ಮನರಂಜನೆ

‘ಐ ಆ್ಯಮ್ ಕಮಿಂಗ್…’ ಅಂತ ಬರ್ತಿದ್ದಾರೆ ಶಿವರಾಜ್‌ಕುಮಾರ್

ಶಿವರಾಜಕುಮಾರ್ ಹುಟ್ಟುಹಬ್ಬಕ್ಕೆ ಹಲವು ಚಿತ್ರಗಳ ಟೀಸರ್ ಮತ್ತು ಪೋಸ್ಟರ್‍ಗಳು ಬಿಡುಗಡೆಯಾಗಿವೆ. ಈ ಮಧ್ಯೆ, ಶಿವರಾಜಕುಮಾರ್‍ ಅಭಿನಯದ 131ನೇ ಚಿತ್ರದ ಟೀಸರ್ ಮತ್ತು ಮೊದಲ ನೋಟವೂ ಬಿಡುಗಡೆಯಾಗಿದೆ.

ಈ ಹಿಂದೆ ಕನ್ನಡ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಅವರನ್ನು ಕರೆ ತಂದು, ಅವರಿಂದ ಶಿವರಾಜಕುಮಾರ್‍ ಅಭಿನಯದಲ್ಲಿ ‘ಕಿಲ್ಲಿಂಗ್‍ ವೀರಪ್ಪನ್‍’ ಚಿತ್ರವನ್ನು ಮಾಡಿಸಿದ ಸುಶೀರ್‍, ಈಗ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಕಾರ್ತಿಕ್ ಅದ್ವೈತ್ ನಿರ್ದೇಶನ ಮಾಡುತ್ತಿದ್ದಾರೆ.

ಮೂರು ನಿಮಿಷ 49 ಸೆಕೆಂಡ್‍ನ ಟೀಸರ್‍ನ ವಿಶೇಷತೆಯೆಂದರೆ, ಎಲ್ಲೂ ಶಿವರಾಜಕುಮಾರ್‍ ಕಾಣುವುದಿಲ್ಲ. ಪೊಲೀಸ್‍ ಸ್ಟೇಶನ್‍ನಲ್ಲಿ ಚಿತ್ರೀಕರಣಗೊಂಡಿರುವ ಈ ಟೀಸರ್‍ನಲ್ಲಿ ಅಚ್ಯುತ್‍ ಕುಮಾರ್‍, ರವೀಂದ್ರ ವಿಜಯ್‍ ಮುಂತಾದವರು ನಟಿಸಿದ್ದಾರೆ. ರೌಡಿಯೊಬ್ಬನ ಕುರಿತು ಅಚ್ಯುತ್ ಕುಮಾರ್ ವರ್ಣನೆ ಮಾಡುವ ಮತ್ತು ಆತನ ಸ್ಕೆಚ್‍ ಸಿದ್ಧಪಡಿಸುವ ಈ ಟೀಸರ್‍ನಲ್ಲಿ ಮಾತಿನಲ್ಲಿ ಶಿವರಾಜಕುಮಾರ್ ಅವರಿಗೆ ಬಿಲ್ಡಪ್‍ ನೀಡಲಾಗಿದೆ. ಲಾಂಗನ್ನು ಲಾಂಗೆಸ್ಟ್ ಟೈಮ್‍ ಹಿಡಿದಿರುವ ವ್ಯಕ್ತಿ ಎಂಬ ವಿಷಯ ಪ್ರಸ್ತಾಪವಾಗಲಿದ್ದು, ‘ಓಂ’ ಮತ್ತು ‘ಜೋಗಿ’ ಚಿತ್ರಗಳನ್ನು ನೆನಪಿಸುತ್ತದೆ. ‘ಐ ಆ್ಯಮ್ ಕಮಿಂಗ್’ ಎಂದು ಶಿವರಾಜಕುಮಾರ್ ಧ್ವನಿ ಮತ್ತು ಸ್ಕೆಚ್ ಬರುವ ಮೂಲಕ ಈ ಟೀಸರ್ ಅಂತ್ಯವಾಗುತ್ತದೆ.

ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವಣ್ಣ ವಿಭಿನ್ನ ಲುಕ್‍ ಮತ್ತು ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.

ಈ ಚಿತ್ರಕ್ಕೆ ‘ದೇವ’ ಎಂಬ ಹೆಸರು ಇಡುವ ಸಾಧ್ಯತೆ ಇದ್ದು, ಸಿ.ಎಸ್ ಸಂಗೀತ ಮತ್ತು ಎ.ಜೆ ಶೆಟ್ಟಿ ಛಾಯಾಗ್ರಹಣವಿದೆ. ಭುವನೇಶ್ವರಿ ಪ್ರೊಡಕ್ಷನ್ ಸಂಸ್ಥೆಯಡಿ ಎಸ್.ಎನ್. ರೆಡ್ಡಿ ಹಾಗೂ ಸುಧೀರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಭೂಮಿಕಾ

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

2 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

2 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

3 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

4 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

9 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

9 hours ago