ದೇಶ- ವಿದೇಶ

ವೃದ್ಧರ ಜೊತೆಯಾಗಲಿರುವ ಗುಡ್ ಫೆಲೋಸ್ ಸ್ಟಾರ್ಟ್‌ಪ್‌ ಕಂಪನಿಗೆ ಕೈ ಜೋಡಿಸಿದ ಟಾಟಾ

ನವದೆಹಲಿ : ರತನ್ ಟಾಟಾ ಅಂದ್ರೇನೆ ಬತ್ತದ ಉತ್ಸಾಹ, ಸಾಧನೆಗೆ ಪ್ರೇರಕ ಶಕ್ತಿ. ಹೊಸ ಉದ್ಯಮಕ್ಕೆ ಕೈ ಹಾಕುವ ಯುವಪಡೆಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುವ ರತನ್ ಟಾಟಾ ಸದ್ಯ ಅಂಥದ್ದೇ ಒಂದು ಕಾರ್ಯ ಮಾಡಿದ್ದಾರೆ. ಇಳಿವಯಸ್ಸಿನಲ್ಲಿ ಒಂಟಿತನದಿಂದ ಬಳಲುವ ವೃದ್ಧರಿಗೆ ಜೊತೆಯಾಗುವ ವಿನೂತನ ಸ್ಟಾರ್ಟಪ್‌ ಕಂಪನಿಯಲ್ಲಿ ಸ್ವತಃ ಹಿರಿಯ ನಾಗರಿಕರಾಗಿರುವ ರತನ್ ಟಾಟಾ ಹೂಡಿಕೆ ಮಾಡೋದಾಗಿ ಘೋಷಿಸಿದ್ದಾರೆ. ಆ.16ರಂದು ಪ್ರಾರಂಭವಾದ ಮುಂಬೈ ಮೂಲದ ಗುಡ್ ಫೆಲೋಸ್ ಎಂಬ ಸ್ಟಾರ್ಟ್ ಅಪ್ ಗೆ 84 ವರ್ಷದ ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಬೆನ್ನಲುಬಾಗಿ ನಿಂತಿದ್ದಾರೆ.  ಈ ಆ್ಯಪ್ ನ ಸಂಸ್ಥಾಪಕ ಶಂತನು ನಾಯ್ಡು ರತನ್ ಟಾಟಾ ಅವರ ಸಹಾಯಕರಾಗಿ  2018ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ಶಂತನು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದಿದ್ದು, ಈ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಈ ಸ್ಟಾರ್ಟಪ್‌ ಯುವ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತದೆ. ಅವರು ಹಿರಿಯ ನಾಗರಿಕರಿಗೆ ಮೊಮ್ಮಕ್ಕಳ ಮಾದರಿಯಲ್ಲೇ ನೆರವು ನೀಡುತ್ತಾರೆ.

ಈ ಯುವ ಜನರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಇನ್ನು ಈ ಕಂಪನಿಯ ಸೇವೆ ಆಯ್ಕೆ ಮಾಡುವ ಹಿರಿಯ ನಾಗರಿಕರಿಗೆ  ‘ಗ್ರ್ಯಾಂಡ್ ಪಲ್’ ಎನ್ನಲಾಗುತ್ತದೆ. ಪ್ರತಿ ಗ್ರ್ಯಾಂಡ್ ಪಲ್ ಗೆ ಅವರಿಗೆ ಹೊಂದಿಕೆಯಾಗುವ ಗುಡ್ ಫೆಲೋಸ್ ಅನ್ನು ಒದಗಿಸೋದೇ ಈ ಕಂಪನಿಯ ಉದ್ದೇಶ. ‘ಜೊತೆಗಾರಿಕೆ ಅನ್ನೋದು ವಿಭಿನ್ನ ಜನರಿಗೆ ವಿಭಿನ್ನ ಸಂಗತಿಯಾಗಿದ್ದು, ಈ ಸ್ಟಾರ್ಟಪ್‌ ಅದಕ್ಕೆ ಮಹತ್ವ ನೀಡುತ್ತದೆ. ಕೆಲವರಿಗೆ ಟಿವಿ ನೋಡೋದು, ಇನ್ನೂ ಕೆಲವರಿಗೆ ಹಳೆಯ ಕಥೆಗಳನ್ನು ಹೇಳಲು ಜೊತೆಗಾರರ ಅಗತ್ಯವಿರುತ್ತದೆ. ನಾವು ಅದೆಲ್ಲವನ್ನೂ ಒದಗಿಸುತ್ತೇವೆ. ಈ ಕಂಪನಿಯಲ್ಲಿ ಟಾಟಾ ಅವರ ಹೂಡಿಕೆ ಈ ಪರಿಲ್ಪನೆಗೆ ನಾವು ನೀಡಿರುವ ಶ್ರದ್ಧೆಗೆ ಸಿಕ್ಕ ಬಹುದೊಡ್ಡ ಪ್ರೋತ್ಸಾಹದ ಮೂಲ’ ಎಂದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಶಂತನು ಹೇಳಿದರು.

