ಮೈಸೂರು : ಬಣ್ಣ ಬಣ್ಣಗಳ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆ, ರಂಜಿಸಿದ ಮಲೆಯಾಳಂ ಗೀತೆ ಹಾಗೂ ಯುವ ಮನಸ್ಸುಗಳ ಕುಣಿತಗಳ ನಡುವೆ ಕೇರಳದ ‘ಥೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ ಅಂಬಾವಿಲಾಸ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಂಗೀತದ ಹೊಳೆಯನ್ನೇ ಹರಿಸಿತು.
೩೦ಕ್ಕೂ ಹೆಚ್ಚು ದೇಶಗಳಲ್ಲಿ ೮೦೦ಕ್ಕೂ ಹೆಚ್ಚು ಸಂಗೀತ ಪ್ರರ್ದಶಿಸಿ ಅಪಾರ ಅಭಿಮಾನಿಗಳನ್ನಿ ಪ್ರಂಪಚದ್ಯಾಂತ ಗಳಿಸಿರುವ ಥೈಕ್ಕುಡಂ ಬ್ರಿಡ್ಜ್ ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರದರ್ಶನ ನೀಡಿತು.
ಕೇರಳದ ವಿದ್ಯಾರ್ಥಿಗಳು ಬ್ಯಾಂಡ್ ವೀಕ್ಷಣೆಗೆ ಅರಮನೆ ತುಂಬಿದ್ದರು. ಎಲ್ಲರಿಗೂ ನಮಸ್ಕಾರ ದಸರಾ ಹಬ್ಬದ ಶುಭಾಶಯಗಳು ಆರ್ಥಿಕ ಶುಭಾಶಯಗಳು ಎಂದು ಕನ್ನಡದಲ್ಲೇ ಹೇಳಿ ನವರಸಂ ಗೀತೆಯನ್ನು ಬ್ಯಾಂಡ್‌ನ ಸದಸ್ಯರು ಪ್ರಸ್ತುತಪಡಿಸಿದರು.
ಇದನ್ನು ಓದಿ : ಮೈಸೂರಿನಲ್ಲಿ ವಿಂಟೇಜ್ ಕಾರುಗಳ ಹವಾ
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಯೋಜನೆಯ ‘ರೆಟ್ಟ್ತ್ಯೈ ವಾಲ್ ಕುರುವಿ’ ಸಿನಿಮಾದ ‘ರಾಜರಾಜ ಸೋ ಳನ್ನ….’ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.
ತೇರಿ ದಿವಾನಿ ದಿವಾನಿ… ಗೀತೆಯನ್ನು ಭಾವನಾತ್ಮಕವಾಗಿ ಹಾಡಿ ಪ್ರೇಕ್ಷಕರ ಮನಮುಟ್ಟಿದರು. ಬಳಿಕ ಶಾಸ್ತ್ರೀಯ ಆಲಾಪದೊಂದಿಗೆ ‘ಓಂಶಿವೋಂ ರುದ್ರನಾಮ….’ ಎಂಬ ಗೀತೆ ಹಾಡಿ ಭಕ್ತಿ ಸಂಚಲನ ಮೂಡಿಸಿದರು. ನಂತರ ತಮಿಳಿನ ೯೬ ಸಿನಿಮಾದ ‘ಕಾತಲೆ ಕಾತಲೆ’ ಹಾಡಡು ಯುವಸಮೂಹವನ್ನು ಬೇರೊಂದು ಲೋಕಕ್ಕೆ ಕೊಂಡ್ಯೊಯಿತು. ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಹಲವಾರು ಆಲ್ಬಂ ಹಾಡುಗಳನ್ನು ಹಾಡುಗಳನ್ನು ತಮ್ಮ ವಿಶಿಷ್ಟ ರಾಕ್ ಬ್ಯಾಂಡ್ ಮ್ಯೂಸಿಕ್ ಮೂಲಕ ಹಾಡಿ ನೋಡುಗರನ್ನು ರಂಜಿಸಿದರು.
ಇದಕ್ಕೂ ಮುನ್ನ ರಘುರಾಮ್ ಮತ್ತು ತಂಡ ಕರ್ನಾಟಕ ಶಾಸ್ತ್ರಿಯ ಸಂಗೀತದ ಮೂಲಕ ಶಾಸ್ತ್ರಿಯ ಸಂಗೀತ ರಸಿಕರಿಗೆ ಸಂಗೀತ ರಸದೌತಣ ನೀಡಿದರು ಹಾಗೂ ಡಾ. ಶ್ವೇತಾ ಮಡಪ್ಪಾಡಿ ಅವರು ಜನಪದ ಶೈಲಿಯಲ್ಲಿ ಮಾದಪ್ಪನ ಜನಪದ ಗೀತೆ ಹಾಗೂ ಹಲವು ದೇವರ ಗೀತೆಗಳನ್ನು ತಮ್ಮದೇ ವಿಶಿಷ್ಟ ಶೈಲಿ ಗಾಯನದಿಂದ ಮೋಡಿ ಮಾಡಿದರು.
ಎರಡನೇ ದಿನ ಅರಮನೆ ಆವರಣದಲ್ಲಿ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಆಸನಗಳೆಲ್ಲ ಭರ್ತಿ ಆಗಿದ್ದು, ಸಾವಿರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಣೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಕಾರಿ ಲಕ್ಷ್ಮಿಕಾಂತ್ ರೆಡ್ಡಿ ಉಪಸ್ಥಿತರಿದ್ದರು.
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…
ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…
ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…