ನಮ್ಮ ಮೈಸೂರ ದಸರಾ 2025

ಕವಿ ವಿಶ್ವಮಾನವ ಪ್ರಜ್ಞೆ ಹೊಂದಲಿ : ನಾಡಗೀತೆಗೆ ನೂರರ ಸಂಭ್ರಮದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಸಲಹೆ

ಮೈಸೂರು : ದಸರೆಯ ಅಂಗವಾಗಿ ನಡೆಯುವ ಕವಿಗೋಷ್ಠಿಯು ವಿಶ್ವವಿಖ್ಯಾತ ಎನ್ನುವ ವಾಡಿಕೆ ಉಂಟು. ಆದರೆ, ಅದು ವಿಶ್ವಮಾನ್ಯವಾಗಬೇಕಾದರೇ ವಿಶ್ವದ ಕವಿಗಳನ್ನು ಗೋಷ್ಠಿಗೆ ಆಹ್ವಾನಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಮೈಸೂರು ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ನಾಡಗೀತೆಗೆ ನೂರರ ಸಂಭ್ರಮ-ಸಾವಿರಾರು ಸ್ವರಗಳ ಸಂಗಮ ಮತ್ತು ಪಂಚಕಾವ್ಯದೌತಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಸರೆ ಕವಿಗೋಷ್ಠಿಯಲ್ಲಿ ಈಗ ಹಮ್ಮಿಕೊಂಡಿರುವ ಪಂಚ ಕವಿಗೋಷ್ಠಿಗಳೂ ಕೂಡ ಬಹಳ ಉತ್ತಮವಾದ ಗೋಷ್ಠಿಗಳೇ. ಆದರೆ ದಸರೆಯ ವಿಖ್ಯಾತಿ ವಿಶ್ವಮಟ್ಟಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಲುಪಬೇಕು. ಅದಕ್ಕಾಗಿ ಪ್ರತಿವರ್ಷ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬೇರೆ-ಬೇರೆ ದೇಶಗಳ, ನಮ್ಮ ದೇಶದ ಸುಮಾರು ಏಳೆಂಟು ಮಂದಿಯನ್ನು ಆಹ್ವಾನಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:- ಬೌದ್ಧರುದ್ಯಾನ ಪದ ಸೇರಿಸಿ ನಾಡಗೀತೆ ಪೂರ್ಣಗೊಳಿಸಿ : ಪ್ರೊ.ಅರವಿಂದ ಮಾಲಗತ್ತಿ

ಸರ್ಕಾರದಿಂದ ನಾಡಗೀತೆ ನೂರರ ಸಂಭ್ರಮ ಆಯೋಜಿಸಿ
ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಅವರು ರಚಿಸಿರುವ ಗೀತೆಯನ್ನು ಅಧಿಕೃತ ನಾಡಗೀತೆಯಾಗಿ ಘೋಷಣೆ ಮಾಡಿದೆ. ನಾಡಗೀತೆಗೆ ನೂರು ವರ್ಷಗಳು ತುಂಬಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಮತ್ತು ಮುಖ್ಯಮಂತ್ರಿಗಳು ಚರ್ಚಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ದಸರಾ ಕವಿಗೋಷ್ಠಿಯಲ್ಲಿ ವಿಶ್ವದ ಕವಿಗಳನ್ನು ಆಹ್ವಾನಿಸುವ ವಿಚಾರವಾಗಿ ನಿರ್ಧಾರ ತಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಯುವ ಸಮುದಾಯದ ಕವಿ ಮನಸ್ಸು
ಈಗ ಕವಿಗಳ ಕಾಲವಲ್ಲ. ಕುಣಿಯುವ ಕಾಲ. ಕವಿಗಳ ಹಾಡಿಗೆ, ಗಾಯನಕ್ಕೆ ಯುವ ಸಮೂಹ ಡ್ಯಾನ್ಸ್ ಮಾಡುವುದನ್ನು ನೋಡಿದರೆ ಅವರಿಗೆಲ್ಲ ಕವಿ ಮನಸ್ಸು ಇದೇ ಎನ್ನುವುದು ಗೊತ್ತಾಗಲಿದೆ. ಆದರೆ ಅವರು ಮನಸ್ಸು ಮಾಡುತ್ತಿಲ್ಲ. ಕವಿ ಮತ್ತು ಕಲಾವಿದರಾಗಲು ಯುವ ಮನಸ್ಸುಗಳು ಮನಸ್ಸು ಮಾಡಬೇಕು. ರೀಲ್ಸ್‌ಗಳ ರೀಲು ಬಿಡುವುದನ್ನು ಬಿಟ್ಟು ಮಾತುಗಳನ್ನು ಅಭಿವ್ಯಕ್ತಿಗೊಳಿಸಿ, ದಾಖಲು ಮಾಡಬೇಕು. ಬೇರೆ-ಬೇರೆ ಹಾಡುಗಳಿಗೆ ಕುಣಿಯುವುದು-ಧ್ವನಿಯಾಗುವುದನ್ನು ಬಿಟ್ಟು ನಿಮ್ಮ ಹಾಡಿಗೆ ನೀವೇ ಧ್ವನಿಯಾಗಬೇಕು. ನೀವೇ ಕುಣಿಯುಂತೆ ಆಗಬೇಕು ಎಂದು ಮಾಲಗತ್ತಿ ಆಶಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಯುವ ಸಮೂಹವು ಮೊಬೈಲ್ ಬಳಕೆ ಕಡಿಮೆ ಮಾಡಿ, ಆ ಸಮಯದಲ್ಲಿ ಉತ್ತಮ ಪುಸ್ತಕಗಳು, ಗ್ರಂಥಗಳನ್ನು ಓದಬೇಕು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇರುವ ಹಳೇ ತಾಳೆಗರಿಗಳ ವಿಷಯಗಳನ್ನು ಡಿಜಿಟಲೀಕರಣ ಮಾಡಲು ಸರ್ಕಾರವು ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.

ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಟಿ.ದೇವೇಗೌಡ, ಡಿ.ರವಿಶಂಕರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾಽಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕವಿಗೋಷ್ಠಿ ಉಪ ಸಮಿತಿ ವಿಶೇಷಾಧಿಕಾರಿ ಜಿ.ಎಸ್. ಸೋಮಶೇಖರ್,ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ.ಲೋಲಾಕ್ಷಿ ಮತ್ತಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

37 mins ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

3 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

3 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

7 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

12 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

12 hours ago