ಕ್ರೀಡೆ

ಒಡಿಐ ವಿಶ್ವಕಪ್: ಈವರೆಗೆ ಟ್ರೋಫಿ ಗೆದ್ದ ತಂಡಗಳ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ಕ್ರಿಕೆಟ್‌ ಪ್ರಿಯರು ಬಹುನಿರೀಕ್ಷೆಯಿಂದ ಎದುರು ನೋಡುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳ ಸಮಯ ಮಾತ್ರವೇ ಬಾಕಿಯಿದೆ. ಈ ಬಾರಿ ಮೊತ್ತ ಮೊದಲ ಬಾರಿ ಭಾರತ ಟೂರ್ನಿಯ ಸಂಪೂರ್ಣ ಆತಿಥ್ಯ ವಹಿಸಿಕೊಂಡಿದ್ದು, ಅಕ್ಟೋಬರ್‌ 5ರಿಂದ ನವೆಂಬರ್‌ 19ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಜಗತ್ತಿನ 10 ಶ್ರೇಷ್ಠ ತಂಡಗಳು ವಿಶ್ವಕಪ್‌ ಸಲುವಾಗಿ ಕಾದಾಟ ನಡೆಸಲಿವೆ.

ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ಸ್‌ ಇಂಗ್ಲೆಂಡ್‌ (ಚಾಂಪಿಯನ್ಸ್‌) ಮತ್ತು ನ್ಯೂಜಿಲೆಂಡ್‌ (ರನ್ನರ್ಸ್‌ಅಪ್) ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿವೆ, ಆತಿಥೇಯ ಭಾರತ ತಂಡ ಆಸ್ಟ್ರೇಲಿಯಾ ಎದುರು ಅ.8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಈವರೆಗೆ ಒಟ್ಟು 12 ಆವೃತ್ತಿಗಳು ನಡೆದಿವೆ
1975ರಲ್ಲಿ ಏಕದಿನ ಕ್ರಿಕೆಟ್‌ನ ಮೊತ್ತ ಮೊದಲ ವಿಶ್ವಕಪ್ ಟೂರ್ನಿ ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ನಲ್ಲಿ ಆಯೋಜನೆಯಾಯಿತು. ಆಗ ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ತಲಾ 60 ಓವರ್‌ಗಳೊಂದಿಗೆ ಆಡಲಾಗುತ್ತಿತ್ತು. ಮೊದಲ ಮೂರು ಆವೃತ್ತಿಗಳಿಗೆ ಇಂಗ್ಲೆಂಡ್‌ ಆತಿಥ್ಯ ವಹಿಸಿತ್ತು. 1987ರಲ್ಲಿ ಮೊದಲ ಬಾರಿ ಇಂಗ್ಲೆಂಡ್‌ನಿಂದ ಆಚೆ ಟೂರ್ನಿ ನಡೆಸಲಾಯಿತು.

ಇಂಗ್ಲೆಂಡ್‌, ಪಾಕಿಸ್ತಾನ ಮತ್ತು ಭಾರತದ ಜಂಟಿ ಆತಿಥ್ಯದಲ್ಲಿ ನಾಲ್ಕನೇ ಆವೃತ್ತಿಯ ವಿಶ್ವಕಪ್‌ ನಡೆಯಿತು. ಇದೇ ಆವೃತ್ತಿಯಲ್ಲಿ ಓವರ್‌ಗಳನ್ನು 50 ಓವರ್‌ಗಳಿಗೆ ಇಳಿಸಲಾಯಿತು. ಅಂದಿನಿಂದ ಇಂದಿನವರೆಗೆ 50 ಓವರ್‌ಗಳ ವಿಶ್ವಕಪ್‌ ಟೂರ್ನಿಯನ್ನು ಪ್ರತಿ 4 ವರ್ಷಗಳಿಗೆ ಒಮ್ಮೆ ನಡೆಸುತ್ತಾ ಬರಲಾಗಿದೆ.

ಆಸ್ಟ್ರೇಲಿಯಾ ಅತಿ ಹೆಚ್ಚು ಬಾರಿ ಒಡಿಐ ವಿಶ್ವಕಪ್ ಗೆದ್ದ ತಂಡ

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. 1987ರಲ್ಲಿ ಮೊದಲ ಬಾರಿ ಆಲನ್‌ ಬಾರ್ಡರ್‌ ಸಾರಥ್ಯದಲ್ಲಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡ, 1999ರಿಂದ 2007ರವರೆಗೆ ವಿಶ್ವಕಪ್‌ ಗೆಲುವಿಮ ಹ್ಯಾಟ್ರಿಕ್‌ ಸಾಧನೆ ಮೆರೆದು ವಿಶ್ವ ದಾಖಲೆ ನಿರ್ಮಿಸಿತು. ನಂತರ 2015ರಲ್ಲಿ ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ನಡೆದಾಗ ಮನೆಯಂಗಣದಲ್ಲಿ ಟ್ರೋಫಿ ಗೆದ್ದು ಬೀಗುವ ಒಟ್ಟಾರೆ 5 ಬಾರಿ ಚಾಂಪಿಯನ್ಸ್‌ ಪಟ್ಟ ಗೆಲ್ಲುವ ಮೂಲಕ ಅತ್ಯಂತ ಯಶ್ವಿ ತಂಡ ಎನಿಸಿಕೊಂಡಿದೆ.ಬೇರೆ ಯಾವ ತಂಡಗಳೂ ಕೂಡ 2ಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದಿಲ್ಲ.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ತಂಡಗಳ ಪಟ್ಟಿ

