ಹಾಡು ಪಾಡು

ಆಂದೋಲನ ಹಾಡುಪಾಡು | ಚಾಮರಾಜನಗರದ ರಂಗಭೂಮಿಯ ಕಿರಣ

ಸ್ವಾಮಿ ಪೊನ್ನಾಜಿ…
ಕಿರಣ್ ಗಿರ್ಗಿ ಚಾಮರಾಜನಗರದ ಕಿರಿಯ ವಯಸ್ಸಿನ ಪ್ರತಿಭಾವಂತ ರಂಗ ನಿರ್ದೇಶಕ. ಈ ಹಿಂದೆ ಚಾಮರಾಜನಗರದ ರಂಗತರಂಗ ತಂಡದ ಮೂಲಕ ‘ಮಾದಾರಿ ಮಾದಯ್ಯ’ ನಾಟಕವನ್ನು ಆಡಿದ್ದರು. ಬಹಳ ವರ್ಷಗಳ ನಂತರ ಇದೇ ನಾಟಕವನ್ನು ಹೊಸಬರ ಅಭ್ಯಾಸಿ ತಂಡ ಕಟ್ಟಿಕೊಂಡು ನಾಟಕವನ್ನು ಯಶಸ್ವಿಗೊಳಿಸಿದರು. ಮಾಡಿದ್ದು ಕಿರಣ್ ಗಿರ್ಗಿ. ‘ಮಾದಾರಿ ಮಾದಯ್ಯ’ ನಾಟಕ ವಿಮರ್ಶಕರ ಮನಸ್ಸನ್ನು ಗೆದ್ದು ಕಡಿಮೆ ಅವಧಿಯಲ್ಲಿ ನಾಲ್ಕು ಪ್ರದರ್ಶನವನ್ನು ಕಂಡಿತು.

ಹಾಗೆ ನೋಡಿದರೆ ನಮ್ಮ ಚಾಮರಾಜನಗರದ ಹಳ್ಳಿಹಳ್ಳಿಗಳಲ್ಲೂ ಒಂದು ಕಾಲದಲ್ಲಿ ನಾಟಕದ ಮಾಸ್ಟರ್‌ಗಳು ಇದ್ದರು. ಶನಿ ಪ್ರಭಾವ, ಸತ್ಯ ಹರಿಶ್ಚಂದ್ರ, ರಾಜ ಸತ್ಯವ್ರತ, ಭಕ್ತ ಪ್ರಹ್ಲಾದ ಮುಂತಾದ ನಾಟಕ ಗಳನ್ನು ಊರು ಊರುಗಳಲ್ಲಿ ಅಭ್ಯಾಸ ಮಾಡಿಸಿ ಪ್ರದರ್ಶನ ನೀಡುತ್ತಿದ್ದರು. ಯಕ್ಷಗಾನದ ವೇಷಭೂಷಣಗಳನ್ನು ಹಾಕದಿದ್ದರೂ ನಾಟಕದ ಶೀರ್ಷಿಕೆ ಮಾತ್ರ ‘ಯಕ್ಷಗಾನ ಪೌರಾಣಿಕ ಬೀದಿ ನಾಟಕ’ ಅಂತಲೇ ಇರುತ್ತಿದ್ದವು. ಹವ್ಯಾಸಿ ರಂಗಭೂಮಿಯ ನಂಟು ಮಾತ್ರ ವಸಿ ಕಡಿಮೆಯೇ! ಬಹಳ ವರ್ಷಗಳಿಂದ ನಿರಂತರವಾಗಿ ನಾಟಕ ಮಾಡಿ ಕೊಂಡು ಬಂದ ‘ಶಾಂತಲಾ’ ಕಲಾವಿದರ ತಂಡ ಬಿಟ್ಟರೆ ರಂಗತರಂಗ, ರಂಗವಾಹಿನಿ ಮುಂತಾದ ತಂಡಗಳು ಹವ್ಯಾಸಿ ರಂಗ ಭೂಮಿಯ ನಾಟಕಗಳನ್ನು ಪ್ರದರ್ಶಿಸಿದರು. ಸದ್ಯ ಚಾಮ ರಾಜನಗರದ ರಂಗಭೂಮಿಯಲ್ಲಿ ಸದಾ ಸಕ್ರಿಯವಾಗಿರುವ ಒಂದು ಹೆಸರೆಂದರೆ ಕಿರಣ್ ಗಿರ್ಗಿ.

ಚಾಮರಾಜನಗರ ಜಿಲ್ಲೆ, ಸಿದ್ದಯ್ಯನಪುರ ಗ್ರಾಮ ದಲ್ಲಿ ಕುಸುಮಲತಾ- ಕಾಂತರಾಜು ದಂಪತಿಗಳ ಮಗನಾಗಿ ಜನಿಸಿದ ಕಿರಣ್ ಕುಮಾರ್ ಬಾಲ್ಯದಲ್ಲಿ ತನ್ನ ಅಣ್ಣ ಮಹಾಲಿಂಗ ಗಿರ್ಗಿ ಹಾರ್ಮೋನಿಯಂ ನುಡಿಸಿಕೊಂಡು ಹಾಡುತ್ತಿದ್ದ ಹಾಡುಗಳನ್ನು ಕೇಳಿ ಬೆಳೆದ ವರು. ಊರ ಮಾರಮ್ಮನ ಹಬ್ಬಗಳಲ್ಲಿ ನಡೆಯುವ ನಾಟಕಗಳಲ್ಲಿ ಇದೇ ಕುಟುಂಬದ ಸದಸ್ಯರು ತಪ್ಪದೇ ಪಾರ್ಟ್ ಮಾಡುವ ಪರಂಪರೆ ಇದ್ದು ಈ ಪರಂಪರೆಯ ಮುಂದುವರಿಕೆಗೆ ಕಿರಣ್ ಗಿರ್ಗಿ ಪಾರ್ಟು ಮಾಡುವಂತೆ ಆಗಿ ಅಽಕೃತವಾಗಿ ರಂಗಭೂಮಿಗೆ ಪದಾರ್ಪಣೆಯಾಯಿತು ಮತ್ತು ಅದೇ ಆಸಕ್ತಿಯ ಕೇಂದ್ರವೂ ಆಯಿತು. ಮುಂದೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಭಾರತೀಯ ರಂಗ ಶಿಕ್ಷಣ ಕೇಂದ್ರ ಮತ್ತು ಮೈಸೂರಿನ ರಂಗಾಯಣ ದಲ್ಲಿ ರಂಗಕಲೆ ಅಭ್ಯಾಸ ಮಾಡಿ ರಂಗಾಯಣ ರೆಪೆರ್ಟರಿಯಲ್ಲಿ ಒಂದು ವರ್ಷ ಕಿರಿಯ ಕಲಾವಿದನಾಗಿ ಕೆಲಸ ಮಾಡಿ ಬೆಂಗಳೂರಿನ ರಂಗಶಂಕರದ ಮೇಕಿಂಗ್ ಥಿಯೇಟರ್ ವರ್ಕ್‌ಶಾಪ್‌ನಲ್ಲೂ ಭಾಗವಹಿಸಿ ತರಬೇತಿ ಪಡೆದಿದ್ದಾರೆ. ನಿನಾದ ಮ್ಯೂಸಿಕಲ್ ಟ್ರಸ್ಟ್ ನಲ್ಲಿ ಕೀಬೋರ್ಡ್ ತರಬೇತಿ ಪಡೆದು ಮಕ್ಕಳಿಗೆ ಕೀಬೋರ್ಡ್ ಶಿಕ್ಷಣವನ್ನು ನೀಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಶಿಕ್ಷಣವನ್ನು ಪಡೆದ ಇವರು ಅರಿವು, ದೀನಬಂಧು, ಎಂಸಿಎಸ್ ಪಬ್ಲಿಕ್ ಮುಂತಾದ ಶಾಲೆಗಳಲ್ಲೂ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ೨೦೧೫ರಲ್ಲಿ ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸುವ ‘ಕಾಲೇಜು ರಂಗೋತ್ಸವ’ ಕಾರ್ಯಕ್ರಮಕ್ಕೆ ಸಿದ್ದಲಿಂಗಯ್ಯನವರ ‘ಕತ್ತೆ ಮತ್ತು ಧರ್ಮ’ ಕವಿತೆಯನ್ನು ರಂಗ ರೂಪಕ್ಕಳವಡಿಸಿ ಮೊದಲ ಬಾರಿಗೆ ನಿರ್ದೇಶಕರಾದರು. ಅಲ್ಲಿಯ ವರೆಗೂ ಮಧ್ಯಮ ವ್ಯಾಯೋಗ, ಮಾದರಿ ಮಾದಯ್ಯ, ಚಿಕ್ಕದೇವ ಭೂಪ , ಗೊಂಬೆ, ಸದ್ಯಕ್ಕಿದು ಹುಚ್ಚರ ಸಂತೆ ಮುಂತಾದ ನಾಟಕ ಗಳಲ್ಲಿ ಅಭಿನಯಿಸುತ್ತ ಅನಂತರದಲ್ಲಿ ತಾವೇ ರಂಗಪ್ರಯೋಗಕ್ಕಿಳಿದರು. ಮೈಸೂರು ಮತ್ತು ಚಾಮರಾಜನಗರದ ರಂಗ ತಂಡಗಳಿಗೆ ಕಂಬಾರರ ಜೋಕುಮಾರಸ್ವಾಮಿ, ಶಿವಪ್ರಕಾಶರ ಮಾದರಿ ಮಾದಯ್ಯ, ಮಲ್ಲಮ್ಮನ ಮನೆ ಹೋಟ್ಲು, ತ್ರಿಪುರಾಂತಕ ಅವರ ಪೇಯಿಂಗ್ ಗೆಸ್ಟ್, ಭಾಸ ಮಹಾಕವಿಯ ಮಧ್ಯಮ ವ್ಯಾಯೋಗ, ದೇವನೂರರ ಅಮಾಸ ಕೃತಿಗಳನ್ನು ನಿರ್ದೇಶಿಸಿದರು. ‘ನ್ಯಾಣ’ ಕವಿತೆಗಳ ಸಂಕಲನದ ಮೂಲಕ ಕವಿಯಾಗಿ ಸಾಹಿತ್ಯ ಲೋಕ ಪ್ರವೇಶಿಸಿದ ಕಿರಣ್ ಗಿರ್ಗಿ ಕೋಳಿ ಹೆಸ್ರು, ಚಿರತೆ ಬಂತು ಚಿರತೆ, ಬಂಡಾಯದೊಡೆಯ ಮಂಟೆಸ್ವಾಮಿ ಮುಂತಾದ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.

