ಮೈಸೂರು ನಗರ

ನಾವು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇರಬೇಕು: ಶಾಸಕ ಜಿ.ಡಿ.ಹರೀಶ್‌ ಗೌಡ

ಮೈಸೂರು: ನಾವು ನೋಡುವ ದೃಷ್ಟಿ ಸರಿಯಾಗಿದ್ದರೆ ಯಾಕೆ ನಮ್ಮನ್ನು ಟ್ರ್ಯಾಪ್‌ ಮಾಡುತ್ತಾರೆ ಎಂದು ಹುಣಸೂರು ಜೆಡಿಎಸ್‌ ಶಾಸಕ ಜಿ.ಡಿ.ಹರೀಶ್‌ ಗೌಡ ಅವರು ಕಾಂಗ್ರೆಸ್‌ ಕೆಲ ಸಚಿವರ ವಿರುದ್ಧ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರೀ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್‌ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇರಬೇಕು. ನಾವು ಸರಿಯಾಗಿದ್ದರೆ ಯಾರು ಯಾಕೆ ನಮ್ಮನು ಟ್ರ್ಯಾಪ್ ಮಾಡುತ್ತಾರೆ. ನಮ್ಮ ದೃಷ್ಟಿ ಸರಿ ಇದ್ದಾಗ ಯಾವ ತಪ್ಪು ನಡೆಯಲ್ಲ. ಸಾವಿರ ಜನ ಬಂದು ನಮ್ಮನ್ನು ಮಾತಾಡಿಸಲಿ ನಮ್ಮ ನೋಟ ಸರಿ ಇದ್ದರೆ ಏನೂ ಆಗಲ್ಲ ಎಂದು ಕಾಂಗ್ರೆಸ್ ಕೆಲ ಸಚಿವರ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಇನ್ನು ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಚರ್ಚೆ ಅಗಬಾರದಿತ್ತು. ಯಾರಿಗೆ ಸಮಸ್ಯೆ ಆಗಿದೆಯೋ ಅವರು ಹೋಗಿ ದೂರು ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಸದನದಲ್ಲಿ ಹನಿಟ್ರ್ಯಾಪ್ ಚರ್ಚೆ ಮಾಡಿ ಯುವ ಶಾಸಕರಿಗೆ ಯಾವ ಸಂದೇಶ ಕೊಟ್ಟರು? ಇದರ ಅಗತ್ಯ ಏನಿತ್ತು? ಎಂದು ಬೇಸರ ವ್ಯಕ್ತಪಡಿಸಿದರು.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಓದುಗರ ಪತ್ರ: ಈಡೇರಿದ ಭಾರತ್ ಜೋಡೋ ಪಾದಯಾತ್ರೆ ಆಶ್ವಾಸನೆ

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಉದ್ಯೋಗ ಪತ್ರ ನೀಡಲಾಗಿದೆ. ೨೦೨೩ರಲ್ಲಿ ಕಾಂಗ್ರೆಸ್ ನಾಯಕ…

1 hour ago

ಓದುಗರ ಪತ್ರ: ಅರ್ಥಪೂರ್ಣ ಲೇಖನ

‘ಆಂದೋಲನ’ ದಿನ ಪತ್ರಿಕೆಯ ಏ.೧೯ರ ‘ಹಾಡು ಪಾಡು’ ಸಂಚಿಕೆಯಲ್ಲಿ ‘ಪಂಪ ಪ್ರಶಸ್ತಿ’ ಸಂದ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರ ಬಗ್ಗೆ…

1 hour ago

ಓದುಗರ ಪತ್ರ: ಹಾರ್ಡಿಂಜ್ ವೃತ್ತದಲ್ಲಿರುವ ನಿಲ್ದಾಣದಲ್ಲೇ ಬಸ್ ನಿಲುಗಡೆಯಾಗಲಿ

ಮೈಸೂರಿನ ಹಾರ್ಡಿಂಜ್ ವೃತ್ತದ ಮೂಲಕ ಮೈಸೂರಿನಿಂದ- ಚಾಮರಾಜ ನಗರ, ಗುಂಡ್ಲುಪೇಟೆ, ಹಾಸನ, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಹಾಗೂ ಇನ್ನಿತರ ಸ್ಥಳಗಳ…

2 hours ago

ಕರ್ನಾಟಕ ಸಂಘದ 2 ಪ್ರತಿಷ್ಠಿತ ಪ್ರಶಸ್ತಿಗಳ ಪ್ರದಾನಕ್ಕೆ ಸಜ್ಜು

ಪ್ರೊ.ಬಿ.ಜಯಪ್ರಕಾಶ್‌ಗೌಡ  ಡಾ.ರಾಮೇಗೌಡ, ದಿ.ಸಿಂಗಾರಿಗೌಡ ಹೆಸರಲ್ಲಿ ಗೌರವ  ವಿಮರ್ಶಕ, ಜಾನಪದ ತಜ್ಞ ಡಾ.ರಾಮೇಗೌಡ ಮತ್ತು ಸರಳ ಸಜ್ಜನ ರಾಜಕಾರಣಿ ದಿ. ಸಿಂಗಾರಿಗೌಡ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ನೆನಪಿನಂಗಳದಲ್ಲಿ ಗಾಜನೂರು

ವೈಡ್‌ ಆಂಗಲ್ ಬಾ.ನಾ.ಸುಬ್ರಹ್ಮಣ್ಯ  ಏಪ್ರಿಲ್ ೧೨, ೨೦೦೬. ಶಿವರಾಜಕುಮಾರ್ ಅಭಿನಯದ ‘ಕುಮಾರ ರಾಮ; ಚಿತ್ರದ ಚಿತ್ರೀಕರಣ. ಭಾರ್ಗವ ನಿರ್ದೇಶಕರು. ಹಂಪಿಯಲ್ಲಿ…

2 hours ago

ಎಸ್‌ಎಸ್‌ಎಲ್‌ಸಿ ಫಲಿತಾಂಶ; ಕೊಡಗಿಗೆ 8ನೇ ಸ್ಥಾನ

ನವೀನ್ ಡಿಸೋಜ ಮಡಿಕೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ಕೊಡಗು ಈ ಬಾರಿ ೮ನೇ…

2 hours ago