ಕಳೆದ ಒಂದು ವರ್ಷದಿಂದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯದೇ ಸದ್ದು. ಇದೇನು ಹೊಸ ಬೆಳವಣಿಗೆಯಲ್ಲ. ಇದುವರೆಗೆ ಚುನಾವಣಾ ಆಯೋಗ ದೇಶದಾದ್ಯಂತ ಎಂಟು ಬಾರಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ( ಎಸ್‌ಐಆರ್) ಕಾರ್ಯವನ್ನು ಸದ್ದು ಗದ್ದಲವಿಲ್ಲದೆ ನಡೆಸಿದೆ. ಕಳೆದ ಸ್ಪೆಷಲ್ ಇನ್‌ಟೆನ್ಸಿವ್ ರಿವಿಷನ್ ಕಾರ್ಯ ೧೯೫೧ರಿಂದ ೨೦೦೪ರವರೆಗೆ ನಡೆದಿದೆ. ಕರ್ನಾಟಕದಲ್ಲಿ ೨೦೦೨ರಲ್ಲಿ ಈ ಪರಿಷ್ಕರಣೆ ಕಾರ್ಯ ನಡೆದಿದ್ದು ಆಗ ಈ ಕ್ರಿಯೆ ಯಾವ ಗದ್ದಲ ಮತ್ತು ವಿವಾದವನ್ನೂ ಉಂಟು ಮಾಡಲಿಲ್ಲ. ಎಲ್ಲವೂ ಸರಾಗವಾಗಿ ನಡೆದು ಹೋಗಿದೆ. ಆದರೆ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಈ ವಿಷಯದಲ್ಲಿ ಬಾಂಗ್ಲಾ ಮತ್ತು ನೇಪಾಳ ಮುಂತಾದ ನೆರೆಹೊರೆ ರಾಷ್ಟ್ರಗಳಿಂದ ನುಸುಳಿ ಬಂದಿರುವ ಲಕ್ಷಾಂತರ ಮಂದಿ ಮುಖ್ಯವಾಗಿ ಈಶಾನ್ಯ ರಾಜ್ಯಗಳು, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಆಶ್ರಯ ಪಡೆದು ಮತದಾರರಾಗಿzರೆ. ಅವರನ್ನೆಲ್ಲ ಪತ್ತೆ ಹಚ್ಚಿ ಮತದಾರರ ಪಟ್ಟಿಯಿಂದ ಕಿತ್ತು ಬೀಸಾಕುವ ಪ್ರಕ್ರಿಯೆ ಇದು ಎನ್ನುವ ವಿಷಯವನ್ನು ಟಾಂ ಟಾಂ ಮಾಡಿದ್ದರಿಂದ ಇಡೀ ದೇಶದಲ್ಲಿ ಎಸ್‌ಐ ಆರ್ ವಿವಾದಕ್ಕೊಳಗಾಗಿದೆ.
ಈವೊಂದು ವರ್ಷದಲ್ಲಿ ಮೂರು ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಮತ್ತು ಹತ್ತು ರಾಜ್ಯಗಳಲ್ಲಿ ಎಸ್‌ಐಆರ್ ಕಾರ್ಯ ಮುಗಿದಿದ್ದು ಸುಮಾರು ಐದು ಕೋಟಿ ಮಂದಿಯನ್ನು ಹಲವು ಕಾರಣಗಳಿಗಾಗಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾಲದಲ್ಲಿ ಕೈಗೊಂಡ ಈ ಎಸ್‌ಐಆರ್ ತೀವ್ರ ಗದ್ದಲ ಉಂಟು ಮಾಡಿದ್ದನ್ನು ಬಿಟ್ಟರೆ ಉಳಿದಂತೆ ಚತ್ತೀಸ್‌ಗಡ, ಗೋವಾ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ತಮಿಳುನಾಡು ಮತ್ತು ಕೇರಳದಲ್ಲಿ ಸಾಂಗವಾಗಿ ನಡೆದುಹೋಗಿದೆ. ತಮಿಳುನಾಡಿಗೆ ಶ್ರೀಲಂಕಾದಿಂದ ಅಕ್ರಮವಾಗಿ ಪ್ರವೇಶ ಮಾಡುವುದು ಸಾಮಾನ್ಯ ಎನ್ನುವ ದೂರುಗಳಿದ್ದರೂ ಅಲ್ಲಿ ಯಾವ ಸಮಸ್ಯೆಯೂ ಉಂಟಾಗದೆ ಎಸ್ ಐ ಆರ್ ಕ್ರಿಯೆ ಸಲೀಸಾಗಿ ನಡೆದು ಹೋಗಿರುವುದು ಅಚ್ಚರಿಯ ಸಂಗತಿ.
ಗಡಿ ರಾಜ್ಯಗಳಲ್ಲಿ ಮತ್ತು ಆ ರಾಜ್ಯಗಳ ಮೂಲಕ ಬಹುತೇಕ ಮಂದಿ ಬಾಂಗ್ಲಾ ನಿರಾಶ್ರಿತರು ನುಸುಳಿದ್ದು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದು ಅವರನ್ನೆಲ್ಲ ಕಿತ್ತು ಬೀಸಾಕುವುದೇ ಈ ಎಸ್ ಐ ಆರ್ ಕ್ರಮ ಎನ್ನುವ ರೀತಿಯಲ್ಲಿ ಕೇಂದ್ರ ಸರ್ಕಾರದ ಹಲವು ಸಚಿವರು ಮತ್ತು ಬಿಜೆಪಿ ಮಿತ್ರ ಪಕ್ಷಗಳು ನಿರಂತರವಾಗಿ ಹೇಳುತ್ತಾ ಬಂದಿದ್ದರಿಂದ ಉಳಿದ ಪ್ರತಿಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಈ ಎಸ್ ಐ ಆರ್ ವಿರುದ್ಧ ಪ್ರತಿಭಟನೆಗೆ ಇಳಿಯಿತು. ಪಶ್ಚಿಮ ಬಂಗಾಳ ಸುಪ್ರೀಂ ಕೋರ್ಟ್ ವರೆಗೂ ಹೋದರೂ ಎಸ್‌ಐಆರ್ ಕ್ರಮವನ್ನು ರದ್ದು ಮಾಡಲು ಆಗಿಲ್ಲ. ಎಸ್‌ಐಆರ್ ಚುನಾವಣಾ ಆಯೋಗದ ಕೆಲಸ ಎನ್ನುವುದಕ್ಕಿಂತ ಕೇಂದ್ರ ಸರ್ಕಾರದ ಕ್ರಮ ಎನ್ನುವುದೇ ಇದಕ್ಕೆ ಭಾರೀ ಪ್ರತಿರೋಧ ಉಂಟಾಗಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ ಐ ಆರ್ ಕ್ರಮಕ್ಕೆ ಬಿಜೆಪಿ ಮತ್ತು ಜನತಾದಳಎಸ್ ನಿಂದ ಟೀಕೆ ಮತ್ತು ಚುನಾವಣಾ ಆಯೋಗಕ್ಕೆ ದೂರುಕೊಡುವ ವರೆಗೆ ಹೋಗಿರುವುದು ವಿಶೇಷ. ಕರ್ನಾಟಕ ಎಸ್ ಐ ಆರ್ ಸೋಲು ಮಾಡಿರುವ ಮೊದಲ ರಾಜ್ಯ ಎಂದು ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರೆ, ಒಬ್ಬ ಮುಸ್ಲಿಂ ಮತದಾರರನ್ನೂ ಬಿಡದಂತೆ ಎಸ್ ಐ ಆರ್ ನಡೆಸಬೇಕೆಂದು ಮುಖ್ಯಮಂತ್ರಿ ತಮ್ಮ ಅಽಕಾರಿಗಳಿಗೆ ಸೂಚಿಸಿzರೆ ಎಂದು ವಿರೋಽ ನಾಯಕ ಆರ್. ಅಶೋಕ್ ಆರೋಪಿಸಿzರೆ. ದಳದ ನಾಯಕ ಮತ್ತು ಕೇಂದ್ರದ ಸಚಿವ ಕುಮಾರ ಸ್ವಾಮಿ ರಾಮನಗರದಲ್ಲಿ ಬಾಂಗ್ಲಾ ನಿರಾಶ್ರಿತರನ್ನು ಒಟ್ಟುಗೂಡಿಸಿ ಎಸ್‌ಐಆರ್ ನಡೆಸಲಾಗುತ್ತಿದೆ ಎಂದಿದ್ದಾ.
ಈ ಮಧ್ಯೆ ರಾಜ್ಯ ಸರ್ಕಾರ ಇಲ್ಲಿನ ನಿವಾಸಿಗಳಿಗೆ ಕಾಯಂ ನಿವಾಸಿಗಳೆಂದು ಸರ್ಟಿಫಿಕೆಟ್ ನೀಡುವ ಕ್ರಿಯೆಯನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಟಿಸಿರುವುದು ಮತ್ತು ಮತದಾರರ ಪಟ್ಟಿಯಲ್ಲಿ ಇಲ್ಲದವರಿಗೆ ಮುಂದೆ ಗ್ಯಾರಂಟಿ ಕಾರ್ಯಕ್ರಮಗಳ ಲಾಭ ಸಿಗುವುದಿಲ್ಲ ಎನ್ನುವುದು ಬಿಜೆಪಿಯವರನ್ನು ರೊಚ್ಚಿಗೇಳಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಯ ಅಂಗವಾಗಿ ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರಿಗೆ ಮಾತ್ರ ಅರ್ಜಿಗಳನ್ನು ವಿತರಿಸುವ ಕಾರ್ಯವನ್ನು ಮನೆ ಮನೆಗಳಿಗೆ ಭೇಟಿ ನೀಡದೆ ಹಲವು ಕಡೆ ದೇವಾಲಯ, ಮಸೀದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿಗಳನ್ನು ವಿತರಿಸಿ ಪಡೆಯಲಾಗುತ್ತಿದೆ. ಈ ಕಾರ್ಯದಲ್ಲಿ ಸರ್ಕಾರದ ಕೈವಾಡವಿದೆ. ಬ್ಲಾಕ್ ಲೆವೆಲ್ ಆಫಿಸರ್‌ಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ . ಅವರು ರಾಜ್ಯ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿzರೆ ಎಂಬುದು ಬಿಜೆಪಿ ಮತ್ತು ಜಾ.ದಳದ ನಾಯಕರ ಆಕ್ರೋಶ. ತಮ್ಮ ಈ ಆಕ್ರೋಶವನ್ನು ಈಗಾಗಲೇ ಈ ನಾಯಕರು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಮೂಲಕ ಸಮಾಧಾನ ಪಟ್ಟುಕೊಳ್ಳುತ್ತಿzರೆ.
ವಾಸ್ತವವಾಗಿ ಬಿಎಲ್‌ಒ ಗಳು ಮನೆಬಾಗಿಲಿಗೆ ಬರುವ ಮುನ್ನ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ತಮ್ಮ ಹೆಸರು ಎಲ್ಲಿ ಬಿಟ್ಟುಹೋಗುವುದೋ ಎನ್ನುವ ಆತಂಕದಿಂದ ಬಹುತೇಕ ಕಡೆಗಳಲ್ಲಿ ಜನರೇ ಮುಗಿಬಿದ್ದು ಬ್ಲಾಕ್ ಲೆವೆಲ್ ಅಽಕಾರಿಗಳನ್ನು ಹುಡುಕಿಕೊಂಡು ಅರ್ಜಿಗಳನ್ನು ಪಡೆಯುತ್ತಿರುವ ದೃಶ್ಯವನ್ನು ಬೆಂಗಳೂರಿನಲ್ಲಿ ಕಾಣಬಹುದು. ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ತಮಗೆ ಗೊತ್ತಿರುವವರನ್ನೆಲ್ಲ ಕರೆದು ಅರ್ಜಿಗಳನ್ನು ಪಡೆಯುವಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಕಾಣುತ್ತದೆ. ಹೇಳಿಕೆ, ಪ್ರತಿಹೇಳಿಕೆ ಮತ್ತು ಖಂಡನೆ ಮಾಡುವ ಕ್ರಿಯೆ ನಾಯಕರ ಮಟ್ಟದಲ್ಲಿ ನಡೆಯುತ್ತಿದೆಯಷ್ಟೆ.
ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಅನರ್ಹರು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಬಾರದು. ಹಾಗೆಯೇ ನಿಧನರಾಗಿರುವವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು. ಮತ್ತು ಯಾರಾದರು ವಿದೇಶಿಯರು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದರೆ ಅಂತಹವರ ಹೆಸರನ್ನು ಕಿತ್ತುಹಾಕಬೇಕೆನ್ನುವುದು ಚುನಾವಣಾ ಆಯೋಗದ ಉದ್ದೇಶ. ರಾಜ್ಯ ಸರ್ಕಾರವೂ ಈ ಬಗೆಗೆ ಪತ್ರಿಕೆಗಳಿಗೆ ಪುಟಗಟ್ಟಲೆ ಜಹೀರಾತು ನೀಡಿ ಜನರಿಗೆ ಅರಿವು ಮೂಡಿಸಿರುವ ಕಾರ್ಯವನ್ನು ಮೆಚ್ಚಲೇಬೇಕು.
