Dark grunge style background with blood splatters
ಮುಂಬೈ: 1993ರ ಬಾಂಬೆ ಸರಣಿ ಸ್ಫೋಟದ ಆರೋಪಿ ಮೊಹಮದ್ ಅಲಿಖಾನ್‍ನನ್ನು ಭಾನುವಾರ(ಜೂ.2) ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರದ ಜೈಲಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳು ಕೊಲೆ ಮಾಡಿದ್ದಾರೆ. ಈ ಆರೋಪಿಗಳು ಮೊಹಮದ್ ಅಲಿಖಾನ್‍ರ ಶಿರಚ್ಛೇದ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪ್ರತೀಕ್ ಪಾಟೀಲ್, ದೀಪಕ್ ಖೋಟ್, ಸಂದೀಪ್ ಚವ್‍ಹಾಣ್, ರಿತುರಾಜ್ ಇನಾಮದಾರ್ ಮತ್ತು ಸೌರಭ್‍ಸಿದ್ಧ ಎಂಬುವ ಖೈದಿಗಳೇ ಮೊಹಮ್ಮದ ಅಲಿಖಾನ್‌ನನ್ನು ಹತ್ಯೆ ಮಾಡಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ವಿವರ
ಮೊಹಮದ್ ಅಲಿಖಾನ್ ಇದ್ದ ಬ್ಯಾರಕ್‌ನಲ್ಲಿಯೇ, ಇನ್ನೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳನ್ನು ಇರಿಸಲಾಗಿತ್ತು.
ಮೃತ ಮೊಹಮದ್ ಅಲಿ ಖಾನ್ ಸೇರಿದಂತೆ ಈ ಎಲ್ಲಾ ಆರೋಪಿಗಳು ಒಂದೇ ಬ್ಯಾರಕ್‍ನಲ್ಲಿ ಇದ್ದರು. ಇದರಿಂದಾಗಿ ಅವರ ನಡುವೆ ಏನಾದರೂ ಜಗಳವಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲ್ಲಾಪುರ ಜೈಲಿನಲ್ಲಿರುವ ಮುಂಬೈ ಸ್ಫೋಟದ ಇತರ ಆರೋಪಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೈಲಿನೊಳಗೆ ನಡೆದ ಈ ಹತ್ಯೆಗೆ ಪ್ರಮುಖ ಕಾರಣ ಏನು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಜೈಲು ಇಲಾಖೆಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಸ್ವಾತಿ ಸಾಠೆ ಮಾಹಿತಿ ನೀಡಿದ್ದಾರೆ.
ಯಾರು ಈ ಮೊಹಮ್ಮದ್ ಅಲಿಖಾನ್
ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಮೊಹಮದ್ ಅಲಿಖಾನ್ ಅಲಿಯಾಸ್ ಮುನ್ನಾ ಅಲಿಯಾಸ್ ಮನೋಜ್‍ಕುಮಾರ್ ಭನ್ವರ್‍ಲಾಲ್ ಗುಪ್ತಾ ಕೋಲ್ಹಾಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಐವರು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 1993ರ ಮಾರ್ಚ್ 12ರಂದು ಬಾಂಬೆ ಸ್ಟಾಕ್ ಎಕ್ಸ್ ಚೆಂಜ್ 28 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 50 ಜನರು ಸಾವನ್ನಪ್ಪಿದರು. ಅರ್ಧ ಗಂಟೆಯ ನಂತರ ಕಾರಿನಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು ಮತ್ತು ಒಂದರ ನಂತರ ಒಂದರಂತೆ ಸರಣಿ ಸ್ಫೋಟಗಳು ಪ್ರಾರಂಭವಾದವು. ಎರಡು ಗಂಟೆಗಳಲ್ಲಿ ಮುಂಬೈನ 12 ಸ್ಥಳಗಳಲ್ಲಿ 13 ಸ್ಫೋಟಗಳು ಸಂಭವಿಸಿವೆ. ಈ ಸರಣಿ ಸ್ಫೋಟಗಳಲ್ಲಿ 257 ಜನರು ಸಾವನ್ನಪ್ಪಿದ್ದರು ಮತ್ತು 713 ಜನರು ಗಾಯಗೊಂಡಿದ್ದರು.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…