Andolana originals

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್

೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ

ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ ಅದೇ ಐತಿಹಾಸಿಕ ನೆಲದಲ್ಲಿ ರಾಜ್‌ಘಾಟ್ ಮಾದರಿಯ ಸ್ಮಾರಕ ನಿರ್ಮಿಸುವ ಕಾಮಗಾರಿ ಆರಂಭಿಸಿ ೩ ವರ್ಷ ಕಳೆದಿದ್ದರೂ ಈ ವರೆಗೂ ಪೂರ್ಣವಾಗದೇ ನನೆಗುದಿಗೆ ಬಿದ್ದಿದೆ.

೧೯೩೪ರ ಫೆ.೨೨ರಂದು ಕೊಡಗಿಗೆ ಬಂದಿದ್ದ ಗಾಂಧೀಜಿ, ಮಡಿಕೇರಿಯ ಈಗಿನ ಗಾಂಧಿ ಮೈದಾನದಲ್ಲಿ ಸಾರ್ವಜನಿಕರನ್ನುದ್ದೀಶಿಸಿ ಭಾಷಣ ಮಾಡಿದ್ದರು. ಆ ನೆನಪಿನ ಆ ಜಾಗಕ್ಕೆ ಗಾಂಧಿ ಮೈದಾನ ಎಂದು ಹೆಸರಾಯಿತು. ಕಳೆದ ೬೭ ವರ್ಷಗಳಿಂದ ಸರ್ವೋದಯ ಸಮಿತಿಯ ನೇತೃತ್ವದಲ್ಲಿ ಜಿಡಳಿತದ ಸಹಯೋಗ ದೊಂದಿಗೆ ಇಲ್ಲಿಯೇ ಪ್ರತಿ ವರ್ಷ ಸರ್ವಧರ್ಮ ಪ್ರಾರ್ಥನೆ ನಡೆಯುತ್ತಿದೆ.

ಅದೇ ಸ್ಥಳದಲ್ಲಿ ಜಿ ಖಜಾನೆಯಲ್ಲಿರುವ ಗಾಂಧಿಜಿಯವರ ಚಿತಾಭಸ್ಮಕ್ಕೆ ಶಾಶ್ವತ ನೆಲೆ ಕಲ್ಪಿಸಬೇಕು ಎಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಸ್ಮಾರಕ ನಿರ್ಮಾಣದ ಯೋಜನೆಗೆ ಚಾಲನೆ ನೀಡಲಾಯಿತು. ಅ.೧೭ಕ್ಕೆ ಕಾಮಗಾರಿ ಆರಂಭವಾಗಿ ೩ ವರ್ಷ ತುಂಬುತ್ತಿದ್ದರೂ, ಕಳೆದ ಕೆಲವು ತಿಂಗಳಿಂದ ಯಾವುದೇ ಕೆಲಸ ನಡೆಯದೇ ಕಾಮಗಾರಿ ನನೆಗುದಿಗೆ ಬಿದ್ದಿದೆ.

೧.೯೮ ಕೋಟಿ ರೂ. ವೆಚ್ಚದ ಯೋಜನೆ: ಗಾಂಧಿ ಸ್ಮಾರಕದ ಜೊತೆಗೆ ಉದ್ಯಾನವನ, ಗ್ರಂಥಾಲಯ, ಬೆಳಕಿನ ವ್ಯವಸ್ಥೆ ಸೇರಿದಂತೆ ಒಟ್ಟು ೧.೯೮ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಸರ್ಕಾರದಿಂದ ಈವರೆಗೆ ೫೦ ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಜಿ ಉಸ್ತುವಾರಿ ಸಚಿವರು, ಶಾಸಕರು ಮತ್ತು ಪರಿಷತ್ ಸದಸ್ಯರು ತಲಾ ೫ ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಈಗ ಜಿಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರಕ್ಕೆ ಹೆಚ್ಚುವರಿ ೫೦ ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರ ಅನುದಾನ ಬಿಡುಗಡೆಯಾದರೆ ಕಾಮಗಾರಿ ಮತ್ತೆ ಆರಂಭವಾಗಲಿದೆ ಎಂದು ಸರ್ವೋದಯ ಸಮಿತಿಯ ಸದಸ್ಯರು ಹೇಳುತ್ತಾರೆ.

