ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ಸ್ ತಂಡದ ವಿಮಾನಗಳು ಮೂರು ಸುತ್ತಿನ ಹಾರಾಟ ನಡೆಸಿದ ಬಳಿಕ ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು.
ಆಕಾಶದಲ್ಲಿ ವಿಮಾನಗಳ ರೋಚಕ ಕಸರತ್ತುಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಬೆಳಗ್ಗಿನಿಂದಲೇ ಆಗಮಿಸಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಪೂರ್ಣ ಪ್ರಮಾಣದ ಪ್ರದರ್ಶನ ನಡೆಸಲು ಸಾಧ್ಯವಾಗಲಿಲ್ಲ. ಮೂರು ಸುತ್ತು ಹಾರಾಟ ನಡೆಸಿದ ವಿಮಾನಗಳು ಬಳಿಕ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಹಿಂದಿರುಗಿದವು.
“ಬೆಳಗ್ಗೆ ಒಂಬತ್ತು ಗಂಟೆಗೇ ಟಿಕೆಟ್ ಪಡೆದು ಬಂದಿದ್ದೆವು. ಗಂಟೆಗಟ್ಟಲೇ ಕಾದರೂ ಸಂಪೂರ್ಣ ಏರ್ ಶೋ ನೋಡಲು ಆಗಲಿಲ್ಲ. ನಾಳೆ ಮತ್ತೆ ಬರೋಣ ಎಂದರೆ ನಮ್ಮ ಬಳಿ ಟಿಕೆಟ್ ಇಲ್ಲ. ಈ ದಸರಾದಲ್ಲಿ ವಿಮಾನಗಳ ಕಸರತ್ತು ನೋಡಬೇಕೆಂದು ಬಹಳ ಆಸೆಯಿಂದ ಬಂದಿದ್ದೆವು. ಆದರೆ ನಿರಾಸೆಯಾಯಿತು,” ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ, “ನಾಳೆ ಹವಾಮಾನ ಅನುಕೂಲಕರವಾಗಿದ್ದರೆ ಪೂರ್ಣ ಪ್ರಮಾಣದ ಏರ್ ಶೋ ನಡೆಸುತ್ತೇವೆ,” ಎಂದು ಸಿಬ್ಬಂದಿ ತಿಳಿಸಿದ್ದಾರೆ. ಇದೀಗ ನಾಳೆಯ ಹವಾಮಾನ ಹಾಗೂ ಸಂಪೂರ್ಣ ಪ್ರದರ್ಶನದತ್ತ ಪ್ರೇಕ್ಷಕರ ನಿರೀಕ್ಷೆ ನೆಟ್ಟಿದೆ.
ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್ಗಳನ್ನು ವಶಕ್ಕೆ…
ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…
ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…
ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…
ದೆಹಲಿ ಕಣ್ನೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ…