ಕರಾಚಿ: ಪಾಕಿಸ್ಥಾನ ತಂಡವು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದು ಬೀಗಿದೆ. ಕೊನೆಯ ಪಂದ್ಯದಲ್ಲಿ ಸೋತರೂ 4-1 ಅಂತರದಿಂದ ಪಾಕ್ ತಂಡವು ಸರಣಿ ವಶಪಡಿಸಿಕೊಂಡಿದೆ.
ಈ ಪಂದ್ಯದ ವೇಳೆ ಪಾಕಿಸ್ಥಾನದ ನಾಯಕ ಬಾಬರ್ ಅಜಂ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಭಾನುವಾರ ನೂರನೇ ಏಕದಿನ ಪಂದ್ಯವಾಡಿದ ಬಾಬರ್ ಮೊದಲ ನೂರು ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ರವಿವಾರದ ಪಂದ್ಯದಲ್ಲಿ ಬಾಬರ್ ಕೇವಲ ಒಂದು ರನ್ ಗೆ ಔಟಾದರು. ಒಟ್ಟು ನೂರು ಏಕದಿನ ಪಂದ್ಯದಲ್ಲಿ ಬಾಬರ್ 5089 ರನ್ ಗಳಿಸಿದ್ದಾರೆ. ನೂರು ಪಂದ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಬಾಬರ್.
100 ಏಕದಿನ ಪಂದ್ಯಗಳ ನಂತರ ಗಳಿಸಿದ ರನ್ ಗಳ ವಿಷಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಬರ್‌ನ ದಾಖಲೆಗಿಂತ ಬಹಳ ಹಿಂದಿದ್ದಾರೆ. ಕೊಹ್ಲಿ 100 ಪಂದ್ಯಗಳ ನಂತರ 48.89 ಸರಾಸರಿಯಲ್ಲಿ 4,107 ರನ್ ಗಳಿಸಿದ್ದರು.
ಒಟ್ಟಾರೆಯಾಗಿ ಕೊಹ್ಲಿ ಈಗ 274 ಏಕದಿನ ಪಂದ್ಯಗಳಲ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಬಾಬರ್ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5,089 ರನ್ ಗಳಿಸಿದ್ದಾರೆ.
100 ಪಂದ್ಯಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ…
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…