ಖಜಾನೆಯ ಉಳಿದಿದೆ ಬಾಪೂಜಿಯ ಚಿತಾಭಸ್ಮ: ಗಾಂಧೀಜಿ ಹುತಾತ್ಮರಾದಾಗ ಅವರ ಅಂತಿಮ ದರ್ಶನಕ್ಕೆ ಜಿಯಿಂದ ತೆರಳಿದ್ದ ಸರ್ವೋದಯ ಸಮಿತಿಯ ಪ್ರಮುಖರು ಅವರ ಚಿತಾಭಸ್ಮವನ್ನು ತಂದಿದ್ದರು. ಅದು ಇಂದಿಗೂ ಜಿ ಖಜಾನೆಯಲ್ಲಿದೆ. ಪ್ರತಿ ವರ್ಷ ಜ.೩೦ರಂದು ಅದನ್ನು ಪೊಲೀಸ್ ಗೌರವದೊಂದಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಗಾಂಧಿ ಮೈದಾನದ ಮಂಟಪದಲ್ಲಿ ಇಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಗಾಂಧೀಜಿಯ ನೆನಪುಗಳು: ೧೯೩೪ರಲ್ಲಿ ಕೇರಳ ಮೂಲಕ ಕೊಡಗಿಗೆ ಬಂದಿದ್ದ ಗಾಂಧೀಜಿ ಮೊದಲು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಲ್ಲಿ ತಂಗಿದ್ದರು. ಮರುದಿನ ಗದ್ದೆ ಬಯಲಿನಲ್ಲಿ ಸ್ವಾತಂತ್ರ ಚಳವಳಿಯ ಬಗ್ಗೆ ಭಾಷಣ ಮಾಡಿದರು. ಬಳಿಕ ಗೋಣಿಕೊಪ್ಪಲು ಮಾರ್ಗವಾಗಿ ಕೈಕೇರಿಗೆ ಹೋಗಿ ಪರಿಶಿಷ್ಟಜಾತಿಯ ವೃದ್ಧೆಯೊಬ್ಬರ ಕಷ್ಟ ಆಲಿಸಿದರು. ಸಮಾಜ ಸುಧಾರಕ ಗುಂಡುಗುಟ್ಟಿ ಜಿ.ಎಂ. ಮಂಜನಾಥಯ್ಯ ಅವರ ಮನೆ, ಕಥೆಗಾರ್ತಿ ಗೌರಮ್ಮನವರ ಮನೆಗೂ ಭೇಟಿ ನೀಡಿದ್ದರು. ಗೌರಮ್ಮ ತಮ್ಮ ಆಭರಣಗಳನ್ನು ಬಿಚ್ಚಿ ದಲಿತರ ಸೇವೆಗೆ ಗಾಂಧಿಜಿಯವರ ಮಡಿಲಿಗೆ ಹಾಕಿದ್ದ ವಿಷಯವನ್ನು ಇಂದಿಗೂ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಬೇಳೂರಿನ ಗುರಪ್ಪ ಅವರ ಮನೆಯಲ್ಲಿ ಒಂದು ರಾತ್ರಿ ತಂಗಿದ್ದ ಗಾಂಽಜಿ ಬಳಸಿದ್ದ ಮೈಸೂರ್ ಸ್ಯಾಂಡಲ ಸೋಪು ಮತ್ತು ಟವೆಲ್ ಅನ್ನು ವರ್ಷಗಳ ಕಾಲ ಸಂರಕ್ಷಿಸಲಾಗಿತ್ತು. ಈಗ ಅದನ್ನು ಮೈಸೂರಿನ ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ.

