ಓದುಗರ ಪತ್ರ
ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು ವರ್ಷಗಳ ಹಿಂದೆ ವಿವಾದಾತ್ಮಕ ಸ್ಥಳವಾಗಿತ್ತು.ಈ ಜಗದಲ್ಲಿ ಹಿಂದೆ ಇದ್ದ ಎಂಟಿಎಸ್ ಶಾಲೆಯನ್ನೇ ಹೊಸದಾಗಿ ನಿರ್ಮಿಸಬೇಕೆಂದು, ಮೈಸೂರಿನ ಹಲವಾರು ಪ್ರಗತಿಪರ ಸಂಘಟನೆಗಳು, ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದರು. ಆದರೆ ಈ ಜಗವು ರಾಮಕೃಷ್ಣ ಆಶ್ರಮಕ್ಕೇ ಸೇರಬೇಕು, ಈ ಜಗವು ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾಗಿದ್ದು, ಇ ವಿವೇಕ ಸ್ಮಾರಕ ನಿರ್ಮಾಣವಾಗಬೇಕೆಂದು ಮೈಸೂರಿನ ಹಲವಾರು ಹಿರಿಯ ಗಣ್ಯ ನಾಗರಿಕರಿಂದ ನಿರಂತರ ಹೋರಾಟವೂ ನಡೆಯಿತು.
ಇದರಲ್ಲಿ ಪ್ರಮುಖವಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇ ಗೌಡರವರ ನೇತೃತ್ವದಲ್ಲಿ ನಿರಂತರ ಹೋರಾಟ ಮತ್ತು ಅವರ ಪ್ರಯತ್ನದಿಂದ ಈ ಜಗವು ರಾಮಕೃಷ್ಣ ಆಶ್ರಮಕ್ಕೆ ಸೇರುವಂತಾಯಿತು. ನಂತರ ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಜಗವು ರಾಮಕೃಷ್ಣ ಆಶ್ರಮದ ಪಾಲಿಗೆ ಸೇರುವಂತಾಯಿತು.ಆದರೆ ವಿವೇಕ ಸ್ಮಾರಕ ಉದ್ಘಾಟನಾಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮವು ಡಿ.ಮಾದೇಗೌಡರ ಹೆಸರನ್ನು eಪಿಸುಕೊಳ್ಳದೇ, ಹೋರಾಟಗಾರರಿಗೆ ಕೃತಜ್ಞತೆ ಹೇಳುವುದನ್ನೇ ಮರೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ, ವಿವೇಕ ಸ್ಮಾರಕದ ಜಗವು ರಾಮಕೃಷ್ಣ ಆಶ್ರಮಕ್ಕೆ ಸೇರಬೇಕು ಎಂದು ಹೋರಾಟ ನಡೆಸಿದವರಿಗೆ ವಂದನೆಗಳು ಎಂದು ಹೇಳಿದ್ದರೂ ಸಮಾರಂಭ ಇನ್ನು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು.
– ಬೂಕನಕೆರೆ ವಿಜೇಂದ್ರ, ಮೈಸೂರು
೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…
ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…
ಸಮಾಜಕ್ಕೆ ವಿeನಿಗಳು ನೀಡಿರುವ, ನೀಡುತ್ತಿರುವ ಅಪಾರವಾದ ಕೊಡುಗೆಯಿಂದಾಗಿ ತಂತ್ರeನದ ಕ್ರಾಂತಿಯ ಜೊತೆಗೆ ನಾನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಜಗತ್ತಿನ ಅಭಿವೃದ್ಧಿ…
ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ದಿನಕ್ಕೆ ೯ ತಾಸು ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಅದನ್ನು ೫ ತಾಸಿಗೆ…
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹೋರಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ನಾಯಕರಿಗೆ…
೧೪ ವರ್ಷಗಳಿಂದ ಪೊಲೀಸ್ ತನಿಖೆ ನ್ಯಾಯಾಲಯ / ಸಿಬಿಐ / ತನಿಖಾ ಸಂಸ್ಥೆಗಳಲ್ಲಿ ‘ಅಲೆದಾಟ’ನಡೆಸುತ್ತಿರುವ ಸೌಜನ್ಯಾ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ…