ದೇಶ- ವಿದೇಶ

ಜಮ್ಮು-ಕಾಶ್ಮೀರ| ಕಮರಿಗೆ ಬಿದ್ದ ಸೇನಾ ವಾಹನ: ಇಬ್ಬರು ಯೋಧರ ದುರ್ಮರಣ, ಮೂವರಿಗೆ ಗಂಭೀರ ಗಾಯ

ಜಮ್ಮು-ಕಾಶ್ಮೀರ: ಇಲ್ಲಿನ ಬಂಡಿಪೋರಾ ಜಿಲ್ಲೆಯಲ್ಲಿ ಸೇನಾ ವಾಹನ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಸೇನಾ ಯೋಧರು ಮೃತ ಪಟ್ಟಿದ್ದು, ಮೂವರು ಯೋಧರಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಉತ್ತರ ಕಾಶ್ಮೀರ ಜಿಲ್ಲೆಯ ಎಸ್‌.ಕೆ.ಪಯೆನ್‌ ಸಮೀಪ ಸೇನಾ ವಾಹನವೂ ರಸ್ತೆಯಿಂದ ಆಯಾ ತಪ್ಪಿ ಕಮರಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೇ ಈ ದುರ್ಘಟನೆಯಲ್ಲಿ ಇಬ್ಬರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಸ್ರತ್‌ ಇಕ್ಬಾಲ್‌ ಅವರು, ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರು ಸೈನಿಕರಿಗೆ ಚಿಕಿತ್ಸೆ ನೀಡಿದ ನಂತರ ಶ್ರೀನಗರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರದ ಪೂಂಛ್‌ ಜಿಲ್ಲೆಯ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಮೃತಪಟ್ಟಿದ್ದರು.

 

ಅರ್ಚನ ಎಸ್‌ ಎಸ್

Recent Posts

ಕೋಲ್ಕತ್ತಾ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 19ಕ್ಕೆ ಏರಿಕೆ

ಕೋಲ್ಕತ್ತಾ: ದುರ್ಗಾಪೂಜೆ ಸಂಭ್ರಮದ ನಡುವೆ ಭೀಕರ ದುರಂತ ಸಂಭವಿಸಿದೆ. ಉತ್ತರ ಕೋಲ್ಕತ್ತಾದ ಚೋರ್‌ಬಗಾನ್‌ನ ಜನಪ್ರಿಯ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ…

3 hours ago

ಪಾಣಾಜೆಯಲ್ಲಿ ಅತ್ಯಧಿಕ ಮಳೆ: 16.7 ಸೆಂಟಿಮೀಟರ್ ದಾಖಲು!

ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯದಲ್ಲೇ ಅತ್ಯಧಿಕ 16.7 ಸೆಂಟಿಮೀಟರ್ ಮಳೆ ದಾಖಲಾಗಿದೆ. ಶನಿವಾರ…

3 hours ago

ಅಕ್ರಮ ಕೇರಳ ಲಾಟರಿ ಮಾರಾಟ: ಓರ್ವ ಬಂಧನ

ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್‌ಗಳನ್ನು ವಶಕ್ಕೆ…

6 hours ago

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…

6 hours ago

ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ

ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…

6 hours ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

8 hours ago