ಮೈಸೂರು ನಗರ

ಶಾಲಾ ಮಕ್ಕಳಿಂದ ಹೆರಿಟೇಜ್‌ ಫ್ಲ್ಯಾಶ್‌ಮೊಬ್‌ ಪ್ರದರ್ಶನ : ಮನಗೆದ್ದ ಹೆರಿಟೇಜ್ ಟ್ರೆಷರ್ ಹಂಟ್

ಮೈಸೂರು : ಮುಂಜಾನೆಯ ಚುಮುಚುಮು ಚಳಿಗೆ, ಸೂರ್ಯ ಇನ್ನೂ ಮಂಜಿನ ನಡುವೆ ಕಣ್ಣು ಬಿಡುವ ಮುನ್ನವೇ ಅರಮನೆಯ ಕೋಟೆ ಆಂಜನೇಯ ದೇಗುಲದ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ನಗರದ ಪಾರಂಪರಿಕ ಶ್ರೀಮಂತಿಕೆ ಸಾರುವ ‘ಫ್ಲ್ಯಾಶ್ ಮೊಬ್’ ಅನಾವರಣಗೊಂಡಿತು. ಸುಮಾರು ಅರ್ಧಗಂಟೆಗಳ ಕಾಲ ನಗರದ ಪೂರ್ಣಚೇತನ ಶಾಲೆಯ ೧೭೦ ಮಕ್ಕಳು ೧೪ ಚಾರಿತ್ರಿಕ, ಜಾನಪದ, ದೇಶ ಪ್ರೇಮದ ಗೀತೆಗಳ ಮೂಲಕ ಹೊಸ ಲೋಕಕ್ಕೆ ನೋಡುಗರನ್ನು ಕೊಂಡೊಯ್ದರು.

ಫ್ಲ್ಯಾಶ್ ಮೊಬ್ ಬಳಿಕ, ನಗರದ ಇತಿಹಾಸ, ಪರಂಪರೆ ಆಧಾರಿತ ಹೆರಿಟೇಜ್ ಟ್ರೆಷರ್ ಹಂಟ್ ಅನ್ನು ಖ್ಯಾತ ಮೂಳೆ ತಜ್ಞ ಡಾ.ಟಿ.ಎನ್.ಬಾಲಕೃಷ್ಣೇ ಗೌಡ ಉದ್ಘಾಟಿಸಿ, ಈ ಹೆರಿಟೇಜ್ ಟ್ರೆಷರ್ ಹಂಟ್ ನ ವಿಜೇತರಿಗೆ ಬಿ.ಕೆ.ಜಿ. ಆವಾಂತ ಆಸ್ಪತ್ರೆಯಲ್ಲಿ ಐದು ಸಾವಿರ ರೂಪಾಯಿಗಳ ಉಚಿತ ವೈದ್ಯಕೀಯ ಪರೀಕ್ಷೆಗಳನ್ನು ಘೋಷಿಸಿದರು.

ಇದನ್ನು ಓದಿ: ರಾಜ್ಯದಲ್ಲಿ ಇಬ್ಬರು ತಲೆಕೆಟ್ಟ ಮಂತ್ರಿಗಳಿದ್ದಾರೆ: ಶಾಸಕ ಜನಾರ್ಧನ ರೆಡ್ಡಿ

ಖ್ಯಾತ ಶ್ವಾಸಕೋಶ ತಜ್ಞ ಡಾ.ಲಕ್ಷ್ಮೀನರಸಿಂಹನ್ ಮಾತನಾಡಿದರು.

ಭಾಗವಹಿಸಿದ ಪ್ರತೀ ತಂಡಕ್ಕೂ ಕಾರ್ಯಕ್ರಮದ ಆರಂಭದಲ್ಲೇ ೧೦ ಸುಳಿವುಗಳನ್ನು ಒಳಗೊಂಡ ವಿಶೇಷ ಟ್ರೆಷರ್ ಕಿಟ್ ನೀಡಲಾಗಿತ್ತು. ಚೆಲುವಾಂಬ ಮ್ಯಾನ್ಷನ್, ರೈಲ್ವೆ ನಿಲ್ದಾಣ, ಓಆರ್‌ಐ, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿ ಹಳೆ ಕಚೇರಿ, ಪುರಭವನ ಹೀಗೆ ನಗರದ ಪ್ರಮುಖ ಪಾರಂಪರಿಕ ಸ್ಥಳಗಳನ್ನು ಪತ್ತೆ ಹೆಚ್ಚುವ ಸವಾಲು ಒಡ್ಡಲಾಗಿತ್ತು.

೧ ಗಂಟೆ ೧೮ ನಿಮಿಷದಲ್ಲಿ ಈ ಸವಾಲು ಪೂರ್ತಿ ಮಾಡಿದ ಪೂರ್ಣ ಚೇತನ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹೃದ್ಯ ಹಾಗೂ ಆಕೆಯ ತಂದೆ ಭುವನೇಶ್ವರ್ ಪ್ರಥಮ ಸ್ಥಾನ ಪಡೆದರು. ಆಟೋ ಮೂಲಕ ಅವರು ಈ ಸವಾಲು ಪೂರ್ತಿಗೊಳಿಸಿದರು. ಅದೇ ಶಾಲೆಯ ಏಳನೇ ತರಗತಿಯ ಇನ್ನೋರ್ವ ವಿದ್ಯಾರ್ಥಿನಿ ಆರೋಹಿ ಸಿಂಗ್ ಹಾಗೂ ಆಕೆಯ ತಂದೆ ಸಂತೋಷ್ ಕುಮಾರ್ ಸಿಂಗ್ ದ್ವಿತೀಯ ಪ್ರಶಸ್ತಿ ಪಡೆದರು. ಕೆ.ಆರ್. ನಗರದ ವಾಸವಿ ಸಾಂಸ್ಕೃತಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಋತ್ವಿ ಹಾಗು ತೇಜೇಶ್ ಗೌಡ ತೃತೀಯ ಸ್ಥಾನ ಪಡೆದರು. ಕ್ರಮವಾಗಿ ೧೦,೦೦೦,೭,೫೦೦ ಮತ್ತು ೫,೦೦೦ ರೂ. ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು. ಶಾಲೆಯ ಸಿಇಒ ದರ್ಶನ್ ರಾಜ್, ಮುಖ್ಯಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಕಾರ್ಯದರ್ಶಿ ಡಾ.ರಜಿನಿ, ಟ್ರಸ್ಟಿ ಪ್ರವೀಣ್ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

9 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

12 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

13 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

13 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

13 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

13 hours ago