ಮನರಂಜನೆ

ಜನವರಿಯಲ್ಲಿ ಬಿಡುಗಡೆಯಾಗಲಿದೆ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳು

ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ, ಹೊಸ ಚಿತ್ರಗಳು ಬಿಡುಗಡೆ ಆಗುವುದಕ್ಕೆ ದೊಡ್ಡ ಪೈಪೋಟಿ ನಡೆಸಿವೆ. ಈಗಾಗಲೇ ವರ್ಷದ ಮೊದಲ ಶುಕ್ರವಾರ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಮುಂದಿನ ನಾಲ್ಕು ಶುಕ್ರವಾರಗಳಂದು ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿವೆ.

ಬಿಡುಡೆಯಾಗುವುದಕ್ಕೆ ಸಜ್ಜಾಗಿರುವ ಚಿತ್ರಗಳ ಪೈಕಿ ದೊಡ್ಡ ಸ್ಟಾರ್‍ಗಳ ಚಿತ್ರಗಳು ಯಾವುದೂ ಇಲ್ಲದಿದ್ದರೂ, ಒಂದಿಷ್ಟು ಮೀಡಿಯಂ ಬಜೆಟ್‍ನ ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.

ಈ ವರ್ಷದ ಮೊದಲ ಶುಕ್ರವಾರ (ಜನವರಿ 03) ಮೂರು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ‘ಗನ್ಸ್ ಆ್ಯಂಡ್ ರೋಸಸ್’, ‘ಸ್ವೇಚ್ಛಾ’ ಮತ್ತು ‘ಆಫ್ಟರ್‍ ಬ್ರೇಕಪ್‍’ ಎಂಬ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಮೂರು ಚಿತ್ರಗಳು ಹೊಸಬರ ಚಿತ್ರಗಳಾಗಿದ್ದು, ಮೂರಕ್ಕೆ ಮೂರೂ ಪ್ರೇಕ್ಷಕರ ಗಮನಸೆಳೆಯುವಲ್ಲಿ ವಿಫಲವಾಗಿವೆ.

ಜನವರಿ ಎರಡನೇ ವಾರದಲ್ಲಿ (ಜನವರಿ 10) ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಶರಣ್‍ ಅಭಿನಯದ ‘ಛೂ ಮಂತರ್’, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’, ದಿಲೀಪ್‍ ರಾಜ್‍ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಮತ್ತು ‘ಟೆಡ್ಡಿ ಬೇರ್‍’ ಚಿತ್ರಗಳಿವೆ. ಸಂಕ್ರಾಂತಿ ಸೀಸನ್‍ ಆಗಿರುವುದರಿಂದ ಪರಭಾಷೆಗಳ ಒಂದಿಷ್ಟು ಚಿತ್ರಗಳು ಸಹ ಬಿಡುಗಡೆಗೆ ಸಜ್ಜಾಗುತತಿವೆ. ಈ ಪೈಕಿ, ರಾಮ್‍ಚರಣ್‍ ತೇಜ ಅಭಿನಯದ ಮತ್ತು ಶಂಕರ್ ‍ನಿರ್ದೇಶನದ ಬಹುನಿರೀಕ್ಷಿತ ‘ಗೇಮ್‍ ಚೇಂಜರ್‍’ ಬಿಡುಗಡೆಯಾಗುತ್ತಿದೆ. ಇದಲ್ಲದೆ ನಂದಮೂರಿ ಬಾಲಕೃಷ್ಣ ನಿರ್ದೇಶನದ ‘ಡಾಕು ಮಹಾರಾಜ್‍’ ಮತ್ತು ವೆಂಕಟೇಶ್ ಅಭಿನಯದ ‘ಸಂಕ್ರಾಂತಿ ವಸ್ತುನ್ನಾಂ’ ಸೇರಿದಂತೆ ಒಂದಿಷ್ಟು ದೊಡ್ಡ ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆಯಾಗುತ್ತಿವೆ.