ಈ ನಿಟ್ಟಿನಲ್ಲಿ ಅಽಕಾರರೂಢ ಕಾಂಗ್ರೆಸ್ ಪಕ್ಷವು ತನ್ನ ಸಾಂಪ್ರದಾಯಿಕ ಮತದಾರರ ಹೆಸರು ಬಿಟ್ಟುಹೋಗದಂತೆ ಎಚ್ಚರವಹಿಸಲು ತನ್ನ ಸಾವಿರಾರು ಕಾರ್ಯಕರ್ತರಿಗೆ ವಿಶೇಷ ಶಿಬಿರಗಳನ್ನು ನಡೆಸಿ ಅವರನ್ನು ತಯ್ಯಾರು ಮಾಡಿ ಕಾರ್ಯಕ್ಕಿಳಿಸಿದೆ. ಅಂತಹ ಕೆಲಸವನ್ನು ಪರಿಣಾಮಕಾರಿಯಾಗಿ ಬಿಜೆಪಿಯಾಗಲಿ ಅಥವಾ ಅದರ ಮಿತ್ರಪಕ್ಷವಾಗಲಿ ಜಾ.ದಳ ಮಾಡಿಲ್ಲ ಎನ್ನುವುದೂ ಅಷ್ಟೇ ಸತ್ಯ.
ಈಗಿನ ಪರಿಷ್ಕರಣೆಯಲ್ಲಿ ಯಾವುದೇ ವ್ಯಕ್ತಿಯನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳುವ ಕಾರ್ಯ ನಡೆಯುತ್ತಿಲ್ಲ. ಈಗಾಗಲೇ ಪಟ್ಟಿಯಲ್ಲಿರುವ ಹೆಸರುಗಳ ಪರಿಷ್ಕರಣೆ ಮಾತ್ರ ಆಗುತ್ತಿರುವುದರಿಂದ ಮುಂದಿನ ತಿಂಗಳಲ್ಲಿ ಪ್ರಕಟವಾಗುವ ಮತದಾರರ ಪರಿಷ್ಕರಣೆಯ ಪಟ್ಟಿಯಿಂದ ಎಷ್ಟು ಮಂದಿಯ ಮತದಾರರ ಹೆಸರನ್ನು ಬಿಡಲಾಗಿದೆ ಎನ್ನುವ ಸತ್ಯ ತಿಳಿಯುತ್ತದೆ. ಅಲ್ಲಿಯವರೆಗಿನ ರಾಜಕೀಯ ಪಕ್ಷಗಳ ಆರ್ಭಟ ವ್ಯರ್ಥ ಪ್ರಯತ್ನ ಎಂದೇ ಹೇಳಲಾಗುತ್ತಿದೆ.
ರಾಜ್ಯದಲ್ಲಿ ಹತ್ತು ವರ್ಷದಿಂದ ಇದ್ದು , ಶಿಕ್ಷಣ ಪಡೆದು, ಉದ್ಯೋಗದಲ್ಲಿದ್ದು ಮತ್ತು ವಿವಾಹ ಆಗಿದ್ದರೆ ಮತ್ತು ಆಸ್ತಿಪಾಸ್ತಿ ಹೊಂದಿದ್ದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಹೆಸರುಗಳಿದ್ದರೆ ಕಾಯಂ ನಿವಾಸಿ ಪತ್ರ ನೀಡುವ ಅಽಕಾರವನ್ನು ರಾಜ್ಯ ಸರ್ಕಾರಗಳು ಹೊಂದಿರುವುದರಿಂದ ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಅವರ ಆರೋಪ ಮತ್ತು ಕೇಂದ್ರ ಸರ್ಕಾರಕ್ಕೆ ನೀಡಿರುವ ದೂರಿಗೆ ಯಾವ ಕಿಮ್ಮತ್ತೂ ಇರುವುದಿಲ್ಲ. ಯಾವ ಮುಸ್ಲಿಮರನ್ನೂ ಮತದಾರರ ಪಟ್ಟಿಯಿಂದ ಕೈಬಿಡಬಾರದೆಂದು ಮುಖ್ಯಮಂತ್ರಿ ತಮ್ಮ ಅಽಕಾರಿಗಳಿಗೆ ಕಟ್ಟಾe ಮಾಡಿzರೆಂಬ ಅಶೋಕ್ ಅವರ ಆರೋಪವನ್ನು ಗಮನಿಸಿದರೆ ಈ ಪರಿಷ್ಕರಣೆ ಪಟ್ಟಿಯ ಕ್ರಿಯೆಯಲ್ಲಿ ಮುಸ್ಲಿಮರನ್ನು ಕೈ ಬಿಡಬೇಕೆನ್ನುವ ಪರೋಕ್ಷ ಅರ್ಥ ಬರುವುದರಿಂದ ಅವರ ಟೀಕೆಯನ್ನು