ಮನರಂಜನೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಅ.22ರಂದು ದರ್ಶನ್‌ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿಯಾಗಿರುವ ದರ್ಶನ್‌ ಜಾಮೀನು ಅರ್ಜಿಯನ್ನು ಅಕ್ಟೋಬರ್‌.22ರಂದು ವಿಚಾರಣೆ ನಡೆಸಲು ಹೈಕೋರ್ಟ್‌ ಸಮ್ಮತಿ ನೀಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿ ದರ್ಶನ್‌ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್‌ ನ್ಯಾಯಾಲಯ ವಜಾಗೊಳಿಸಿತ್ತು.

ಆದರೆ, ಆರೋಪಿ ದರ್ಶನ್‌ ಬೆನ್ನನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲ ಸುನೀಲ್‌ ಕುಮಾರ್‌ ಅವರು, ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ ಈ ಅರ್ಜಿಯನ್ನು ಸ್ವೀಕರಿಸಿದ್ದು, ಅಕ್ಟೋಬರ್‌.22ರಂದು ನ್ಯಾಯಮೂರ್ತಿ ವಿಶ್ವಜಿತ್‌ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

 

 

ಆಂದೋಲನ ಡೆಸ್ಕ್

Recent Posts

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ತಾಲ್ಲೂಕು ವೀರಶೈವ ಲಿಂಗಾಯತ ಮಹಾ…

3 mins ago

ಅಪಘಾತದಿಂದ ಹೊತ್ತಿ ಉರಿದ ಟಿಪ್ಪರ್‌, ಬಸ್‌ : 14 ಮಂದಿ ಸಜೀವ ದಹನ

ಹೈದರಾಬಾದ್ : ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ,…

11 mins ago

‘ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ

65 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹ; ಜಿಲ್ಲೆಯಾದ್ಯಂತ ಒಟ್ಟು 2,12,504 ಟನ್‌ ಮೇವು ಲಭ್ಯ - ನವೀನ್ ಡಿಸೋಜ ಮಡಿಕೇರಿ…

26 mins ago

ಏಳೆಂಟು ವರ್ಷ ಹಿಂದೆಯೇ ಎಚ್‌ ಪಿವಿ ಲಸಿಕೆ ಆರಂಭಿಸಿದ ವೈದ್ಯ!

ಪುರುಷರೂ ಎಚ್‌ಪಿವಿ ಲಸಿಕೆ ಪಡೆಯುವುದು ಸುರಕ್ಷಿತ: ಡಾ.ಯೋಗೇಂದ್ರಕುಮಾರ್ ಸಲಹೆ • ಹೇಮಂತ್‌ಕುಮಾ‌ರ್‌ ಮಂಡ್ಯ :  ಹೆಣ್ಣು ಮಕ್ಕಳನ್ನು ಬಾಧಿಸುತ್ತಿರುವ ಗರ್ಭಕಂಠ…

35 mins ago

ಕಾಳು ಮೆಣಸು ಕಳ್ಳತನ; ಆರೋಪಿಗಳ ಬಂಧನ

ತನಿಖೆ ವೇಳೆ ಮತ್ತಷ್ಟು ಕಳ್ಳತನ ಮಾಡಿದ ಪ್ರಕರಣಗಳು ಬೆಳಕಿಗೆ ವಿರಾಜಪೇಟೆ : ಕಾಫಿ ಕಣದಲ್ಲಿ ಒಣಗಿಸಲು ಇಟ್ಟಿದ ಕಾಳು ಮೆಣಸು…

45 mins ago

ಕಿಲ್ಲಿಂಗ್‌ ಡಾಕ್ಟರ್‌ ವಿನಯ್‌ ಅಸಲಿ ಬಣ್ಣ ಬಯಲು ; ವೈದ್ಯನ ಬಲೆಗೆ ಸಿಲುಕಿ ನಲುಗಿದ ಮೂವರು ಸುಂದರಿಯರು!

ಮೈಸೂರು : ಪ್ರೀತಿ-ಪ್ರೇಮದ ಗುಂಗಲ್ಲಿ ಜೀವ ಕಳೆದುಕೊಂಡ ಜೀವಗಳು ಅದೆಷ್ಟೋ, ಜೀವನದಲ್ಲಿ ತೆಗೆದುಕೊಳ್ಳೋ ಒಂದೇ ಒಂದು ನಿರ್ಧಾರ ಬದುಕಿನ ಆಟವನ್ನೇ…

2 hours ago