ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್ಗಳನ್ನು ವಶಕ್ಕೆ ಪಡೆದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 6ನೇ ವಾರ್ಡ್ನ ಸಂತೇಮಾಳ ನಿವಾಸಿ ಜಮೀರ್ ಪಾಷಾ(49) ಬಂಧಿತ ಆರೋಪಿ. ಈತ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕೇರಳ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಟ್ಟಣ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಸುಮಾರು 1,68,000 ರೂ. ಮೌಲ್ಯದ 3360 ಲಾಟರಿ ಟಿಕೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ ಎಚ್.ವಿ.ಸ್ವಾಮಿ ಹಾಗೂ ನೇತೃತ್ವದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…
ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…
ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…
ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…
ದೆಹಲಿ ಕಣ್ನೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ…