ಮೈಸೂರು ನಗರ

ನನ್ನ ಹೆಸರಿನಲ್ಲಿ ಈಶ್ವರ, ರಾಮ ಇಬ್ಬರು ಇದ್ದಾರೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಹಿಂದೂ ಕಾರ್ಯಕರ್ತರು ಟಾರ್ಗೆಟ್ ಆಗುತ್ತಿದ್ದಾರೆ ಎಂಬ ವಿಪಕ್ಷಗಳ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಬಿಜೆಪಿ ನಾಯಕರ ಮೇಲೆ ಎಫ್‌ಐಆರ್‌ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲಿ ಈಶ್ವರ, ರಾಮ ಇಬ್ಬರು ಇದ್ದಾರೆ. ಬಿಜೆಪಿ ನಾಯಕರು ಪ್ರಚೋದನಕಾರಿ ಭಾಷಣ ಮಾಡ್ತಿದ್ದಾರೆ. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಾನು ಯಾರ ಮೇಲೂ ಎಫ್‌ಐಆರ್ ಹಾಕಿ ಎಂದು ಹೇಳಿಲ್ಲ. ಪೊಲೀಸರು ಅವರ ಕರ್ತವ್ಯ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.

ಇದನ್ನು ಓದಿ: ದಸರಾ ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ವಿಚಾರ: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು.!

ಇನ್ನು ಜಾತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು ಜಾತಿಗಣತಿ ಮಾಡ್ತಿದ್ದಾರೆ. ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಮತಾಂತರ ಆದ್ರೆ ಅದನ್ನು ಸೇರಿಸಿ ಹಾಕ್ತಾರೆ ಈಗ ನಾನು ಹಿಂದೂ ಮುಸ್ಲಿಂಗೆ ಕನ್ವರ್ಟ್ ಆಗಿದ್ದೀನಿ ಅಂತ ಇಟ್ಟುಕೊಳ್ಳೋಣ ಧರ್ಮ ಬದಲಾವಣೆ ಆದ್ರೆ ಹಂಗೆ ಬರುತ್ತದೆ. ಅದರಲ್ಲಿ ಹೊಸ ಜಾತಿ ಅಂತ ಬರಲ್ಲ. ನಾನು ಎಲ್ಲೇ ಇರಲಿ ಮುಸ್ಲಿಂ ಕ್ರಿಶ್ಚಿಯನ್ ಯಾವ ಧರ್ಮದಲ್ಲಿ ಇದ್ರೂ ಅದೇ ಬರುತ್ತೆ. ಮತಾಂತರಗೊಳ್ಳೋದು ಅವರ ಇಷ್ಟ ಸಂವಿಧಾನದಲ್ಲಿ ಅದಕ್ಕೆ ಅವಕಾಶ ಇದೆ. ಬಿಜೆಪಿ ಅವ್ರು ಕೆಲವರು ಕನ್ವರ್ಷನ್ ಆಗಿದ್ದಾರೆ ಎಂದು ಹೇಳಿದರು.

ಇನ್ನು ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತನಿಖೆ ಅನಗತ್ಯ ವಿಳಂಬ ಆಗ್ತಿದೆ ಅಂತ ನನಗೇನೂ ಅನಿಸುತ್ತಿಲ್ಲ ಸರ್ಕಾರ ತನಿಖೆಯಲ್ಲಿ ತಲೆ ಹಾಕಲ್ಲ. ತನಿಖೆ ವಿಳಂಬ ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಆಂದೋಲನ ಡೆಸ್ಕ್

Recent Posts

ಬಸ್-ಲಾರಿ ಡಿಕ್ಕಿ: ಚಾಲಕ ಸಾವು, ಹಲವು ಪ್ರಯಾಣಿಕರಿಗೆ ಗಾಯ

ರಾಜೇಶ್ ಬೆಂಡರವಾಡಿ ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ…

23 mins ago

ಓದುಗರ ಪತ್ರ: ಕುಂಭೇಶ್ವರ ಕಾಲೋನಿ ರೈತರ ಜಮೀನು ವಿವಾದ ಪರಿಹರಿಸಿ

ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ದಿ.ಬಿ.ರಾಚಯ್ಯ ಅವರು ಸಚಿವರಾಗಿದ್ದಾಗ ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಸರ್ವೆ ನಂ.೩ರಲ್ಲಿ…

31 mins ago

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಅರ್ಧ ಲೀಟರ್ ನೀರಿನ ಬಾಟಲಿ ಕೊರತೆ

ಮೈಸೂರಿನ ರೈಲು ನಿಲ್ದಾಣ ಸೇರಿದಂತೆ, ರಾಜ್ಯದ ಯಾವುದೇ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್…

34 mins ago

ಓದುಗರ ಪತ್ರ: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಯಾವಾಗ?

ಮೈಸೂರು ಮಹಾ ನಗರ ಪಾಲಿಕೆ ಚುನಾಯಿತ ಸದಸ್ಯರ ಅವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಆದರೆ ಸರ್ಕಾರ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ.…

37 mins ago

ಓದುಗರ ಪತ್ರ: ಅಡ್ಡಾದಿಡ್ಡಿ ವಾಹನ ಚಾಲನೆಗೆ ಕಡಿವಾಣ ಹಾಕಿ

ಮೈಸೂರಿನ ಶಿವರಾಮ್ ಪೇಟೆ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರ ಹಾಗೂ ರಾಜ್ ಕಮಲ್ ಥಿಯೇಟರ್ ನಡುವೆ ಬರುವ ವೃತ್ತದಲ್ಲಿ ದಿನನಿತ್ಯ…

40 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ವಿಶಾಲ್ ಸಿಂಗ್ ಎಂಬ ಬಡರೋಗಿಗಳ ಅನ್ನದಾತ

ಪಂಜುಗಂಗೊಳ್ಳಿ  ಊಟವಿಲ್ಲದೆ ಪರದಾಡಿದ ಘಟನೆಯೇ ನಿರಂತರ ದಾಸೋಹಕ್ಕೆ ಪ್ರೇರಣೆ ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತ…

42 mins ago