ಮೈಸೂರು: ಈ ಬಾರಿಯ ಅದ್ದೂರಿ ದಸರಾ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. ಅದರಂತೆ ಅರಮನೆಯು ಜಗಮಗಿಸಲು 20 ಸಾವಿರ ನೂತನ ಬಲ್ಬ್‌ಗಳ ಅಳವಡಿಕೆಯ ಕಾರ್ಯವು ಭರದಿಂದ ಸಾಗಿದೆ.
ಗಾಳಿ ಮಳೆಯಿಂದ ಹಾಳಾಗಿದ್ದ ವಿದ್ಯುತ್ ಬಲ್ಬ್ ಗಳನ್ನು ತೆಗೆದು ನೂತನ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯವನ್ನು ಅರಮನೆ ಮಂಡಳಿಯ ವಿದ್ಯುತ್ ವಿಭಾಗದ 12 ಸಿಬ್ಬಂದಿಗಳು ಮಾಡಿದ್ದಾರೆ.
ಸೋಮವಾರದಿಂದ ಅರಮನೆಯ ಎಲ್ಲಾ ದ್ವಾರಗಳು ಮತ್ತು ಒಳಾಂಗಣಕ್ಕೆ ಬಣ್ಣ ಲೇಪನದ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ ವರಾಹ, ಬಲರಾಮ ಹಾಗೂ ಜಯಮಾರ್ತಾಂಡ ದ್ವಾರಗಳು ಸೇರಿದಂತೆ ಆವರಣದಲ್ಲಿರುವ ಎಲ್ಲಾ ದೇಗುಲಗಳು ಮತ್ತು ಕೋಟೆಗಳನ್ನು ಒಳಗೊಂಡಂತೆ ಇನ್ನಿತರ ಎಲ್ಲಾ ಭಾಗಗಳಿಗೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಅರಮನೆಯ ಒಳಾಂಗಣದಲ್ಲಿ ಮಸಿಯಾಗಿದ್ದ ಅಲಂಕೃತ ದೀಪಗಳ ಗಾಜುಗಳನ್ನು ಕೆಳಗೆ ಇಳಿಸಿ ಅವುಗಳಲ್ಲಿರುವ ಕೊಳೆಯನ್ನು ತೆಗೆದು ಹೊಳೆಯುವಂತೆ ಮಾಡಲಾಗಿದೆ. ಅಲ್ಲದೇ ಅರಮನೆ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ಬದಲಿಸಿ, ಎತ್ತರದ ಕಂಬಗಳಿಗೆ ಕ್ರೇನ್‌ನ ಮೂಲಕ ದುರಸ್ತಿ ವ್ಯವಸ್ಥೆಯನ್ನು ಕೈಗೆತ್ತಿಕೊಂಡು ಸರಿಪಡಿಸಲಾಗುತ್ತಿದೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಳೆಯ…
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮ್‌ಗಳನ್ನು ಅಳವಡಿಸಲಾಗಿದೆ ಎಂದು…
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸಚಿವ ಯತೀಂದ್ರ ಅವರ ಏಕಚಕ್ರಾಧಿಪತ್ಯ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ವಿಶ್ವನಾಥ್…
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ಕಾವೇರಿ…
ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…