prem new movie
ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಮೂರು ವರ್ಷಗಳೇ ಆಗಿವೆ. ನಿರಂಜನ್ ಅಭಿನಯದ ಕೊನೆಯ ಚಿತ್ರವಾಗಿ ‘ನಮ್ಮ ಹುಡುಗ್ರು’, 2022ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಅವರು ‘ಸ್ಪಾರ್ಕ್’ ಎಂಬ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಗಸ್ಟ್ 20ರಂದು ನಿರಂಜನ್ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದವರು ತಮ್ಮ ಚಿತ್ರದ ನಾಯಕನಿಗೆ ಶುಭ ಕೋರಿದ್ದಾರೆ. ಡಾ.ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸಿರುವ ಈ ಚಿತ್ರವನ್ನು ಮಹಾಂತೇಶ್ ಹಂದ್ರಾಳ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಒಂದು ಹಗರಣದ ಸುತ್ತ ಸಾಗುವ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸತ್ಯಕ್ಕಾಗಿ ನಿರಂಜನ್ ಹೋರಾಟ ಹೇಗಿದೆ ಅನ್ನೋದನ್ನು ಟೀಸರ್‍ನಲ್ಲಿ ತೋರಿಸಲಾಗಿದೆ.
‘ಸ್ಪಾರ್ಕ್’ ಕುರಿತು ಮಾತನಾಡುವ ನಿರಂಜನ್, ‘ಇದು ಎಲ್ಲರ ಮನಸ್ಸಿನಲ್ಲಿರುವ ಕಿಡಿ. ಏನೇ ಹಗರಣ, ಏನೇ ನಡೆದರು ಮೊದಲು ಧ್ವನಿ ಎತ್ತುವುದು ಪತ್ರಕರ್ತರು. ಅವರಿಗೆ ಸಿಗುವ ಗೌರವ ಕಡಿಮೆ. ನಾನು ಚಿತ್ರದಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸುತ್ತಿದ್ದೇನೆ. ಇದು ದೊಡ್ಡ ಜವಾಬ್ದಾರಿ. ಇದರಲ್ಲಿ ಬರವಣಿಗೆ ತುಂಬಾ ಸ್ಟ್ರಾಂಗ್ ಆಗಿದೆ. ಇದು ಹಗರಣ ಕಥಾಹಂದರ ಹೊಂದಿರುವ ಚಿತ್ರ. ಕಮರ್ಷಿಯಲ್ ಆಗಿ ಈ ಸಿನಿಮಾ ಮೂಡಿ ಬಂದಿದೆ’ ಎಂದರು.
‘ನೆನಪಿರಲಿ’ ಪ್ರೇಮ್ ಮಾತನಾಡಿ, ‘ನಾನು ಚಿತ್ರರಂಗಕ್ಕೆ ಮಾಸ್ ಹೀರೋ ಅಗಬೇಕು ಎಂದು ಬಂದೆ. ಆದರೆ, ಬ್ಯಾಕ್ ಟು ಬ್ಯಾಕ್ ಪ್ರೇಮಕಥೆಗಳಲ್ಲಿ ನಟಿಸಿದೆ. ಆ ಚಿತ್ರಗಳು ಯಶಸ್ವಿಯಾಗಿ, ನನ್ನ ಕ್ಲಾಸ್ ಹೀರೋ ಎಂದು ಬ್ರಾಂಡ್ ಮಾಡಿದರು. ನನ್ನಲ್ಲಿರುವ ಸ್ಪಾರ್ಕ್ ನೋಡಿ ಮಹಾಂತೇಶ್ ನನಗೆ ಮಾಸ್ ಪಾತ್ರವನ್ನು ಕೊಟ್ಟಿದ್ದಾರೆ’ ಎಂದರು.
ನಿರ್ದೇಶಕ ಮಹಾಂತೇಶ್ ಮಾತನಾಡಿ, ‘’ಸ್ಪಾರ್ಕ್’ ಒಂದು ಹಗರಣದ ಕುರಿತಾದ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಸಚಿನ್ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ’ ಎಂದರು.
‘ಸ್ಪಾರ್ಕ್’ ಚಿತ್ರದಲ್ಲಿ ನಿರಂಜನ್‍ಗೆ ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ. ಮಿಕ್ಕಂತೆ ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಸಾಧು ಕೋಕಿಲಾ, ಬಲ ರಾಜವಾಡಿ ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಮುಗಿದು, ಈ ವರ್ಷ ಚಿತ್ರ ಬಿಡುಗಡೆಯಾಗಲಿದೆ.
ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…
ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…
ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…
ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…
ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…