ಮಂಗಳೂರಿಗೆ ತೆರಳುವ ದಾರಿಯಲ್ಲಿ ಮಡಿಕೇರಿಗೆ ಬಂದಿದ್ದ ಮಹಾತ್ಮ ಗಾಂಧಿ ಭಾಷಣ ಮಾಡಿದ ಆ ವಿಶಾಲ ನೆಲವೇ ಇಂದು ಗಾಂಧಿ ಮೈದಾನವಾಗಿದೆ. ೩ ವರ್ಷಗಳಿಂದ ಕಾಯುತ್ತಿರುವ ಈ ಸ್ಮಾರಕಕ್ಕೆ ಶೀಘ್ರ ಅನುದಾನ ಸಿಕ್ಕಿ, ಬಾಪೂಜಿಯ ಚಿತಾಭಸ್ಮಕ್ಕೆ ಶಾಶ್ವತ ಗೌರವ ಸಿಗುತ್ತದೆಯೇ ಎಂಬ ಪ್ರಶ್ನೆ ಈಗ ಜಿಯ ಜನರದ್ದಾಗಿದೆ.

” ರಾಜ್‌ಘಾಟ್ ಮಾದರಿಯ ಗಾಂಧಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಸರ್ವೋದಯ ಸಮಿತಿ ಉದ್ದೇಶವಾಗಿತ್ತು. ಕಾಮಗಾರಿ ಚೆನ್ನಾಗಿ ಆಗಬೇಕು ಎಂಬುದು ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ ಅವರ ದೊಡ್ಡ ಕನಸ್ಸಿತ್ತು. ಆದರೆ, ಇದುವರೆಗೆ ನಿರ್ಮಿತಿ ಕೇಂದ್ರದಿಂದ ೬೫ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು ಈವರೆಗೂ ಪೂರ್ಣಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ.”

-ಮುನೀರ್ ಅಹಮ್ಮದ್, ಕಾರ್ಯದರ್ಶಿ, ಸರ್ವೋದಯ ಸಮಿತಿ

 

 

ಆಂದೋಲನ ಡೆಸ್ಕ್

Recent Posts

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

3 hours ago

ಮಣ್ಣಾದ ಸತ್ಯಕ್ಕೆ ಮರುಜೀವ

ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…

3 hours ago

ಓದುಗರ ಪತ್ರ: ವಿವೇಕವಿದ್ದರೆ ಮಾರಕವೂ ಪೂರಕ!

ಸಮಾಜಕ್ಕೆ ವಿeನಿಗಳು ನೀಡಿರುವ, ನೀಡುತ್ತಿರುವ ಅಪಾರವಾದ ಕೊಡುಗೆಯಿಂದಾಗಿ ತಂತ್ರeನದ ಕ್ರಾಂತಿಯ ಜೊತೆಗೆ ನಾನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಜಗತ್ತಿನ ಅಭಿವೃದ್ಧಿ…

4 hours ago

ಓದುಗರ ಪತ್ರ: ವಿದ್ಯುತ್: ಸರ್ಕಾರ ಭರವಸೆ ಈಡೇರಿಸಲಿ

ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ದಿನಕ್ಕೆ ೯ ತಾಸು ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಅದನ್ನು ೫ ತಾಸಿಗೆ…

4 hours ago

ಓದುಗರ ಪತ್ರ: ಕೇಂದ್ರ ಗೃಹ ಸಚಿವರು ಈ ರೀತಿ ಹೇಳಬಹುದೇ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹೋರಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ನಾಯಕರಿಗೆ…

4 hours ago

ಓದುಗರ ಪತ್ರ: ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ದೊರೆಯುವುದೇ?

೧೪ ವರ್ಷಗಳಿಂದ ಪೊಲೀಸ್ ತನಿಖೆ ನ್ಯಾಯಾಲಯ / ಸಿಬಿಐ / ತನಿಖಾ ಸಂಸ್ಥೆಗಳಲ್ಲಿ ‘ಅಲೆದಾಟ’ನಡೆಸುತ್ತಿರುವ ಸೌಜನ್ಯಾ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ…

4 hours ago