Andolana originals

ಕೊಡಗು | ‘ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ

65 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹ; ಜಿಲ್ಲೆಯಾದ್ಯಂತ ಒಟ್ಟು 2,12,504 ಟನ್‌ ಮೇವು ಲಭ್ಯ

– ನವೀನ್ ಡಿಸೋಜ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಜಾನುವಾರು ಗಳಿಗೆ ಪ್ರಸ್ತುತ 65 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಅಂಕಿ- ಅಂಶಗಳ ಪ್ರಕಾರ, ಜಿಲ್ಲೆಯಾದ್ಯಂತ ಒಟ್ಟು 2,12,504 ಟನ್ ಮೇವು ಲಭ್ಯವಿದ್ದು, ಇದು ಜಾನುವಾರು ಗಳ ಅಗತ್ಯಕ್ಕೆ ತಕ್ಕಮಟ್ಟಿಗೆ ಸಮರ್ಪಕವಾಗಿದೆ.

ಕಳೆದ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ ನವೆಂಬರ್ ತಿಂಗಳ ವರೆಗೆ ದೀರ್ಘಾವಧಿ ಮಳೆ ಸುರಿದಿದೆ. ಇದ ರಿಂದಾಗಿ ಈ ಬಾರಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿಲ್ಲ. ಇನ್ನೂ 65 ವಾರಗಳವರೆಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಈ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಮೇವಿನ ಕಿಟ್‌ಗಳನ್ನು ತರಿಸಿಕೊಂಡು ನೀರಾವರಿ ವ್ಯವಸ್ಥೆ ಹೊಂದಿರುವ ರೈತರಿಗೆ ವಿತರಿಸಲು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಕ್ರಮ ಕೈಗೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 76,920 ದೊಡ್ಡ ಜಾನುವಾರು ಗಳು(ಹಸು, ಎಮ್ಮೆ) ಹಾಗೂ 8,253 ಸಣ್ಣ ಜಾನುವಾರುಗಳು(ಮೇಕೆ, ಕುರಿ) ಇವೆ. ಈ ಸಂಖ್ಯೆಗನುಗುಣವಾಗಿ ಪ್ರತಿದಿನ 3,260 ಟನ್ ಮೇವಿನ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಲಭ್ಯತೆಯ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಸರಾಸರಿ 65 ವಾರಗಳವರೆಗೆ ಮೇವು ಸಾಕಾಗಲಿದೆ.

ತಾಲ್ಲೂಕುವಾರು ಅಂಕಿ-ಅಂಶಗಳನ್ನು ಗಮನಿಸಿದಾಗ, ಸೋಮವಾರಪೇಟೆ ತಾಲ್ಲೂಕಿನಲ್ಲಿ 69 ವಾರಗಳವರೆಗೆ ಸಾಕಾಗುವಷ್ಟು ಮೇವು ಮೇವು ಲಭ್ಯವಿದೆ. ತಾಲ್ಲೂಕಿನಲ್ಲಿ ಒಟ್ಟು 59,718 ಟನ್ ಮೇವು ಲಭ್ಯವಿದ್ದು, ಜಾನುವಾರುಗಳ ಸಂಖ್ಯೆಗೂ ಅನುಗುಣವಾಗಿ ಹೆಚ್ಚಿನ ಸಂಗ್ರಹ ವಿದೆ. ಕಳೆದ ಸಾಲಿನ ಉತ್ತಮ ಮಳೆಯ ಪರಿಣಾ ಮವಾಗಿ ಮೇವು ಉತ್ತಮವಾಗಿ ಬೆಳೆದಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 39,457 ಟನ್ ಮೇವು ಲಭ್ಯವಿದ್ದು, ಇದು ಸುಮಾರು 47 ವಾರಗಳವರೆಗೆ ಸಾಕಾಗಲಿದೆ. ಜಿಲ್ಲೆಯಲ್ಲಿಯೇ ಅಲ್ಪ ಪ್ರಮಾಣದ ಲಭ್ಯತೆ ಮಡಿಕೇರಿಯಲ್ಲೇ ಕಂಡು ಬಂದಿದೆ. ಆದಾಗ್ಯೂ ತಕ್ಷಣದಲ್ಲಿ ಕೊರತೆ ಎದುರಾಗುವ ಪರಿಸ್ಥಿತಿ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ವಿರಾಜಪೇಟೆ ತಾಲ್ಲೂಕಿನಲ್ಲಿ 26,878 ಟನ್ ಮೇವು ಲಭ್ಯವಿದ್ದು, 78 ವಾರಗಳಿಗೆ ಸಾಕಾಗಲಿದೆ. ಮೇವು ಲಭ್ಯವಿದ್ದು, 78 ವಾರಗಳಿಗೆ ಸಾಕಾಗಲಿದೆ. ಪೊನ್ನಂಪೇಟೆಯಲ್ಲಿ 49,391 ಟನ್ ಮೇವು ಸಂಗ್ರಹವಿದ್ದು, 75 ವಾರಗಳಿಗೆ ಲಭ್ಯತೆ ಇದೆ. ಎರಡೂ ತಾಲ್ಲೂಕುಗಳಲ್ಲಿ ಹಸಿರು ಮೇವು ಉತ್ಪಾದನೆ ಸ್ಥಿರವಾಗಿರುವುದರಿಂದ ಯಾವುದೇ ಕೊರತೆ ಉಂಟಾಗುವ ಸಾಧ್ಯತೆಗಳು ಇಲ್ಲವಾಗಿದೆ.