1975 – ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್, ವಿಂಡೀಸ್‌ಗೆ 17 ರನ್ ಜಯ
1979 – ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ವಿಂಡೀಸ್‌ಗೆ 92 ರನ್ ಗೆಲುವು

1983 – ವೆಸ್ಟ್‌ ಇಂಡೀಸ್‌ vs ಭಾರತ, ಭಾರತಕ್ಕೆ 43 ರನ್‌ ಜಯ.
1987 – ಆಸ್ಟ್ರೇಲಿಯಾ vs ಪಾಕಿಸ್ತಾನ, ಆಸ್ಟ್ರೇಲಿಯಾಗೆ 7 ರನ್‌ ಗೆಲುವು
1992 – ಪಾಕಿಸ್ತಾನ vs ಇಂಗ್ಲೆಂಡ್, ಪಾಕಿಸ್ತಾನಕ್ಕೆ 22 ರನ್‌ ಜಯ
1996 – ಶ್ರೀಲಂಕಾ vs ಆಸ್ಟ್ರೇಲಿಯಾ, ಶ್ರೀಲಂಕಾಕ್ಕೆ 7 ವಿಕೆಟ್‌ ಗೆಲುವು
1999 – ಆಸ್ಟ್ರೇಲಿಯಾ vs ಪಾಕಿಸ್ತಾನ, ಆಸ್ಟ್ರೇಲಿಯಾಗೆ 8 ವಿಕೆಟ್‌ ಜಯ
2003 – ಆಸ್ಟ್ರೇಲಿಯಾ vs ಭಾರತ, ಆಸ್ಟ್ರೇಲಿಯಾಗೆ 125 ರನ್‌ ಗೆಲುವು
2007 – ಆಸ್ಟ್ರೇಲಿಯಾ vs ಶ್ರೀಲಂಕಾ, ಆಸ್ಟ್ರೇಲಿಯಾಗೆ 53 ರನ್‌ ಜಯ
2011 – ಭಾರತ vs ಶ್ರೀಲಂಕಾ, ಭಾರತಕ್ಕೆ 6 ವಿಕೆಟ್‌ ಗೆಲುವು
2015 – ಆಸ್ಟ್ರೇಲಿಯಾ vs ನ್ಯೂಜಿಲೆಂಡ್, ಆಸ್ಟ್ರೇಲಿಯಾಗೆ 7 ವಿಕೆಟ್‌ ಜಯ
2019 – ಇಂಗ್ಲೆಂಡ್ vs ನ್ಯೂಜಿಲೆಂಡ್, ಬೌಂಡರಿ ಎಣಿಕೆಯಲ್ಲಿ ಇಂಗ್ಲೆಂಡ್ ಗೆದ್ದಿತು

ವಿಶ್ವಕಪ್‌ ಗೆದ್ದಿರುವ ತಂಡಗಳು
ಆಸ್ಟ್ರೇಲಿಯಾ – 5 ಬಾರಿ ಚಾಂಪಿಯನ್ಸ್‌ (1987, 1999, 2003, 2007, 2015), 2 ಬಾರಿ ರನ್ನರ್ಸ್‌ಅಪ್ (1975, 1996).
ಭಾರತ – 2 ಬಾರಿ ಚಾಂಪಿಯನ್ಸ್‌ (1983, 2011), 1 ಬಾರಿ ರನ್ನರ್ಸ್‌ಅಪ್ (2003).

ವೆಸ್ಟ್‌ ಇಂಡೀಸ್‌ – 2 ಬಾರಿ ಚಾಂಪಿಯನ್ಸ್‌ (1975, 1979), 1 ಬಾರಿ ರನ್ನರ್ಸ್‌ಅಪ್ (1983).
ಇಂಗ್ಲೆಂಡ್ – 1 ಬಾರಿ ಚಾಂಪಿಯನ್ಸ್‌ (2019), 3 ಬಾರಿ ರನ್ನರ್ಸ್‌ಅಪ್ (1979, 1987, 1992).
ಪಾಕಿಸ್ತಾನ – 1 ಬಾರಿ ಚಾಂಪಿಯನ್ಸ್‌ (1992), 1 ಬಾರಿ ರನ್ನರ್ಸ್‌ಅಪ್ (1999).
ಶ್ರೀಲಂಕಾ – 1 ಬಾರಿ ಚಾಂಪಿಯನ್ಸ್‌ (1996), 2 ಬಾರಿ ರನ್ನರ್ಸ್‌ ಅಪ್‌ (2007, 2011)

andolanait

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

8 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

14 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

15 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

16 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

16 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

22 hours ago