ಜನವರಿ 17ರಂದು ಸದ್ಯ ‘ಕಣ್ಣಾಮುಚ್ಚೆ ಕಾಡೇಗೂಡೇ’, ‘ರಾಜ ರೋಜ’ ಮತ್ತು ‘ಕುಚಿಕು’ ಎಂಬ ಚಿತ್ರಗಳು ಬರುತ್ತಿವೆ. ಇದರಲ್ಲಿ ‘ಕಣ್ಣಾಮುಚ್ಚೆ ಕಾಡೇಗೂಡೇ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‍ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಿಟಟರೆ, ಮೂರೂ ಹೊಸಬರ ಚಿತ್ರಗಳೇ. ಅದಾದ ಮುಂದಿನ ವಾರ, ಅಂದರೆ ಜನವರಿ 24ರಂದು ಸಹ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ವಿರಾಟ್‍ ಅಭಿನಯದ ‘ರಾಯಲ್‍’ ಮತ್ತು ಅನೀಶ್‍ ತೇಜೇಶ್ವರ್‍ ಮುಂತಾದವರು ನಟಿಸಿರುವ ‘ಫಾರೆಸ್ಟ್’ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಜನವರಿ ಕೊನೆಯ ಶುಕ್ರವಾರ (ಜ 31) ಐದು ಚಿತ್ರಗಳು ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಪ್ರಜ್ವಲ್‍ ಅಭಿನಯದ ‘ಗಣ’, ನವೀನ್‍ ಶಂಕರ್ ಅಭಿನಯದ ‘ನೋಡಿದವರು ಏನಂತಾರೆ’, ‘ಅಪಾಯವಿದೆ ಎಚ್ಚರಿಕೆ’, ‘ಭಗೀರಥ’ ಮತ್ತು ‘ಹೈನಾ ಚಿತ್ರಗಳು ತೆರೆಗೆ ಬರಲಿವೆ.

ಒಟ್ಟಾರೆ, ಜನವರಿ ತಿಂಗಳು ಫುಲ್‍ ಆಗಿದ್ದು 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಸದ್ಯಕ್ಕೆ ಸಿಕ್ಕ ಮಾಹಿತಿ ಅಷ್ಟೇ. ಮಿಕ್ಕಂತೆ, ಇನ್ನಷ್ಟು ಚಿತ್ರಗಳು ಬಿಡುಗಡೆಗೆ ಪೈಪೋಟಿ ನಡೆಸಿದ್ದು, ಒಟ್ಟು ಎಷ್ಟು ಚಿತ್ರಗಳು ತೆರೆಗೆ ಬರಬಹುದು ಎಂದು ತಿಂಗಳು ಮುಗಿದ ನಂತರ ಸ್ಪಷ್ಟತೆ ಸಿಗಲಿದೆ.

ಭೂಮಿಕಾ

Recent Posts

ಪ್ರಸ್ತುತ ದಲಿತ ರಾಜಕಾರಣದಲ್ಲಿ ಮಹದೇವಪ್ಪ ಎಂಬ ವಿದ್ಯಮಾನ

ರಮೇಶ್‌ ಎಚ್.ಕೆ. ಶಿವಮೊಗ್ಗ ಕರ್ನಾಟಕದಲ್ಲಿ ದಲಿತ ವರ್ಗಗಳ ರಾಜಕಾರಣ ಎಂದಾಕ್ಷಣ ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಎನ್. ರಾಚಯ್ಯ,…

18 mins ago

ಬೆಂ-ಮೈ ಹೆದ್ದಾರಿಯಲ್ಲಿ ಕಾರು-ಬಸ್ ಡಿಕ್ಕಿ ; ತಪ್ಪಿದ ಭಾರೀ ಅನಾಹುತ, ಪ್ರಯಾಣಿಕರು ಪಾರು

ಮಂಡ್ಯ : ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್…

40 mins ago

ಅಮೆರಿಕ ವಶವಾದ ಇರಾನ್‌ ಹಡಗು ; ಸಶಸ್ತ್ರ ಕಡಲ್ಗಳ್ಳತನ ಎಂದ ಇರಾನ್‌

ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…

56 mins ago

ದಲಿತ ಚಿಂತಕ ಧೀಮಂತ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರ ಹೋರಾಟದ ಕತೆ……

‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಮನದಾಳದ ಮಾತು ಇಲ್ಲಿದೆ ನಿರೂಪಣೆ.. ಆರ್‌.ಟಿ.ವಿಠ್ಠಲಮೂರ್ತಿ ನಾನು…

2 hours ago

ಬಿಸಿ ಗಾಳಿ ; ಸಮವಸ್ತ್ರ ಕಡ್ಡಾಯಗೊಳಿಸದಂತೆ ಜಿಲ್ಲಾಧಿಕಾರಿ ಆದೇಶ

ಚಾಮರಾಜನಗರ : ತೀವ್ರ ಬಿಸಿ ಗಾಳಿ (ಹೀಟ್ ವೇವ್) ಇರುವುದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ…

5 hours ago

ಪಿರಿಯಾಪಟ್ಟಣ : ಈಜಲು ನೀರಿಗಿಳಿದಿ ಯುವಕರಿಬ್ಬರು ಸಾವು

ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ. ಪಿರಿಯಾಪಟ್ಟಣದಲ್ಲಿ…

5 hours ago