ಕ್ರೀಡೆ

ಹಾಕಿ| ಜೂನಿಯರ್‌ ಏಷ್ಯಾಕಪ್‌: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

ಸಲಾಲ (ಒಮಾನ್‌): ಭಾರತದ ಕಿರಿಯರ ಹಾಕಿ ತಂಡ ಮತ್ತಮ್ಮೆ ಏಷ್ಯಾ ಮಟ್ಟದಲ್ಲಿ ಕಿಂಗ್‌ ಎನಿಸಿಕೊಂಡಿದೆ. ಇಲ್ಲಿ ನಡೆದ ಜೂನಿಯರ್‌ ಏಷ್ಯಾ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು 2-1 ಗೋಲುಗಳಿಂದ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

13ನೇ ನಿಮಿಷದಲ್ಲಿ ಅಂಗದ್‌ ಬೀರ್‌ ಸಿಂಗ್‌, 20ನೇ ನಿಮಿಷದಲ್ಲಿ ಅರೈಜೀತ್‌ ಸಿಂಗ್‌ ಬಾರಿಸಿದ ಗೋಲು ಭಾರತದ ಪಾಲಿಗೆ ವರವಾಗಿ ಪರಣಮಿಸಿತು. ಹಾಗೆಯೇ ಪಾಕ್‌ ಅಕ್ರಮಣವನ್ನು ತಡೆದು ನಿಂತ ಗೋಲ್‌ಕೀಪರ್‌ ಶಶಿಕುಮಾರ್‌ ಮೋಹಿತ್‌ ಹೊನ್ನೇನಹಳ್ಳಿ ಕೂಡ ಪಂದ್ಯದ ಹೀರೋ ಎನಿಸಿದರು.

ಈ ಜಯದೊಂದಿಗೆ ಭಾರತ ಸರ್ವಾಧಿಕ 4 ಸಲ ಜೂನಿಯರ್‌ ಏಷ್ಯಾ ಕಪ್‌ ಪ್ರಶಸ್ತಿ ಜಯಿಸಿದಂತಾಯಿತು. ಇದಕ್ಕೂ ಮುನ್ನ 2004, 2008 ಮತ್ತು 2015ರಲ್ಲಿ ಚಾಂಪಿಯನ್‌ ಆಗಿತ್ತು. ಪಾಕಿಸ್ಥಾನ 3 ಸಲ ಪ್ರಶಸ್ತಿ ಜಯಿಸಿದೆ (1988, 1992 ಮತ್ತು 1996).

ಅಜೇಯ ಅಭಿಯಾನ: ಉತ್ತಮ್‌ ಸಿಂಗ್‌ ನಾಯಕತ್ವದ ಭಾರತ ಅಜೇಯವಾಗಿ ಈ ಕೂಟವನ್ನು ಮುಗಿಸಿತು. “ಪಾಕಿಸ್ಥಾನ ವಿರುದ್ಧದ ಲೀಗ್‌ ಪಂದ್ಯ 1-1ರಿಂದ ಡ್ರಾ ಆಗಿತ್ತು. ಅಲ್ಲಿನ ಕೊರತೆಗಳನ್ನು ಫೈನಲ್‌ನಲ್ಲಿ ನೀಗಿಸಿಕೊಳ್ಳುವುದು ನಮ್ಮ ಯೋಜನೆ ಆಗಿತ್ತು. ಇದು ಯಶಸ್ವಿಯಾಯಿತು’ ಎಂಬುದು ಉತ್ತಮ್‌ ಸಿಂಗ್‌ ಪ್ರತಿಕ್ರಿಯೆ.

ಇದೊಂದು ತಂಡ ಪ್ರಯತ್ನ ಎಂಬುದಾಗಿ ಕೋಚ್‌ ಸಿ.ಆರ್‌. ಕುಮಾರ್‌ ಹೇಳಿದರು. ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 9-1 ಗೋಲುಗಳಿಂದ ಭರ್ಜರಿ ಯಾಗಿ ಮಣಿಸುವ ಮೂಲಕ ಭಾರತ ಪ್ರಶಸ್ತಿ ಸುತ್ತಿಗೆ ನೆಗೆದಿತ್ತು.

ವಿಶ್ವಕಪ್‌ಗೆ ಆಯ್ಕೆ: ಈ ಸಾಧನೆಯಿಂದಾಗಿ ಭಾರತವೀಗ ಮಲೇಷ್ಯಾದಲ್ಲಿ ನಡೆಯುವ ಎಫ್‌ಐಎಚ್‌ ಜೂನಿಯರ್‌ ವಿಶ್ವಕಪ್‌ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದೆ. ಜತೆಗೆ ಭಾರತೀಯ ಹಾಕಿ ಫೆಡರೇಶನ್‌ ಪ್ರತೀ ಹಾಕಿ ಆಟಗಾರರಿಗೆ 2 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.

ಭಾರತೀಯ ಹಾಕಿ ಫೆಡರೇಶನ್‌ ಅಧ್ಯಕ್ಷ ದಿಲೀಪ್‌ ತಿರ್ಕಿ ಕಿರಿಯರ ಸಾಧನೆಯನ್ನು ಕೊಂಡಾಡಿದ್ದಾರೆ. “ಜೂನಿಯರ್‌ ಹಾಕಿಪಟುಗಳು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಸುಲ್ತಾನ್‌ ಆಫ್‌ ಜೊಹರ್‌ ಕಪ್‌ ಬಳಿಕ ತಂಡದಲ್ಲಿ ಹೊಸ ಜೋಶ್‌ ತುಂಬಿದೆ. ವಿಶ್ವಕಪ್‌ನಲ್ಲೂ ಚಾಂಪಿಯನ್‌ ಆಗುವ ನಂಬಿಕೆ ಇದೆ’ ಎಂದಿದ್ದಾರೆ.

andolanait

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

4 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

5 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

5 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

5 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

6 hours ago