ಸದ್ಯ ಅವರ ಬಹುದೊಡ್ಡ ಕನಸೆಂದರೆ ಚಾಮರಾಜನಗರದಲ್ಲಿ ಸುಸಜ್ಜಿತ ರಂಗಶಾಲೆ ತೆರೆಯುವುದು. ಮಕ್ಕಳಿಗೆ ಮತ್ತು ಯುವಕರಿಗೆ ನಟನೆಯ ಪಾಠಗಳನ್ನು ಹೇಳಿಕೊಡುವುದು. ರಂಗಭೂಮಿಗೆ ಸಂಬಂಧಿಸಿದಂತೆ ವಿಶೇಷ ಪ್ರಯೋಗಗಳನ್ನು ಮಾಡುವುದು. ಇದಕ್ಕೆ ಪೂರಕವಾಗಿ ಅಭ್ಯಾಸಿ ಟ್ರಸ್ಟ್ ಮಾಡಿಕೊಂಡು ಚಾಮರಾಜನಗರದ ಮಕ್ಕಳಿಗೆ ರಂಗತರಬೇತಿ, ಸಂಗೀತ ತರಬೇತಿ ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಆಚೆ ತರುವುದಕ್ಕಾಗಿ ಮತ್ತು ಅನೌಪಚಾರಿಕವಾಗಿ ಕಲೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ‘ಹಟ್ಟಿ ಐಕಳ ಜಗಲಿ’ ಬೇಸಿಗೆ ಶಿಬಿರವನ್ನು ಒಂದು ತಿಂಗಳ ಕಾಲಾವಕಾಶದಲ್ಲಿ ರಂಗಭೂಮಿ ಚಟುವಟಿಕೆ ಅಲ್ಲದೆ ಚಿತ್ರಕಲೆ, ಕವನ ರಚನೆ, ನಾಟಕ, ಕೀಬೋರ್ಡ್ ಕಲಿಸುತ್ತಾ ತಿಂಗಳ ಕೊನೆಯಲ್ಲಿ ಅದೇ ಮಕ್ಕಳಿಂದ ಕಲಾ ಪ್ರದರ್ಶನ ಏರ್ಪಡಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಪೋಷಕರಿಂದ ಮೆಚ್ಚು ಗೆಯ ಮಹಾಪೂರವೇ ಹರಿದುಬಂದಿದ್ದು ರಜೆ ಶುರುವಾಗುವ ಮುಂಚೆಯೇ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿ ಕೊಳ್ಳುತ್ತಿರುವುದು ಈ ಹಳ್ಳಿಹಟ್ಟಿಯ ಜಗಲಿಯ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ. ಜನ್ನಿ, ಮಂಡ್ಯ ರಮೇಶ್, ರವೀಂದ್ರ ಮೇಸ್ಟ್ರು ಮುಂತಾದ ಗುರುಗಳನ್ನು ಸ್ಮರಿಸುತ್ತಾ ಒಬ್ಬ ನಟನಾದವನು ಓದುಗನಾಗಿರಬೇಕು, ಹಾಡುಗಾರನಾಗಿರಬೇಕು, ಚಿತ್ರ ಬರೆಯುವರಾಗಿರಬೇಕು, ಕೊನೆಗೆ ಅವುಗಳ ಕುರಿತ ಆಸಕ್ತಿಯನ್ನಾದರೂ ಕೊನೇ ತನಕ ಉಳಿಸಿಕೊಂಡಿರ ಬೇಕು ಎಂಬ ಕಾರಂತರ ಮಾತಿನ ತತ್ವದಲ್ಲಿ ಕೆಲಸ ಮಾಡುತಿದ್ದೇನೆ ಎನ್ನುತ್ತಾರೆ.
swamyponnachi123@gmail.com

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

21 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

4 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

4 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

4 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

4 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago