ಅಂತಾರಾಷ್ಟ್ರೀಯ

ಚಾಟ್‌ ಜಿಪಿಟಿ ಬಹಳ ಕೆಟ್ಟದ್ದು : ವಿಕಿಪೀಡಿಯಾ ಸಹಸಂಸ್ಥಾಪಕ ಜಿಮ್ಮಿ ವೇಲ್ಸ್‌

ವಿಕಿಪೀಡಿಯಾ ಸಹಸಂಸ್ಥಾಪಕರಾದ ಜಿಮ್ಮಿ ವೇಲ್ಸ್‌ ಅವರು ಚಾಟ್‌ ಜಿಪಿಟಿ ಬಗ್ಗೆ ಮಾತನಾಡಿದ್ದು, ಚಾಟ್‌ ಜಿಪಿಟಿ ಬಹಳ ಕೆಟ್ಟದ್ದು, ಇದರಿಂದ ಜ್ಞಾನ ನಾಶವಾಗುತ್ತದೆ ಎಂದು ವಿಕಿಪೀಡಿಯಾ ಸಹಸಂಸ್ಥಾಪಕ ಅಭಿಪ್ರಾಯಪಟ್ಟಿದ್ದಾರೆ.

ಪೋರ್ಚುಗಲ್‌ನಲ್ಲಿ ಆಯೋಜಿಸಲಾಗಿದ್ದ ವೆಬ್‌ ಶೃಂಗಸಭೆ 2023ರಲ್ಲಿ ಚಾಟ್‌ ಜಿಪಿಟಿ ಬಗ್ಗೆ ಮಾತನಾಡಿದ ಅವರು ಇಂತಹ ಕೃತಕ ಬುದ್ಧಮತ್ತೆಯ ಮಿತಿಗಳ ಬಗ್ಗೆ ವಿವರಿಸಿದ್ದಾರೆ, “ಚಾಟ್‌ ಜಿಪಿಟಿ ಆರಂಬದಲ್ಲಿ ಬಳಸಲು ಉತ್ತಮವೆನಿಸುತ್ತದೆ. ಬಳಸಲು ಆರಂಭಿಸಿದ ನಂತರ ಅದು ಕೆಟ್ಟದ್ದು ಎನಿಸಿಬಿಡುತ್ತದೆ, ಇದರಿಂದ ಸಂಶೋಧನಾ ಮನೊಭಾವ ಕುಂಠಿತಗೊಂಡಿದೆ, ಈ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿದೆ” ಎಂದಿದ್ದಾರೆ.

ಜನರೇಟಿವ್‌ ಎಐ ಕಂಪನಿಗಳು ಸರಿಯಾದ ಕ್ರಮದಲ್ಲಿ ಪರಿಶೀಲನೆ ನಡೆಸಿ, ಅರ್ಹವಾಗಿ ಪರವಾನಗಿ ಪಡೆಯುತ್ತಿದ್ದಾರೆಯೇ ಎಂಬ ಆಕ್ಸಿಯೋನ್‌ನ ಹಿರಿಯ ಪತ್ರಕರ್ತರ ಪ್ರಶ್ನೆಗೆ, ” ಹೊಸ ತಂತ್ರಜ್ಞಾನಗಳು ಒಮ್ಮೆ ಬಂದು, ಅವುಗಳನ್ನು ನಾವು ಅಳವಡಿಸಿಕೊಂಡರೆ ಅದು ಸೋಮಾರಿತನವನ್ನು ಸೂಚಿಸುವ ಎಚ್ಚರಿಕೆಯನ್ನು ನೀಡುತ್ತದೆ. ಎಐಯ ಪರಿಶೀಲನೆಯು ಮುಂದಿನ ನವೀನ ತಂತ್ರಜ್ಞಾನಗಳ ಎಚ್ಚರಿಕೆಯ ಭಾಗವಾಗಿದೆ ಎಂದು ವೇಲ್ಸ್‌ ಹೇಳಿದ್ದಾರೆ.

ಚಾಟ್‌ ಜಿಪಿಟಿಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ವಾಸ್ತವಿಕವಾಗಿ ನಾವು ನೋಡಬೇಕಿದೆ. ಇದರಿಂದ ಡೇಟಾವನ್ನು ಹೆಚ್ಚು ಫಿಲ್ಟರ್‌ ಮಾಡಿದರೇ ಅದು ಸಾಮಾಜಿಕ ಮಾಧ್ಯಮದಂತಹ ಕಡಿಮೆ ಗುಣಮಟ್ಟದ ಮೂಲಗಳನ್ನು ತಪ್ಪಿಸಿ, ವಿವಿಧ ಕ್ಷೇತ್ರಗಳಿಗೆ ಹಾನಿಯನ್ನುಂಟು ಮಾಡಲಿದೆ ಎಂದು ಅವರು ಭಾವಿಸಿದ್ದಾರೆ.

ಏನಿದು ಚಾಟ್‌ ಜಿಪಿಟಿ?
ಇದೊಂದು ನವೀನ ತಂತ್ರಜ್ಞಾನವಾಗಿದೆ. ನಮಗೆ ಬೇಕಾದ ಸಮಗ್ರ ಮಾಹಿತಿಯ ಬಗ್ಗೆ ಒಂದು ಸಾಲಿನಲ್ಲಿ ಬರೆದರೆ ಚಾಟ್‌ ಜಿಪಿಟಿ ನಾವು ಕೇಳಿದಷ್ಟು ಪದಮಿತಿಯಲ್ಲಿ ಮಾಹಿತಿ ನೀಡಲಿದೆ. ಇದು ಅತಿ ನಿಖರವಾಗಿದ್ದು, ಇದನ್ನು ಬಳಸುವ ಮೂಲ ಉದ್ದೇಶವೇ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದಾಗಿದೆ. ಆದರೆ ಇದು ಜನರ ಜ್ಞಾನ ಸಂಪಾದನೆಗೆ ನೇರವಾಗಿಯೇ ಪೆಟ್ಟು ನೀಡುತ್ತಿದೆ.

andolanait

Share
Published by
andolanait

Recent Posts

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 mins ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

5 mins ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

9 mins ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

18 mins ago

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

10 hours ago