Andolana originals

ಎಸ್‌ಎಸ್‌ಎಲ್‌ಸಿ ಫಲಿತಾಂಶ; ಕೊಡಗಿಗೆ 8ನೇ ಸ್ಥಾನ

ನವೀನ್ ಡಿಸೋಜ

ಮಡಿಕೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ಕೊಡಗು ಈ ಬಾರಿ ೮ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಕಳೆದ ಸಲಕ್ಕಿಂತ ಈ ಬಾರಿ ೧೪.೫ರಷ್ಟು ಹೆಚ್ಚಿನ ಫಲಿತಾಂಶ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ ೫,೯೪೮ ವಿದ್ಯಾರ್ಥಿಗಳಲ್ಲಿ ೫,೭೪೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೯೬.೫೪ ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ಶೈಕ್ಷಣಿಕ ವರ್ಷಾರಂಭದಿಂದಲೇ ಶಾಲಾ ಶಿಕ್ಷಣ ಇಲಾಖೆ ಫಲಿತಾಂಶ ವೃದ್ಧಿಸುವನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮಳೆಗಾಲದಲ್ಲಿ ಧಾರಾಕಾರ ಮಳೆ ಯಿಂದಾಗಿ ಈಬಾರಿ ಹೆಚ್ಚು ರಜೆಗಳನ್ನು ನೀಡ ಲಾಗಿತ್ತಾದರೂ ಶನಿವಾರಗಳಂದು ಪೂರ್ಣ ತರಗತಿಗಳನ್ನು ನಡೆಸುವ ಮೂಲಕ ಅದನ್ನು ಸರಿದೂಗಿಸಿಕೊಳ್ಳಲಾಗಿತ್ತು.

೨ ಬಾರಿ ಪ್ರಿಪರೇಟರಿ, ಕಲಿಕಾ ಆಧಾರದ ಮೇಲೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಿದ ಪರಿಣಾಮ ಜಿಲ್ಲೆ ಈ ಬಾರಿ ಕಳೆದ ಸಲಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದುಕೊಂಡಿದೆ. ಕಳೆದ ಬಾರಿ ಶೇ.೮೨ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ೪ನೇ ಸ್ಥಾನ ಪಡೆದಿದ್ದ ಜಿಲ್ಲೆ ಈಬಾರಿ ಶೇ.೧೪.೫೪ರಷ್ಟು ಫಲಿತಾಂಶ ವೃದ್ಧಿಸಿಕೊಂಡಿದೆ.

ಆದರೆ ಇತರೆ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಫಲಿತಾಂಶ ಸಿಕ್ಕಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ೮ನೇ ಸ್ಥಾನ ಲಭಿಸಿದೆ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ೨,೯೦೪ ವಿದ್ಯಾರ್ಥಿಗಳಲ್ಲಿ ೨,೭೭೬ ಮಂದಿ ಉತ್ತೀರ್ಣರಾಗಿ ಶೇ.೯೫.೫೯ ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದಿದ್ದ ಒಟ್ಟು ೩,೦೪೪ ವಿದ್ಯಾರ್ಥಿನಿಯರಲ್ಲಿ ೨,೯೬೬ ಮಂದಿ ಉತ್ತೀರ್ಣರಾಗಿ ಶೇ.೯೭.೪೪ ರಷ್ಟು ಫಲಿತಾಂಶ ಪಡೆದಿದ್ದಾರೆ. ಶೈಕ್ಷಣಿಕ ತಾಲ್ಲೂಕುವಾರು ಫಲಿತಾಂಶ ಗಮನಿಸಿದರೆ ಸೋಮವಾರಪೇಟೆ ತಾಲ್ಲೂಕಿಗೆ ಅತಿ ಹೆಚ್ಚು ಫಲಿತಾಂಶ ಬಂದಿದೆ. ಮಡಿಕೇರಿ ತಾಲ್ಲೂಕು ಶೇ.೯೫.೩೫, ಸೋಮವಾರಪೇಟೆ ಶೇ.೯೭.೫೦, ವಿರಾಜಪೇಟೆ ಶೇ.೯೬.೨೫ ರಷ್ಟು ಫಲಿತಾಂಶ ಪಡೆದುಕೊಂಡಿದೆ.

” ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒಟ್ಟು ೬೨೫ ಅಂಕಗಳಿಗೆ ೬೨೧ ಅಂಕಗಳನ್ನು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಟಿ.ಟಿ.ಲಿನ್ಸಿ ದೇಚಮ್ಮ ಅವರು ೬೨೧ ಹಾಗೂ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯ ಕೆ.ಐ.ಸಿಂಚನ ೬೨೧ ಅಂಕ ಪಡೆದಿದ್ದಾರೆ.ಉಳಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯ ಡೀನ್ ಸೆಲ್ವ ಡಿಸೋಜ ೬೨೦, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಶಿವಾನಿ ಶಾರದಮಣಿ, ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ಯು.ಎಸ್.ಶ್ರೀವತ್ಸ, ಗೋಣಿಕೊಪ್ಪ ಕಳತ್ಮಾಡುವಿನ ಲಯನ್ಸ್ ಪ್ರೌಢಶಾಲೆಯ ಸಿದ್ಧಾರ್ಥ ಕಾವೇರಪ್ಪ ಇವರು ೬೧೯ ಅಂಕಪಡೆದಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢಶಾಲೆಯ ಕೆ.ಇ.ಸೋನಶ್ರೀ, ಗೋಣಿಕೊಪ್ಪ ಸೇಂಟ್ ಥಾಮಸ್ ಪ್ರೌಢಶಾಲೆಯ ನಮನ. ಈ ಇಬ್ಬರೂ ೬೧೮ ಅಂಕಪಡೆದಿದ್ದಾರೆ. ಸೋಮವಾರಪೇಟೆಯ ಅವರ್ ಲೇಡಿ ಆಫ್ ವಿಕ್ಟೋರಿಯಸ್ ಪ್ರೌಢಶಾಲೆಯ ತಾನ್ವಿ, ವಿರಾಜಪೇಟೆಯ ಶ್ರೀ ಕಾವೇರಿ ಪ್ರೌಢಶಾಲೆಯ ಮೊಹಮ್ಮದ್ ಶಿಫಾನ್, ಕೊಡಗರಳ್ಳಿಯ ಶಾಂತಿನಿಕೇತನ ಪ್ರೌಢಶಾಲೆಯ ರೆನಿತ್ ಈ ಮೂವರು ೬೧೭ ಅಂಕ ಪಡೆದಿದ್ದಾರೆ”

೮೪ ಪ್ರೌಢಶಾಲೆಗಳಿಗೆ ಶೇ.೧೦೦ ಫಲಿತಾಂಶ..!: 

ಜಿಲ್ಲೆಯ ೧೪೦ ಪ್ರೌಢಶಾಲೆಗಳಲ್ಲಿ ೮೪ ಶಾಲೆಗಳು ಶೇ.೧೦೦ ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ. ಇದರಲ್ಲಿ ೪೭ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ೩೭ ಪ್ರೌಢ ಶಾಲೆಗಳು ಶೇ.೧೦೦ಫಲಿತಾಂಶ, ಅನು ದಾನಿತ ೪೦ ಪ್ರೌಢಶಾಲೆಗಳಲ್ಲಿ ೧೦ ಶಾಲೆಗಳು ಶೇ.೧೦೦ರಷ್ಟು, ಅನುದಾನ ರಹಿತ ೫೩ ಪ್ರೌಢ ಶಾಲೆಯಲ್ಲಿ ೩೭ ಪ್ರೌಢಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದಿವೆ.

” ನನಗಿಂತ ಹೆಚ್ಚು ಶಿಕ್ಷಕರು ಶ್ರಮಪಟ್ಟಿದ್ದಾರೆ. ನಾನು ಶಿಕ್ಷಕರು ಹೇಳಿದಂತೆ ಕೇಳಿ ನಡೆದುಕೊಂಡಿರುವೆ ಅಷ್ಟೇ. ರಿವಿಷನ್ ಸಮಯದಲ್ಲಿ ಸ್ವಲ್ಪ ಹೆಚ್ಚು ಓದಿದ್ದೆ. ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದೇನೆ. ಮಾಹಿತಿ ಮತ್ತು ಮನರಂಜನೆಗೆ ಯೂಟ್ಯೂಬ್ ನೋಡುತ್ತೇನೆ ಅಷ್ಟೇ.

-ಕೆ.ಐ.ಸಿಂಚನಾ, ಶಾಂತಿನಿಕೇತನ ಪ್ರೌಢಶಾಲೆ, ಕೊಡಗರಹಳ್ಳಿ 

” ಕಳೆದ ಬಾರಿ ಶೇ.೮೨ ರಷ್ಟು ಫಲಿತಾಂಶ ಪಡೆದು ಕೊಡಗು ಜಿಲ್ಲೆ ರಾಜ್ಯದಲ್ಲಿ ೪ನೇ ಸ್ಥಾನ ಪಡೆದಿತ್ತು. ಈ ಬಾರಿ ಸ್ಥಾನದಲ್ಲಿ ಬದಲಾವಣೆ ಕಂಡುಬಂದಿದ್ದರೂ ಕಳೆದಬಾರಿಗಿಂತ ಈ ಬಾರಿ ಶೇ.೧೪.೫೪ ರಷ್ಟು ಫಲಿತಾಂಶ ವೃದ್ಧಿಯಾಗಿದೆ.”

-ಬಸವರಾಜು, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ 

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

7 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

7 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

13 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

13 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

13 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

13 hours ago