ರಾಜ್ಯ

ಅಗತ್ಯ ವಸ್ತುಗಳ ದರ ಏರಿಕೆಗೆ ಹೈಕೋರ್ಟ್‌ ಅಸಮಾಧಾನ

ಬೆಂಗಳೂರು: ‘ಯೋಜನೆ ಉಚಿತ, ಬೆಲೆ ಏರಿಕೆ ಖಚಿತ.’ ಅಗತ್ಯ ವಸ್ತುಗಳ ದರ ಏರಿಕೆ ಬಗ್ಗೆ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್‌ ಪೀಠ ಹೀಗೆ ವ್ಯಂಗ್ಯವಾಡಿದೆ. ದಿನಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಇದ್ದರೆ ಸಾಮಾನ್ಯ ಜನರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.

ಕೆಜಿಗೆ 650 ರೂಪಾಯಿ ಇದ್ದ ತುಪ್ಪದ ದರ 850 ರೂಪಾಯಿಗೆ ಏರಿರುವುದನ್ನು ಪೀಠ ಉಲ್ಲೇಖಿಸಿತು. ‘ಇಷ್ಟು ಬೆಲೆ ಏರಿದರೆ ದೀಪಾವಳಿಗೆ ತುಪ್ಪದ ಯಮದೀಪ ಹಚ್ಚುವುದಾದರೂ ಹೇಗೆ?’ ಎಂದೂ ಪ್ರಶ್ನಿಸಿತು. ಕೆಜಿಗೆ 103 ರೂಪಾಯಿ ತಲುಪಿದ ಅಕ್ಕಿ ದರ, ಹಾಲು ಮತ್ತು ಬಸ್‌ ಟಿಕೆಟ್‌ ದರ ಏರಿಕೆಯೂ ವಿಚಾರಣೆ ವೇಳೆ ಪ್ರಸ್ತಾಪವಾಯಿತು. ದೀಪಾವಳಿ ಬಳಿಕ ಸಕ್ಕರೆ ದರ ಕೆಜಿಗೆ 90 ರೂಪಾಯಿಗೆ ಏರಬಹುದೆಂಬ ಆತಂಕವನ್ನೂ ಪೀಠ ವ್ಯಕ್ತಪಡಿಸಿತು.

ಹಳೆಯ ದಾಸ್ತಾನಿನ ವಸ್ತುಗಳಿಗೂ ಹೊಸ ದರ ವಿಧಿಸುತ್ತಿರುವ ವಿಷಯವನ್ನು ಪೀಠ ಪ್ರಸ್ತಾಪಿಸಿತು. ಅನ್ನಭಾಗ್ಯ ಯೋಜನೆಯ ದಾಸ್ತಾನಿನಲ್ಲಿ 320 ಕ್ವಿಂಟಲ್‌ ಅಕ್ಕಿ ಮತ್ತು 85 ಕ್ವಿಂಟಲ್‌ ಗೋಧಿ ಕೊರತೆ ಕಂಡುಬಂದ ವಿಚಾರವೂ ಚರ್ಚೆಗೆ ಬಂತು.

ಮೈಸೂರು ಉಗ್ರಾಣದ ಹಿರಿಯ ವ್ಯವಸ್ಥಾಪಕರು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ಮುಂದಿನ ವಿಚಾರಣೆಯನ್ನು ನವೆಂಬರ್‌ 11ಕ್ಕೆ ಮುಂದೂಡಲಾಗಿದೆ.

ಆಂದೋಲನ ಡೆಸ್ಕ್

Recent Posts

ವಾಷಿಂಗ್ ಮಷಿನ್‌ನಲ್ಲಿ ಅಡಗಿದ್ದ ೧೦ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ!

ಮಡಿಕೇರಿ: ಮನೆಯ ವಾಷಿಂಗ್ ಮಷಿನ್‌ನೊಳಗೆ ಸುಮಾರು ೧೦ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಅಡಗಿದ್ದ ಘಟನೆ ಮಡಿಕೇರಿ ತಾಲೂಕಿನ…

21 mins ago

ನ.13ಕ್ಕೆ ಪ್ರಧಾನಿ ಮೋದಿ ಮೈಸೂರು ಭೇಟಿ, ಚಾಮುಂಡಿಬೆಟ್ಟದ ತಪ್ಪಲಿನ ತಾರಾಲಯ ಉದ್ಘಾಟನೆ: ಸಂಸದ ಯದುವೀರ್‌ ಒಡೆಯರ್‌ ಮಾಹಿತಿ

ಮೈಸೂರು: ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ ನೂತನ ತಾರಾಲಯವನ್ನು ಅವರು ಉದ್ಘಾಟಿಸಲಿದ್ದಾರೆ…

1 hour ago

ದರಗಳ ಏರಿಕೆಯಿಂದ ಸಂಕಷ್ಟದಲ್ಲಿ ಜನರು

ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…

5 hours ago

ನಾಯಿಗೆ ಮೇಯರ್ ಗಿರಿ…!!

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು…

5 hours ago

ಸಿಎಂ ಅಚ್ಯುತರಾಯರು ಮತ್ತು ಮಂತ್ರಿ ಗುಲ್ಗುಲೆಯೂ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…

6 hours ago

ದೀಪಾವಳಿ ಬಳಿಕ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ

ಕೆ.ಬಿ.ರಮೇಶನಾಯಕ ಕಾಮಗಾರಿ ವೇಳೆ ಒಂದು ಕಡೆ ಸಂಚಾರ ನಿರ್ಬಂಧ; ಮತ್ತೊಂದು ಕಡೆ ಓಡಾಟಕ್ಕೆ ಅವಕಾಶ ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ…

6 hours ago