ಕ್ರೀಡೆ

IND vs AFG 1st t20: ಅಫ್ಘಾನ್‌ ವಿರುದ್ಧ ಅಜೇಯ ಓಟ ಮುಂದುವರೆಸಿದ ಟೀಂ ಇಂಡಿಯಾ!

ಪಂಜಾಬ್‌: ಭಾರತ ಮತ್ತು ಅಫ್ಘಾನಿಸ್ತಾನ್‌ ನಡುವೆ ನಡೆಯುತ್ತಿರುವ ಮೊದಲ ಟಿ೨೦ ಪಂದ್ಯದಲ್ಲಿ, ಶಿವಂ ದುಬೆ ಅವರ ಆಲ್‌ರೌಂಡರ್‌ ಆಟದ ಫಲವಾಗಿ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುಂದಿದೆ.

ಇಲ್ಲಿನ ಪಂಜಾಬ್‌ ಅಸೋಸಿಯೇಷನ್‌ ಬಿಂದ್ರಾ ಸ್ಟೇಡಿಯಂ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಅಫ್ಘನ್‌ ಮೇಲಿನ ತನ್ನ ಅಜೇಯ ಓಟ ಮುಂದುವರೆಸಿದೆ. ಈವರೆಗೆ ಟೀಂ ಇಂಡಿಯಾ ಮತ್ತು ಅಫ್ಘನ್‌ ತಂಡಗಳು 6 ಪಂದ್ಯಗಳನ್ನು ಆಡಿದ್ದು, ಭಾರತ 5 ರಲ್ಲಿ ಗೆದ್ದಿದೆ ಅಫ್ಘನ್‌ ಒಂದು ಪಂದ್ಯವನ್ನು ಗೆದ್ದಿಲ್ಲ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 158 ರನ್‌ ಕಲೆಹಾಕಿತು. ಆರಂಭಿಕ ಆಟಗಾರರಾದ ಗುರ್ಬಾಜ್‌ (23) ಮತ್ತು ನಾಯಕ ಜದ್ರಾನ್‌(25) ಉತ್ತಮ ಆರಂಭ ಒದಗಿಸಿದರು. ಅಜ್ಮತ್ತುಲ್ಲಾ ಒಮರಾಜಿ (29) ರನ್‌ ಬಾರಿಸಿ ತಂಡಕ್ಕೆ ಚೇತರಿಕೆ ರನ್‌ ನೀಡಿದರು. ರಹಮತ್‌ ಕೇವಲ 3 ರನ್‌ ಗಳಿಸಿ ನಿರ್ಗಮಿಸಿದರು.

ಮಾಜಿ ನಾಯಕ ನಬಿ (42) ರನ್‌ ಬಾರಿಸಿ ತಂಡದ ಮೊತ್ತ 150 ರ ಗಡಿ ದಾಟಲು ಸಹಕರಿಸಿದರು. ನಜೀಬುಲ್ಲಾ ಜದ್ರಾನ್ (19) ಕೊನೆಯಲ್ಲಿ ಆರ್ಭಟಿಸಿದರು.

ಟೀಂ ಇಂಡಿಯಾ ಪರ ಮುಖೇಶ್‌ ಕುಮಾರ್‌ 33/2, ಅಕ್ಷರ್‌ ಪಟೇಲ್‌ 23/2 ಮತ್ತು ಶಿವಂ ದುಬೆ 9/1 ವಿಕೆಟ್‌ ಪಡೆದರು.

ಇನ್ನು ಅಫ್ಘನ್‌ ನೀಡಿದ 158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್‌ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ನಂತರ ಜೊತೆಯಾದ ಶುಭ್‌ಮನ್‌ ಗಿಲ್‌ (23) ಮತು ತಿಲಕ್‌ ವರ್ಮಾ (26) ರನ್‌ ಬಾರಿಸಿ ತಂಡಕ್ಕೆ ಚೇತರಿಕೆ ಆಟವಾಡಿದರು. ಜಿತೇಶ್‌ ಶರ್ಮಾ (31) ರನ್‌ ಬಾರಿಸಿದರು.

