ಕರಾಚಿ: ಏಕದಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ನಂ.1 ತಂಡವಾಗಿ ಕಾಣಿಸಿಕೊಂಡಿದ್ದ ಪಾಕಿಸ್ತಾನ 48 ಗಂಟೆಗಳಲ್ಲಿ ತನ್ನ ಮೊದಲ ಸ್ಥಾನವನ್ನು ಕಳೆದುಕೊಂಡಿದೆ.
ಭಾನುವಾರ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ 5ನೇ ಏಕದಿನ ಪಂದ್ಯದಲ್ಲಿ ಪಾಕ್ 47 ರನ್ ಗಳಿಂದ ಸೋಲಿಗೆ ಶರಣಾಗಿರುವುದು ಇದಕ್ಕೆ ಕಾರಣವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ಆಟಗಾರರು 49.3 ಓವರ್ ನಲ್ಲಿ 299 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಲು ಬಂದ ಪಾಕ್ ಆಟಗಾರರು ಇಫ್ತಿಕರ್ ಅಹಮದ್ 94 ರನ್, ಆಘಾ ಸಲ್ಮಾನ್ ಅವರ 57 ರನ್ ಹೊರತಾಗಿಯೂ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಅಂತಿಮವಾಗಿ ಪಾಕ್ 46.1 ಓವರ್ ನಲ್ಲಿ 252 ರನ್ ಗಳಿಸಿ ಸೋಲಿಗೆ ಶರಣಾಯಿತು.
ಅಂತಿಮ ಏಕದಿನದಲ್ಲಿ ಸೋತ ಬಳಿಕ ಐಸಿಸಿ ಏಕದಿನ ರ‍್ಯಾಂಕಿಂಗ್ ನಲ್ಲಿ ಬದಲಾವಣೆ ಆಗಿದೆ. 113 ಅಂಕಗಳಿಸಿ ಮೊದಲ ಸ್ಥಾನದಲ್ಲಿದ್ದ ಪಾಕ್ 112 ಅಂಕದೊಂದಿಗೆ 3ನೇ ರ‍್ಯಾಂಕ್ ಗೆ ಕುಸಿದಿದೆ. ಏಕದಿನದಲ್ಲಿ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯ ತಂಡ 113 ಅಂಕದೊಂದಿಗೆ ಮತ್ತೆ ಮೊದಲ ಸ್ಥಾನಕ್ಕೀರಿದೆ. ಇನ್ನು ಟೀಮ್ ಇಂಡಿಯಾ 113 ಅಂಕದೊಂದಿಗೆ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಅಂತಿಮ ಏಕದಿನದಲ್ಲಿ ಸೋತಿರುವ ಪಾಕ್ 4-1 ರೊಂದಿಗೆ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.
ನವದೆಹಲಿ : ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರು ಎಎಪಿ(ಆಮ್ ಆದ್ಮಿ ಪಾರ್ಟಿ) ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಸಾಮಾಜಿಕ…
ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಮೇ 2ರಂದು ಐಡಿಎಸ್‌ಜಿ ಫಸ್ಟ್…
ವೃತ್ತಿ ಶಿಕ್ಷಣದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಆಗಮಿಸಿದ್ಧ ಜನಿವಾರ ಧರಿಸಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಮತ್ತೊಂದೆಡೆ ಮೂಗುಬಟ್ಟು…
ದೆಹಲಿ ಕಣ್ಣೋಟ ಸಂಸತ್ತು ಅಂಗೀಕರಿಸಬೇಕಿದ್ದ ಸಂವಿಧಾನದ ೧೩೧ನೇ ತಿದ್ದುಪಡಿ ಮಸೂದೆ ಮಹಿಳಾ ಮೀಸಲಾತಿಯೋ ಅಥವಾ ಜನಗಣತಿಯ ನಂತರ ಲೋಕಸಭೆ ಮತ್ತು…
ನವದೆಹಲಿ : ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಡಿನ್ನರ್ ಕಾರ್ಯಕ್ರದಲ್ಲಿ ಗುಂಡಿನ ದಾಳಿ ನಡೆದ ಘಟನೆ ಕುರಿತು…
ಸ್ವಾಮಿ ಪೊನ್ನಾಜಿ... ಕಿರಣ್ ಗಿರ್ಗಿ ಚಾಮರಾಜನಗರದ ಕಿರಿಯ ವಯಸ್ಸಿನ ಪ್ರತಿಭಾವಂತ ರಂಗ ನಿರ್ದೇಶಕ. ಈ ಹಿಂದೆ ಚಾಮರಾಜನಗರದ ರಂಗತರಂಗ ತಂಡದ…