ನವದೆಹಲಿ : ನಾಳೆಯಿಂದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2024) ಆರಂಭವಾಗಿದ್ದು, ಅಲ್ಲಿ ಕಂಪನಿಯು ನೆಕ್ಸಾನ್ ಸಿಎನ್‌ಜಿ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಲಿದೆ ಎಂಬ ಮಾಹಿತಿ ಲಭ್ಯವಿದೆ.
ಟಾಟಾ, ನೆಕ್ಸಾನ್ ಸಿಎನ್‌ಜಿ (Nexon CNG) ಮಾತ್ರವಲ್ಲದೆ ನೆಕ್ಸಾನ್ ಇವಿ ಡಾರ್ಕ್ (Nexon EV Dark), ಸಫಾರಿ ಡಾರ್ಕ್ (Safari Dark), ಕರ್ವ್ವ್ ಕಾನ್ಸೆಪ್ಟ್ (Curvv Concept), ಆಲ್ಟ್ರೊಜ್ ರೇಸರ್ ಕಾನ್ಸೆಪ್ಟ್ (Harrier EV Concept) ಸೇರಿದಂತೆ 8 ಕಾರುಗಳನ್ನು ಪ್ರದರ್ಶಿಸಲಿದೆ. ಕಂಪನಿ ಈ ಕಾರುಗಳು ಆಕರ್ಷಕ ವೈಶಿಷ್ಟ್ಯ ಮತ್ತು ವಿನ್ಯಾಸವನ್ನು ಹೊಂದಿರುವ ನೀರಿಕ್ಷೆಯಿದೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿರುವ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿ, 1.2-ಲೀಟರ್ ಟರ್ಬೊ ಪೆಟ್ರೋಲ್, ಫ್ಯಾಕ್ಟರಿ ಫಿಟೆಡ್ ಟ್ವಿನ್ ಸಿಲಿಂಡರ್ ಸಿಎನ್‌ಜಿ ಎಂಜಿನ್ ಹೊಂದಿರುವ ಸಾಧ್ಯತೆಯಿದೆ.
ಇದರ ಫ್ಯುಯೆಲ್ (ಸಿಎನ್‌ಜಿ) ಟ್ಯಾಂಕ್ 60 ಲೀಟರ್ ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ. ಈಗಾಗಲೇ, ನೆಕ್ಸಾನ್ ಎಸ್‌ಯುವಿ ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ರೂಪದಲ್ಲಿ ದೊರೆಯುತ್ತದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್ ಸಿಎನ್‌ಜಿ ಕಾರು, 26.99 kmpl ಮೈಲೇಜ್ ನೀಡುತ್ತದೆ. ಮುಂಬರಲಿರುವ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿ ಅದಕ್ಕಿಂತ ಹೆಚ್ಚಿನ ಮೈಲೇಜ್ ಕೊಡಲಿದೆ ಎಂದು ಅಂದಾಜಿಸಲಾಗಿದೆ.
ಇಂಧನ – ಎಲೆಕ್ಟ್ರಿಕ್ ಚಾಲಿತ ನೆಕ್ಸಾನ್, ಕ್ರಮವಾಗಿ ರೂ.8.10 ಲಕ್ಷ, ರೂ.14.74 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿವೆ. ಸಿಎನ್‌ಜಿ ಕಾರು ಇವೆರಡರ ನಡುವೆ ಬೆಲೆಯನ್ನು ಹೊಂದಿರಬಹುದು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಕೆಲಸದ ವೇಳೆಯಲ್ಲಿ ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಕ್ಕೆಂದು ಕಚೇರಿಗಳಿಗೆ ಹೋದರೆ…
ಎಚ್.ಡಿ.ಕೋಟೆ ತಾಲ್ಲೂಕಿನಿಂದ ಹ್ಯಾಂಡ್‌ಪೋಸ್ಟ್ ಮಾರ್ಗವಾಗಿ ಮಾದಾಪುರ ಕಡೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಬೆಳಿಗ್ಗೆ ೬.೩೦ಕ್ಕೆ , ಮಧ್ಯಾಹ್ನ…
ಇತ್ತೀಚಿನ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಸುಮಾರು ೩೭ ಅಂಕಗಳ ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿರುವುದು ಅಥವಾ ಅತೀವ ಕ್ಲಿಷ್ಟಕರವಾಗಿರುವುದು ಶಿಕ್ಷಣ ಇಲಾಖೆಯ…
ಕೆ.ಬಿ.ರಮೇಶನಾಯಕ ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದಿಂದಾಗಿ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿದ್ದವರ ಮನೆಗಳಲ್ಲಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು…
ಹೆಚ್.ಎಸ್. ದಿನೇಶ್‌ಕುಮಾರ್ ಚುನಾಯಿತ ಪ್ರತಿನಿಧಿಗಳಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಮೈಸೂರು: ಜವಾಬ್ದಾರಿಯುತ ಹಾಗೂ ಜನರ ಪರ ಆಲೋಚಿಸುವ ಜನಪ್ರತಿನಿಧಿಗಳಿಲ್ಲದಿದ್ದಲ್ಲಿ ಏನೆಲ್ಲಾ…