ಆಲ್‌ರೌಂಡರ್‌ ಶಿವಂ ದುಬೆ 40 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ ಮೂಲಕ 60 ರನ್‌ ಕಲೆ ಹಾಕಿದರು. ರಿಂಕು ಸಿಂಗ್‌ (16) ರನ್‌ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಟೀಂ ಇಂಡಿಯಾ ಅಂತಿಮವಾಗಿ 17.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 159 ರನ್‌ ಕಲೆಹಾಕಿ ಗೆಲುವಿನ ನಗೆ ಬೀರಿತು.

ಅಫ್ಘನ್‌ ಪರ ಮುಜೀಬ್‌ ರಹಮನ್‌ 21/2, ಓಮರಾಜಿ 25/1 ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಶಿವಂ ದುಬೆ

andolanait

Recent Posts

ಓದುಗರ ಪತ್ರ: ಚರಂಡಿಯಿಂದ ವಿದ್ಯುತ್ ಕಂಬವನ್ನು ಬೇರ್ಪಡಿಸಿ

ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿ ಚರಂಡಿ, ಪಾದಚಾರಿಮಾರ್ಗ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸಿದ್ದಲಿಂಗೇಶ್ವರ ಅಂಗಡಿ ಬಳಿ ವಿದ್ಯುತ್…

3 hours ago

ಓದುಗರ ಪತ್ರ: ಬೇಲಿಯೇ ಎದ್ದು ಹೊಲ ಮೇಯ್ದಂತೆ !

ಮೈಸೂರು ನಗರದ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಒಂದರಲ್ಲಿ ಸಾಲ ನೀಡುವಿಕೆಯಲ್ಲಿ ಕೊಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.…

3 hours ago

ಓದುಗರ ಪತ್ರ: ಕೆಪಿಎಸ್‌ಸಿ ಶುದ್ಧೀಕರಣದ ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ…

3 hours ago

ದಸರೆಯ ಹಿಂದೆ ಸಾಗುವ ಗಜಪಡೆ ಮಹಾಯಾನ

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಮಾವುತ - ಆನೆ ನಡುವೆ ಹೃದಯಸ್ಪರ್ಶಿ ಸಂಬಂಧ ಮೈಸೂರು ದಸರಾ ಎಂದಾಕ್ಷಣ ನಮ್ಮ ಕಣ್ಣ…

3 hours ago

ಗರ್ಭಕೋಶ ಕ್ಯಾನ್ಸರ್‌ಗೆ ಲಸಿಕೆ ಅಸ್ತ್ರ

ಚಿರಂಜೀವಿ ಸಿ. ಹುಲ್ಲಹಳ್ಳಿ ಜಿಲ್ಲೆಯಲ್ಲಿ ಎಚ್‌ಪಿವಿ ಅಭಿಯಾನ; ಶೇ.೬೮.೮ರಷ್ಟು ಪ್ರಗತಿ ೧೫,೫೧೮ ಬಾಲಕಿಯರಿಗೆ ಲಸಿಕೆ ನೀಡುವ ಗುರಿ; ೮,೩೬೦ ಸಾಧನೆ…

3 hours ago

ಕೊಡಗಿನಲ್ಲಿ ಇಂದು ಕೈಲ್‌ಪೊಳ್ದ್ ಸಂಭ್ರಮ

ಎಸ್.ಎ. ಹುಸೇನ್ ಆಯುಧಗಳಿಗೆ ವಿಶೇಷ ಪೂಜೆ; ಜಿಲ್ಲೆಯಾದ್ಯಂತ ಸಂಭ್ರಮದ ಹಬ್ಬದಾಚರಣೆಗೆ ಸಿದ್ಧತೆ ಮಡಿಕೇರಿ: ಕೊಡಗಿನ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯ…

4 hours ago