ಕ್ರೀಡೆ

400 ಮೀ. ಮೆಡ್ಲೆ ರಿಲೆ ಈಜು: ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಭಾರತ ತಂಡಕ್ಕೆ ಐದನೇ ಸ್ಥಾನ

ಹಾಂಗ್‌ಝೌ : ‘ಬ್ರೆಸ್ಟ್ ಸ್ಟೋಕ್ ದೊರೆ’ ಎನಿಸಿರುವ ಕ್ವಿನ್ ಹೈಯಾಂಗ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಚೀನಾ ತಂಡ ಏಷ್ಯನ್ ಗೇಮ್ಸ್‌ನ ಈಜು ಸ್ಪರ್ಧೆಯ 4×100 ಮೀ. ಮೆಡ್ಲೆ ರಿಲೆಯಲ್ಲಿ ಏಷ್ಯನ್ ದಾಖಲೆಯೊಡನೆ ಚಿನ್ನ ಗೆದ್ದುಕೊಂಡಿತು. ಬೆಳಿಗ್ಗೆ ಹೀಟ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದ ಭಾರತ ತಂಡ ಮಂಗಳವಾರ ಸಂಜೆ ನಡೆದ ಈ ಸ್ಪರ್ಧೆಯ ಫೈನಲ್‌ನಲ್ಲಿ ಐದನೇ ಸ್ಥಾನಕ್ಕೆ ಸರಿಯಿತು.

ಕ್ವಿನ್, ಷು ಜಿಯಾವು, ವಾಂಗ್ ಚಾಂಗ್ ಹಾವೊ ಮತ್ತು ಪಾನ್ ಝಾನ್ ಅವರಿದ್ದ ತಂಡ 39.27.1 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರೈಸಿ ಈಜುಕೊಳದಲ್ಲಿ ಚೀನಾ ಪಾರಮ್ಯವನ್ನು ಮುಂದುವರಿಸಿತು. ದಕ್ಷಿಣ ಕೊರಿಯಾ (3:32.05) ಮತ್ತು ಜಪಾನ್ (3:32.52) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಚೀನಾ ತೈಪೆ 3ನಿ.38.35 ಸೆ. ತೆಗೆದುಕೊಂಡರೆ, ಭಾರತ ತಂಡ (ಶ್ರೀಹರಿ ನಟರಾಜ್, ಲಿಖಿತ್ ಸೆಲ್ವರಾಜ್, ಸಜನ್ ಪ್ರಕಾಶ್ ಮತ್ತು ತನಿಶ್ ಜಾರ್ಜ್) 3ನಿ.40.20 ಸೆ.ಗಳಲ್ಲಿ ಗುರಿಮುಟ್ಟಿತು.

ಬೆಳಿಗ್ಗೆ ಒಂದನೇ ಹೀಟ್ಸ್‌ನಲ್ಲಿ ಭಾರತ ತಂಡ 3 ನಿ. 40.84 ಸೆ.ಗಳಲ್ಲಿ ಗುರಿತಲುಪಿ

ರಾಷ್ಟ್ರೀಯ ದಾಖಲೆ ಸ್ಥಾಪಿಸಿತ್ತು. ಆ ಹಾದಿಯಲ್ಲಿ ಒಟ್ಟಾರೆ ನಾಲ್ಕನೇ ಉತ್ತಮ

ಟೈಮಿಂಗ್‌ನೊಡನೆ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಈ ಹಿಂದಿನ ದಾಖಲೆ (ನಟರಾಜ್, ಸಂದೀಪ್ ಸೆಜ್ವಾಲ್, ಸಜನ್ ಪ್ರಕಾಶ್, ಆ್ಯರನ್ ಡಿಸೋಜ ತಂಡದಿಂದ 3:44.94) 2018ರ ಕ್ರೀಡೆಗಳಲ್ಲಿ ಮೂಡಿಬಂದಿತ್ತು.

ಭಾರತದ ಪಲಕ್ ಜೋಶಿ ಮತ್ತು ಶಿವಾಂಗಿ ಶರ್ಮಾ ತಮ್ಮ ಸ್ಪರ್ಧೆಗಳಲ್ಲಿ ಫೈನಲ್‌ಗೇರಲು ವಿಫಲರಾದರು. ಪಲಕ್, ಮಹಿಳೆಯರ 200 ಮೀ. ಬ್ಯಾಕ್‌ಸ್ಟೋಕ್ ಸ್ಪರ್ಧೆಯಲ್ಲಿ (ಕಾಲ: 2:25.81) 19 ಮಂದಿ ಪೈಕಿ 14ನೇ ಸ್ಥಾನ ಪಡೆದರೆ, ಶಿವಾಂಗಿ 100 ಮೀ. ಫ್ರೀಸ್ಟೈಲ್‌ನಲ್ಲಿ 58.31 ಸೆ.ಗಳಲ್ಲಿ ಗುರಿತಲುಪಿ 17ನೇ ಸ್ಥಾನ ಗಳಿಸಿದರು.

andolanait

Recent Posts

ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ

ಕೃಷ್ಣಾ ಸಿದ್ದಾಪುರ ವಿರಾಜಪೇಟೆ: ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕೆಲಸಕ್ಕೆ ತೆರಳಿದ್ದ…

51 mins ago

ಮಾಜಿ ಸಿಎಂ ದೇವರಾಜ ಅರಸು ನೂತನ ಪ್ರತಿಮೆ ಅನಾವರಣ

ಮೈಸೂರು: ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಮಾಜಿ ಸಿಎಂ ದೇವರಾಜ ಅರಸು ಅವರ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.…

1 hour ago

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್: ಮೂವರು ಸಿಎಂಗಳಿಂದ ಲೋಕಾರ್ಪಣೆ

ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್‌ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.…

2 hours ago

ಮಾವು ಬೆಳೆಗಾರರ ನೆರವಿಗೆ ಬಂದ ಕೇಂದ್ರ ಸರ್ಕಾರ: ತೋತಾಪುರಿಯ ಒಂದು ಕ್ವಿಂಟಲ್‌ಗೆ ₹1,750 ನಿಗದಿ

ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶಿವರಾಜ್ ಸಿಂಗ್…

3 hours ago

ಪ್ರಕೃತಿ ವಿಕೋಪ ನಿರ್ವಹಣೆ: ಜಿಲ್ಲೆಗಳ ಮೇಲುಸ್ತುವಾರಿಗೆ ಸಚಿವರ ನೇಮಕ

ಬೆಂಗಳೂರು: ರಾಜ್ಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಸಚಿವರಿಗೆ ವಿವಿಧ ಜಿಲ್ಲೆಗಳ ಮೇಲುಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಸೂಚನೆ…

3 hours ago

ವೆನಿಜುವೆಲಾ ದೇಶದಲ್ಲಿ ಕಂಡು ಕೇಳರಿಯದ ಭೀಕರ ಭೂಕಂಪ

ವೆನಿಜುವೆಲಾ: ವೆನಿಜುವೆಲಾ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಭೂಕಂಪ ಸಂಭವಿಸಿ ಸಾವಿರಾರು ಜನ ಸಾವನ್ನಪ್ಪಿದ್ದು, ಭಾರೀ ಪ್ರಮಾಣದ ಜನರು…

4 hours ago