ಮೈಸೂರು ನಗರ

ಬಿಜೆಪಿಯದ್ದು ಧರ್ಮಯಾತ್ರೆಯಲ್ಲ, ರಾಜಕೀಯ ಯಾತ್ರೆ: ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು: ಬಿಜೆಪಿಯವರು ಮಾಡುವ ಯಾತ್ರೆ ಧರ್ಮಯಾತ್ರೆಯಲ್ಲ, ಅದು ರಾಜಕೀಯ ಯಾತ್ರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಎನ್.ಐ.ಎ ತನಿಖೆ ಮಾಡಿಸಿ ಅಂತ ಹೇಳ್ತಾರೆ. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ವಾ? ಬಿಜೆಪಿ ಮೊದಲು ತನಿಖೆ ಮಾಡಿ ಅಂತ ಹೇಳಲೇ ಇಲ್ಲ. ಡೆಡ್ ಬಾಡಿ ಸಿಗದೆ ಹೋದ ಮೇಲೆ ಹೇಳಿಕೆ ಕೊಡಲು ಶುರು ಮಾಡಿದ್ರು. ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಅವರ ಮೇಲೆ ಆರೋಪವಿದೆ. ಆದರೆ ಅವರೆ ಸ್ವಾಗತ ಮಾಡಿದ್ದಾರೆ. ನಾವು ತನಿಖೆ ಮಾಡಿಸುತ್ತಿದ್ದೇವೆ. ಯಾರು ಕೂಡ ನಾನು ಇಂಟರ್ ಫಿಯರ್ ಆಗಿಲ್ಲ ಎಂದರು.

ಇನ್ನು ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದುಡ್ಡು ಬಂದಿರೋದು ಬಿಜೆಪಿಗೆ. ಇಷ್ಟೆಲ್ಲಾ ಮಾಡ್ತಿದ್ದಾರೆ ಎಲ್ಲಿಂದ ದುಡ್ಡು ಬರುತ್ತೆ? ಯಾರು ಕೊಡೋರು ಇವರಿಗೆ. ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು. ವಿರೋಧ ಪಕ್ಷ ಟೀಕೆ ಮಾಡಲಿ. ಇವರು ರಾಜಕೀಯಕ್ಕೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಸೌಜನ್ಯ ಕೇಸ್ ರಿ ಓಪನ್ ಆಗುತ್ತಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಬಿಐ ತನಿಖೆ ಮಾಡಿ ವರದಿ ಕೊಟ್ಟಿದೆ. ಸೌಜನ್ಯ ಕುಟುಂಬ ಸುಪ್ರೀಂ ಕೋರ್ಟ್ಗೆ ಹೋಗಲಿ. ಸೌಜನ್ಯ ಕೇಸ್ ಆರೋಪ ಬಂದಿರೋದು ವೀರೇಂದ್ರ ಹೆಗಡೆ ಕುಟುಂಬದ ಮೇಲೆ. ಬಿಜೆಪಿಯವರು ಯಾರ ಪರ? ಕೋರ್ಟ್‌ಗೆ ಹೋಗೋದು ಬಿಡೋದು ಸೌಜನ್ಯ ಕುಟುಂಬದವರಿಗೆ ಸೇರಿದ್ದು. ಬಿಜೆಪಿಯವರು ಒಂದು ಕಡೆ ವೀರೇಂದ್ರ ಹೆಗಡೆಗೆ ಜೈ ಅಂತಾರೆ. ಇನ್ನೊಂದು ಕಡೆ ಸೌಜನ್ಯ ಪರ ಅಂತಾರೆ. ಇದರಲ್ಲೂ ರಾಜಕೀಯ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಲೇಖಕಿ ಬಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು ಅಂಬಾರಿ ಮೇಲೆ ಕೂರಿಸಿ ಮೆರವಣಿಗೆ ಮಾಡಿದರು. ಅವಾಗ ಆರ್.ಎಸ್.ಎಸ್ ಹಾಗೂ ಬಿಜೆಪಿಯವರು ಎಲ್ಲಿ ಹೋಗಿದ್ರು? ನಿಸ್ಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ರು ಅವಾಗ ಎಲ್ಲಿ ಹೋಗಿದ್ರು? ಅರಿಶಿನ ಕುಂಕುಮ ಬಗ್ಗೆ ಮಾತನಾಡಿರೋದು ಬೇರೆ. ಕನ್ನಡದ ಮೇಲೆ ಪ್ರೀತಿ ಇಲ್ಲದೆ ಇದ್ದರೆ ಪುಸ್ತಕ ಬರಿತಿದ್ರಾ? ಆಕೆ ಮುಸ್ಲಿಂ ಲೇಡಿ ಕನ್ನಡದಲ್ಲಿ ಬರೆದಿದ್ದಾರೆ. ಈಗ ಬೇರೆ ಧರ್ಮದವರು ಅದು ಮಾಡಿ ಇದು ಮಾಡಿ ಅನ್ನೋಕಾಗುತ್ತಾ? ಎಂದು ಪ್ರಶ್ನೆ ಮಾಡಿದರು.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

8 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

8 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

10 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

12 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

15 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

15 hours ago