ಚುನಾವಣಾ ಆಯೋಗ ಒಪ್ಪಲು ಸಾಧ್ಯವಿಲ್ಲ. ಇತ್ತ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಬಾಂಗ್ಲಾ ನಿರಾಶ್ರಿತರು ಅಕ್ರಮವಾಗಿ ನೆಲೆಸಿzರೆನ್ನುವ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪತ್ತೆ ಹಚ್ಚುವ ಕಾರ್ಯವನ್ನು ಮಾಡಬೇಕು. ಕರ್ನಾಟಕದವರೆಗೆ ಈ ಬಾಂಗ್ಲಾ ನಿರಾಶ್ರಿತರು ಹೇಗೆ ನುಸುಳಿಕೊಂಡು ಬಂದರು? ಇಲ್ಲಿ ಕೇಂದ್ರ ಗೃಹ ಸಚಿವಾಲಯದ ವೈ-ಲ್ಯವಲ್ಲವೇ? ಅಂತು ಶೋಭಾ ಕರಂದ್ಲಾಜೆ ಅವರ ಮಾತಿನಂತೆ ಎಸ್‌ಐಆರ್‌ನ್ನು (ಕೇಂದ್ರದ ಹಿಡನ್ ಅಜೆಂಡಾ) ಸೋಲಿಸಿದ ಮೊದಲ ರಾಜ್ಯ ಕರ್ನಾಟಕ ಎನ್ನುವುದನ್ನು ಒಪ್ಪಬಹುದೇ?
ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಜೀವಮಾನದ ಮೊದಲ ಸಾರ್ವಜನಿಕ ಗಾಯನ ಕಾರ್ಯಕ್ರಮ ಮೈಸೂರಿನಿಂದಲೇ ಆರಂಭವಾಗಿತ್ತು. ಅಚ್ಚರಿಯೆಂದರೆ ಅವರ…
ಮೈಸೂರು : ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರದ ಸಿದ್ಧತೆಗಳು ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದಲ್ಲಿ ಭರದಿಂದ ಸಾಗುತ್ತಿದ್ದು,…
ಮೈಸೂರು : ಕರುನಾಡಿನ ಮಣ್ಣಲ್ಲಿ ಜಾನಕಿ ಅಮ್ಮ ಕಣ್ಮುಚ್ಚಿದ್ದಾರೆ. ಅವರಿಗಾಗಿ ಕರುನಾಡ ಜನ ಕಣ್ಣು ತೆರೆಯಬೇಕು. ಅವರ ಸ್ಮಾರಕ ನಿರ್ಮಾಣವಾಗಬೇಕು…
ಫಾತಿಮಾ ರಲಿಯಾ ಯು ಟ್ಯೂಬ್‌ನಲ್ಲಿ ಒಬ್ಬೊಬ್ಬ ತಜ್ಞರೂ ಒಂದೊಂದು ಮಾಹಿತಿ ಕೊಡುತ್ತಿದ್ದರು. ಇದೆಲ್ಲಾ ಗೊಂದಲ ಬೇಡ ಎಂದು ಚಾಟ್‌ಜಿಪಿಟಿಯ ಬಳಿ…
ಜಯಶಂಕರ್ ನಾನು ಶಾಲೆಯ ಅಂಗಳದಲ್ಲಿ ಕುಳಿತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಂತಹ ಸಂದರ್ಭದಲ್ಲಿ ನಾಲ್ಕಾರು ಸೋಲಿಗರು ಗುಂಪಿನಲ್ಲಿ ಏನೇನೋ ಗೊಣಗಾಡಿಕೊಂಡು ಹೋಗುತ್ತಿದ್ದರು.…
ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ. ಚಂದ್ರಶೇಖರ್ ಮೂರ್ತಿ ಕೆ.ಎಸ್. ಹಾರ್ಮೋನಿಯಂ ವಾದಕ, ಗೀತ…