ಕುಶಾಲನಗರ ತಾಲ್ಲೂಕಿನಲ್ಲಿ 37,059 ಟನ್ ಮೇವು ಲಭ್ಯವಿದ್ದು, ಸುಮಾರು 69 ವಾರಗಳಿಗೆ ಸಾಕಾಗಲಿದೆ. ಈ ಭಾಗದಲ್ಲಿ ನೀರಾವರಿ ವ್ಯವಸ್ಥೆ ಇರುವುದರಿಂದ ಹಸಿರು ಮೇವು ಬೆಳೆ ಹೆಚ್ಚಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಮೇವಿನ ಲಭ್ಯತೆ ಸಮ ರ್ಪಕವಾಗಿದ್ದರೂ, ಹವಾಮಾನ ಅನಿಶ್ಚಿತತೆ ಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಕ್ಕೆ ಮೇವಿನ ಕಿಟ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಕಿಟ್‌ಗಳು ಬಂದ ಬಳಿಕ ಅಗತ್ಯವಿರುವ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮಾಹಿತಿ ನೀಡಿದ್ದಾರೆ.

ಇದಲ್ಲದೇ ಸೈಲೇಜ್ ತಯಾರಿ, ಹಸಿರು ಮೇವು ಸಂಗ್ರಹಣೆ ಮತ್ತು ಸಮತೋಲನ ಆಹಾರ ನೀಡುವ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಮಳೆ ಕೊರತೆ ಅಥವಾ ಅಕಾಲಿಕ ಬಿಸಿಲಿನ ಸಂದರ್ಭ ಎದು ರಾದರೂ ಜಾನುವಾರುಗಳಿಗೆ ಆಹಾರ ಕೊರತೆ ಉಂಟಾಗದಂತೆ ಯೋಜನೆ ರೂಪಿಸಲಾಗಿದೆ.

ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಗಳಿಲ್ಲ. ಈಗಾಗಲೇ
ಅಂದಾಜು 65 ವಾರಗಳಿಗಾಗುವಷ್ಟು ಮೇವಿನ ಲಭ್ಯತೆ ಇದೆ. ಜಿಲ್ಲೆಯಾದ್ಯಂತ ಒಟ್ಟು 2,12,504 ಟನ್ ಮೇವು ಲಭ್ಯವಿದ್ದು, ಇದು ಜಾನುವಾರುಗಳ ಅಗತ್ಯಕ್ಕೆ ತಕ್ಕಮಟ್ಟಿಗೆ ಸಮರ್ಪಕವಾಗಿದೆ.
-ಡಾ.ಲಿಂಗರಾಜು ದೊಡ್ಡಮನಿ, ಉಪನಿರ್ದೆಶಕರು, ಪಶುವೈದ್ಯಕೀಯ, ಪಶುಪಾಲನಾ ಇಲಾಖೆ

ಆಂದೋಲನ ಡೆಸ್ಕ್

Recent Posts

ದೇವಿ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ: ಸಿಎಂ ಡಿಕೆಶಿ

ಮೈಸೂರು:  ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ದೇವಿಯ ಕೃಪೆ…

25 mins ago

ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ: ಗವಿಸಿದ್ದೇಶ್ವರ ಶ್ರೀ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿನಮ್ರ ಮಾತುಗಳನ್ನಾಡಿದ್ದಾರೆ. “ದಸರಾ…

48 mins ago

ಮನಸೆಳೆವ ಫಲ ಪುಷ್ಪ ಪ್ರದರ್ಶನ

ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ. 15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ…

1 hour ago

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

3 hours ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

4 hours ago

ಓದುಗರ ಪತ್ರ: ಇದೇನು ಪಾದಚಾರಿ ರಸ್ತೆಯೋ ಅಥವಾ…?

ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…

4 hours ago