ಈ ಸ್ಟಾರ್ಟಪ್‌  ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿರಿಯ ನಾಗರಿಕರು ಈ ಆ್ಯಪ್ ಗೆ ಹಣ ನೀಡಿ ಚಂದಾದಾರರಾಗಬಹುದು. ಒಂದು ತಿಂಗಳು ಉಚಿತವಾಗಿ  ಈ ಸಂಸ್ಥೆಯ ಸೇವೆಗಳ ಅನುಭವ ಪಡೆಯಲು ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಗುತ್ತದೆ. ಎರಡನೇ ತಿಂಗಳಿಂದ ಸೇವೆಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಚಂದಾದಾರಿಕೆ ಶುಲ್ಕ ವೈಯಕ್ತಿಕ ಯೋಜನೆ ಆಯ್ಕೆ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಶುಲ್ಕವನ್ನು ಸಮರ್ಥಿಸಿಕೊಂಡಿರುವ ಕಂಪನಿ, ತನ್ನ ಯುವ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಒದಗಿಸೋದು ಕೂಡ ಅಗತ್ಯವಾಗಿದೆ ಎಂದು ಹೇಳಿದೆ.

ಈ ವಿನೂತನ ಸ್ಟಾರ್ಟಪ್‌ ಕಂಪನಿಯಲ್ಲಿ ರತನ್ ಟಾಟಾ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯಿಲ್ಲ. ಆದ್ರೆ ಈ  ಸ್ಟಾರ್ಟಪ್‌ ಬಗ್ಗೆ ರತನ್ ಟಾಟಾ ಆಸಕ್ತಿ ಹೊಂದಿರೋದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಅವರು ಆಡಿದ ಮಾತುಗಳಲ್ಲೇ ವ್ಯಕ್ತವಾಗಿತ್ತು. ‘ಜೊತೆಗಾರರಿಗಾಗಿ ಹಂಬಲಿಸುತ್ತ ಏಕಾಂಗಿಯಾಗಿ ಸಮಯ ಕಳೆಯುವ ತನಕ ನಿಮಗೆ ಒಂಟಿತನದ ಅನುಭವ ಗೊತ್ತಾಗಿರೋದಿಲ್ಲ’ ಎಂದು ಅವರು ಹೇಳಿದ್ದರು.

ಪ್ರಾರಂಭದಲ್ಲಿ ಕಂಪನಿ ಮುಂಬೈನಲ್ಲಿ ಕಾರ್ಯನಿರ್ವಹಿಸುವ ಯೋಜನೆ ಹೊಂದಿದೆ. ಆದರೆ, ನಿಧಾನವಾಗಿ ಪುಣೆ, ಚೆನ್ನೈ ಹಾಗೂ ಬೆಂಗಳೂರಿಗೆ ತನ್ನ ಕಾರ್ಯಗಳನ್ನು ವಿಸ್ತರಿಸುವ ಗುರಿ ಹೊಂದಿದೆ. ಆಸಕ್ತರು thegoodfellows.in ಸೈನ್ ಅಪ್ ಆಗಬಹುದು ಅಥವಾ 91 8779524307 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು.

ಯುವಜನರು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೊಳ್ಳಬಹುದು. ಇವರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಸೈಕಾಮೆಟ್ರಿ ಟೆಸ್ಟ್ ಮೂಲಕ ಅವರನ್ನು ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಮುಂಬಯಿಯಲ್ಲಿ 800 ಪದವೀಧರರು ಪರೀಕ್ಷೆಗೆ ಕೂತಿದ್ದರಂತೆ, ಅವರಲ್ಲಿ ತೇರ್ಗಡೆಯಾದವರು ಕೇವಲ 20 ಮಂದಿಯಷ್ಟೇ!

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

9 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago