ಕೊಡಗು

ಕಾಳು ಮೆಣಸು ಕಳ್ಳತನ; ಆರೋಪಿಗಳ ಬಂಧನ

ತನಿಖೆ ವೇಳೆ ಮತ್ತಷ್ಟು ಕಳ್ಳತನ ಮಾಡಿದ ಪ್ರಕರಣಗಳು ಬೆಳಕಿಗೆ

ವಿರಾಜಪೇಟೆ : ಕಾಫಿ ಕಣದಲ್ಲಿ ಒಣಗಿಸಲು ಇಟ್ಟಿದ ಕಾಳು ಮೆಣಸು ಕಳ್ಳತನವೆಸಗಿ ಅಂತರ್ ರಾಜ್ಯದಲ್ಲಿ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತಿತಿಮತಿ ನೋಕ್ಯ ಗ್ರಾಮದ ನಿವಾಸಿ ಮತ್ತು ಹಾಲಿ ೧ನೇ ಪೆರುಂಬಾಡಿ ಆರ್ಜಿ ಗ್ರಾಮದಲ್ಲಿ ವಾಸವಿದ್ದ ಶಫೀಕ್ ಕೆ.ಬಿ.(೨೮), ೧ನೇ ಪೆರುಂಬಾಡಿ ಆರ್ಜಿ ಗ್ರಾಮದ ನಿವಾಸಿ ದರ್ಶನ್ ನಾಯಕ್(೨೫), ಮೈಸೂರು ನಗರದ ಉದಯಗಿರಿ ಗೌಸಿಯಾ ನಗರ ನಿವಾಸಿ ಮೊಹಮ್ಮದ್ ಶಾಕಿರ್(೩೧) ಬಂಧಿತ ಆರೋಪಿಗಳು.

ವಿರಾಜಪೇಟೆ ತಾಲೂಕು ಅಮ್ಮತ್ತಿ ಕಣ್ಣಂಗಾಲ ಗ್ರಾಮದ ನಿವಾಸಿ ಲೆಹರ್ ಗಣಪತಿ ಎಂಬುವವರು ಕಾಫಿ ಕಣದಲ್ಲಿ ಸುಮಾರು ೩೦೦ ಕೆ.ಜಿ. ಕಾಳು ಮೆಣಸು ದಾಸ್ತಾನು ಇರಿಸಿದ್ದರು. ಕಳೆದ ಮಾರ್ಚ್ ೯ರಂದು ಕಾಣದಲ್ಲಿದ್ದ ಕರಿಮೆಣಸು ಕಳವು ಮಾಡಲಾಗಿತ್ತು. ಕಾರ್ಮಿಕರನ್ನು ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ವಿಶೇಷ ತಂಡ ರಚನೆ ಮಾಡಿ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳ ಚಹರೆ ಪಟ್ಟಿ ಮತು ಇತರ ಚಲನವಲನಗಳನ್ನು ಗಮನಿಸಿದ ಪೊಲೀಸರು ಹುಣಸೂರು ತಾಲೂಕು ಪಂಚವಳ್ಳಿಯಲ್ಲಿ ಕಾರು ಒಂದಲ್ಲಿ ಕುಳಿತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ತನಿಖೆ ವೇಳೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದ ಕಾಳು ಮೆಣಸನ್ನು ಸ್ಥಳೀಯವಾಗಿ ಮಾರಾಟ ಮಾಡಿದಲ್ಲಿ ಕಳ್ಳ ಮಾಲು ಎಂದು ಗುರುತು ಮಾಡಬಹುದು ಎಂದು ಕೇರಳ ರಾಜ್ಯದಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

೨೧೫ ಕೆ.ಜಿ ಕರಿಮೆಣಸು ಅಂದಾಜು ಮೌಲ್ಯ ೧,೪೭,೨೭೫ ರೂ., ಕೃತ್ಯಕ್ಕೆ ಬಳಸಿದ್ದ ಅಲ್ಟೋ ಕಾರು, ಹೋಂಡಾ ಯುನಿಕಾರ್ನ್, ಬೈಕ್ ವಶಕ್ಕೆ ಪಡೆದಿದ್ದಾರೆ. ಅರೋಪಿಗಳನ್ನು ಹೆಚ್ಚಿನ ತನಿಖೆ ಮಾಡಿದ ವೇಳೆಯಲ್ಲಿ ಆರೋಪಿಗಳ ಮೇಲೆ ಹುಣಸೂರು ನಗರ ಠಾಣೆಯಲ್ಲಿ ಪಲ್ಸರ್ ೨೦೦ ಎನ್.ಎಸ್ ಬೈಕ್ ಕಳ್ಳತನ ಪ್ರಕರಣ ದಾಖಲಾಗಿದ್ದು, ಬೈಕ್ ವಶಕ್ಕೆ ಪಡೆದಿದಾರೆ. ಸುಂಠಿಕೊಪ್ಪ ಠಾಣೆಯಲ್ಲಿ ೭೫ ಕೆ.ಜಿ ಕಾಳು ಮೆಣಸು ಕಳ್ಳತನ ಅಂದಾಜು ಮೌಲ್ಯ ೫೧,೩೭೫ ರೂ, ಮತ್ತು ಸ್ವಿಪ್ಟ್ ಡಿಸೈರ್ ಕಾರು ಕಳ್ಳತನ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಕಳ್ಳತನದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸು ವರಿಷ್ಠಾಧಿಕಾರಿಗಳಾದ ಬಿಂದುಮಣಿ ಅವರ ಆದೇಶದ ಮೇರೆಗೆ ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್ ಮತ್ತು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪಿ. ಮಾರ್ಗದರ್ಶನದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಠಾಣಾಧಿಕಾರಿ ಎನ್.ಜೆ. ಲತಾ, ಅಪರಾಧ ವಿಭಾಗ ಪಿ.ಎಸ್.ಐ. ವಾಣಿಶ್ರೀ ಮತ್ತು ಸಿಬ್ಬಂದಿಗಳಾದ ನವೀನ್, ಮಜೀದ್, ಅನೀಫ್, ಬಸವರಾಜು, ಶಿವರಾಜು, ಮಹೇಶ್ ಎಸ್, ರಾಜೇಶ್, ರಾಘವೇಂದ್ರ, ಶ್ರೀಪ್ರಸಾದ್ ಶಶಿಧರ, ಮಹೇಶ್ ಸಾರವಾಡ ಮತ್ತು ಗಿರೀಶ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಆಂದೋಲನ ಡೆಸ್ಕ್

Recent Posts

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…

11 hours ago

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

11 hours ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

12 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

12 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

12 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

12 hours ago