲಕ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದಾರೆ. ಮೊದಲು ಈ ಈ ಇಬ್ಬರು ಆಟಗಾರರು ಮೊದಲಿಗೆ 4-4ರ ಸಮಬಲದಲ್ಲಿ ಕಾದಾಟ ನಡೆಸುತ್ತಿದ್ದರು. ಇದಾದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನಾಮ್ ಮುನ್ನಡೆ ಕಾಯ್ದುಕೊಂಡು ಸೆಮಿಸ್ ತಲುಪಿದರು.
ಇವರ ಸೋಲಿನೊಂದಿಗೆ ಭಾರತ ಒಲಂಪಿಕ್ಸ್‌ನ ಆರ್ಚರಿ ವಿಭಾಗದ ಹೋರಾಟ ಅಂತ್ಯವಾಗಿದೆ. ಜರ್ಮನಿಯ ಮಿಷೆನ್ ಕ್ರೊಪ್ಟೆನ್ ಅವರನ್ನು 6-4 ಅಂತರದಿಂದ ಸೋಲಿಸಿದ ದೀಪಿಕಾ ಕ್ವಾರ್ಟರ್ಸ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ಸ್‌ನಲ್ಲಿ ಕೊರಿಯಾದ 19 ವರ್ಷದ ನಾಮ್ ವಿರುದ್ಧ ಸೋಲು ಕಂಡು ಹೊರಬಂದಿದ್ದಾರೆ.
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…