ರಮೇಶ್ ಎಚ್.ಕೆ. ಶಿವಮೊಗ್ಗ
ಕರ್ನಾಟಕದಲ್ಲಿ ದಲಿತ ವರ್ಗಗಳ ರಾಜಕಾರಣ ಎಂದಾಕ್ಷಣ ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಎನ್. ರಾಚಯ್ಯ, ಬಸವಲಿಂಗಪ್ಪ ಅವರ ಆದಿಯಾಗಿ ಕೆಲವು ಮಹನೀಯರನ್ನು ನೆನೆಯಲಾಗುತ್ತದೆ. ಸಾರ್ವಜನಿಕ ವಲಯದ ಮೇಧಾವಿಗಳಾಗಿದ್ದ ಈ ನಾಯಕರನ್ನು ಈಗಲೂ ನಮ್ಮ ದಲಿತ ಸಮುದಾಯ ಮತ್ತು ಅದರ ನಾಯಕರು ನೆನಪು ಇಟ್ಟುಕೊಂಡಿರುವುದು ಅವರ ಹಿರಿಮೆಗೆ ಸಾಕ್ಷಿ. ಆದರೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯವಾಗಿ ಬದಲಾದ ಕಾಲಘಟ್ಟದಲ್ಲಿ ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಎನ್. ರಾಚಯ್ಯ, ಬಸವಲಿಂಗಪ್ಪರಂತಹ ನಾಯಕರನ್ನು ಮೌಲ್ಯದ ತಕ್ಕಡಿಗೆ ಹಾಕಿ ತೂಗಿದಷ್ಟು ಸುಲಭ ಈಗಿಲ್ಲ. ನಾಯಕರಲ್ಲಿ ಹೇಗೆ ಮಿತಿಗಳನ್ನು ಹುಡುಕಲಾಗುತ್ತಿದೆಯೋ ಅದೇ ರೀತಿಯಲ್ಲಿ ಜನರಲ್ಲೂ ಮಿತಿಗಳು ಇದ್ದು ಈ ಮಿತಿ ಪೂರ್ಣ ರಾಜಕೀಯ ಸನ್ನಿವೇಶದಲ್ಲಿ ಜನಪರ ಮತ್ತು ಗುಣಮಟ್ಟದ ನಾಯಕತ್ವವನ್ನು ಹುಡುಕುವ ಸವಾಲು ದೊಡ್ಡದಾಗಿ ಸೃಷ್ಟಿಯಾಗಿದೆ. ಆದರೆ ಈ ಮಿತಿಗಳ ಒಳಗೂ ಕೂಡ ಕರ್ನಾಟಕದ ದಲಿತ ವರ್ಗದ ರಾಜಕಾರಣದಲ್ಲಿ ಗಟ್ಟಿಯಾಗಿ ಹೆಸರಿಸಬಹುದಾದ ಹೆಸರುಗಳೆಂದರೆ ಅದು ಡಾ. ಹೆಚ್. ಸಿ. ಮಹದೇವಪ್ಪ ಎಂದು ಕಾಣುತ್ತದೆ.
ಬಂಡವಾಳಶಾಹಿಗಳಿಂದ ಸದಾ ದೈಹಿಕ ಮತ್ತು ಮಾನಸಿಕ ಅಂತರ ಕಾಪಾಡಿಕೊಂಡು ಬಂದಿರುವ ಮಹದೇವಪ್ಪನವರು ಸಮಾಜದ ಜಾತಿಯ ಕೂಪದೊಳಗೆ ಸಿಲುಕಿ, ಕಡೆಗೆ ಬಾಬಾ ಸಾಹೇಬರು ಹೇಳಿದ ಶಿಕ್ಷಣ ಎಂಬ ಹುಲಿಯ ಹಾಲನ್ನು ಕುಡಿದು ಗರ್ಜಿಸುವ ಛಾತಿ ಬೆಳೆಸಿಕೊಂಡಂತವರು.
ಬಹುತೇಕ ದಲಿತ ಸಂಘರ್ಷ ಸಮಿತಿ ಚಳವಳಿಗಳ ಜೊತೆಯಲ್ಲೇ ಗುರುತಿಸಿಕೊಂಡು ಬಂದ ಮಹದೇವಪ್ಪನವರಿಗೆ ಜ್ಞಾನದ ಮಹತ್ವದ ಜೊತೆಗೆ, ಹಳ್ಳಿಯ ಜೀವನ, ಜನರ ಬದುಕು ಬಹಳಷ್ಟು ಚೆನ್ನಾಗಿ ತಿಳಿದಿದೆ. ಹೀಗಾಗಿಯೇ ಅವರು ಎಂತಹ ಉನ್ನತ ಸ್ಥಾನಗಳನ್ನು ಪಡೆದಾಗಲೂ ಕೂಡ ಹಳ್ಳಿಯ ಜನರ ಮತ್ತು ಶ್ರಮಿಕರ ಬದುಕಿನ ಸಂವೇದನೆಗಳನ್ನು ಜೀವಂತವಾಗಿ ಇಟ್ಟುಕೊಂಡು ಬದುಕುತ್ತಿದ್ದಾರೆ.
ದಲಿತ ವರ್ಗದ ಹಲವು ನಾಯಕರು ಸದ್ಯ ವಿವಿಧ ರಾಜಕೀಯ ಅಧಿಕಾರದಲ್ಲಿ ಇದ್ದಾಗಿಯೂ ಸಹ, ಬೌದ್ಧಿಕವಾಗಿ ಬಹಳಷ್ಟು ಪ್ರಬುದ್ಧರಾದಂತಹ ಮಹದೇವಪ್ಪನವರ ಇರುವಿಕೆಯು ಅವರು ಕೆಲಸ ಮಾಡಿದಂತಹ ಎಲ್ಲ ಸರ್ಕಾರಗಳ ತೂಕ ಹೆಚ್ಚುವಂತೆ ಮಾಡಿದೆ.
ಬುದ್ಧ, ಬಸವ ಮತ್ತು ಬಾಬಾ ಸಾಹೇಬರ ಪರಮ ಅನುಯಾಯಿ ಆದಂತಹ ಮಹದೇವಪ್ಪನವರು ಈ ಸದ್ಯದ ಸವಾಲುಗಳ ನಡುವೆಯೇ ಸಾಮಾಜಿಕ ನ್ಯಾಯದ ವಿಷಯ ಸಾಕಾರಗೊಳಿಸಲು ತಮ್ಮನ್ನು ತೊಡಗಿಸಿಕೊಂಡಿರುವ ಬಗೆಯು ಶೋಷಿತರ ಹಿತದ ದೃಷ್ಟಿಯಿಂದ ಹೆಚ್ಚು ಪ್ರಶಂಸನೀಯವಾಗಿ ಇರುವಂತದ್ದು.
ಹಣವಿದ್ದರೆ ವೋಟು, ಜಾತಿಯಿದ್ದರೆ ಅಧಿಕಾರ ಎನ್ನುವಂತಹ ಸಂದರ್ಭದಲ್ಲಿ, ಅತ್ಯಂತ ಅನಾರೋಗ್ಯಕರ ಸ್ಪರ್ಧಾ ವಾತಾವರಣದಲ್ಲಿ, ಫ್ಯೂಡಲ್ ಜಾತಿವಾದಿಗಳ ಹಾವಳಿಯಲ್ಲಿ ಬದುಕುತ್ತಿರುವ ಮಹದೇವಪ್ಪನವರಿಗೆ ಈ ಹಿಂದೆ ಇದ್ದ ದಲಿತ ನಾಯಕರಿಗೆ ಇರುವಂತಹ ಮೌಲಿಕ ವಾತಾವರಣದ ಬೆಂಬಲ ಇಲ್ಲ ಎಂಬುದನ್ನು ನಾವು ಗಮನದಲ್ಲಿಡಬೇಕು. ಹೀಗಾಗಿಯೇ ಇಂತಹ ಪರಿಸ್ಥಿತಿಗಳನ್ನು ಮೀರಿ ಸಾರ್ವಜನಿಕ ಜೀವನದಲ್ಲಿ ಜನರಿಗಾಗಿ ಅವರು ಮಾಡಿದ ಕೆಲಸಗಳಿಗೆ ನಿಜವಾದ ಮಹತ್ವ ಇದೆ.
ಅದರಲ್ಲೂ ಲೋಕೋಪಯೋಗಿ ಸಚಿವನಾಗಿ ಕರ್ನಾಟಕ ಇತಿಹಾಸದಲ್ಲೇ ಯಾವ ಲೋಕೋಪಯೋಗಿ ಸಚಿವರೂ ಮಾಡಿರದಂತಹ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕ್ಷಿಯಾಗಿದ್ದು ಮಹದೇವಪ್ಪನವರು. ಆದರೂ ಇವರ ಮೇಲೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತರ್ಕವಿಲ್ಲದ ಆರೋಪ ಮಾಡಿದರೇ ವಿನಃ ಅವರ ಸಾಧನೆಯನ್ನು ಶ್ಲಾಘಿಸುವ ಕನಿಷ್ಠ ಸೌಜನ್ಯ ತೋರಲಿಲ್ಲ ಎಂಬುದು ದಲಿತರ ರಾಜಕಾರಣಕ್ಕೆ ಒದಗಿದ ದಯನೀಯ ಪರಿಸ್ಥಿತಿ ಆಗಿದೆ. ಇನ್ನು ಪರಿಶಿಷ್ಟರ ಬದುಕಿನ ಪರವಾಗಿಯೂ ಹೆಚ್ಚು ಚಿಂತಿಸುವ ಮನಸ್ಥಿತಿ ಇವರದ್ದಾಗಿದ್ದರಿಂದಲೇ ಕರ್ನಾಟಕದಲ್ಲಿ ಗುತ್ತಿಗೆ ಮೀಸಲಾತಿ ಕಾಯ್ದೆ, ಬಡ್ತಿ ಮೀಸಲಾತಿ ಕಾಯ್ದೆ, SCSP/TSP ಕಾಯ್ದೆ, ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ೫೦ ಲಕ್ಷದಿಂದ ೧ ಕೋಟಿ ರೂ. ವರೆಗೆ ಗುತ್ತಿಗೆ ಕಾಮಗಾರಿ ಮಾಡುವಂತಹ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗಿದೆ.
ಅದರಲ್ಲೂ ಸಮಾಜ ಕಲ್ಯಾಣ ಸಚಿವರಾದ ಬಳಿಕ ದಲಿತ ಸಂಘಟನೆ ಪ್ರಸ್ತುತ ದಲಿತ ರಾಜಕಾರಣದಲ್ಲಿ ಮಹದೇವಪ ಎಂಬ ವಿದ್ಯಮಾನ ಸಂವಿಧಾನ ಜಾಗೃತಿಯ ಪ್ರಯತ್ನಗಳ ನಂತರದಲ್ಲೇ ದೇಶದೊಳಗೆ ಸಂವಿಧಾನದ ಕುರಿತ ದನಿಯೂ ಹೆಚ್ಚಾಗಿದ್ದನ್ನು ನಾವು ಕಾಣಬಹುದು. ಅದರಲ್ಲೂ ಮಕ್ಕಳಲ್ಲಿ ಕೋಮುದ್ವೇಷ ಬಿತ್ತುವ ಕಾರ್ಖಾನೆಗಳೇ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೂ ಅಭ್ಯಾಸ ಆಗುವ ರೀತಿಯಲ್ಲಿ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೇ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ವಾಚಿಸುವ ಪರಿಪಾಠಕ್ಕೆ ಚಾಲನೆ ನೀಡಿದ್ದು ನಿಜಕ್ಕೂ ಅರ್ಥಪೂರ್ಣ ನಡೆಯಾಗಿದೆ. ಇನ್ನು ಬಾಬಾ ಸಾಹೇಬರು ಹೇಳಿದ ಸಮಾನತೆಯ ಧರ್ಮವಾದ ಬುದ್ಧ ಧರ್ಮದ ಮೌಲ್ಯಗಳನ್ನು ಪಸರಿಸುವ ನಿಟ್ಟಿನಲ್ಲಿ ಬೌದ್ಧರ ಹೋರಾಟಗಾರರ ನ್ಯಾಯಬದ್ಧ ಮನವಿಗಳನ್ನು, ಸಂಪುಟ ಸಭೆಗೆ ತಂದು ಇತ್ಯರ್ಥ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಹದೇವಪ್ಪನಂತವರು ಮಾಡಿದ್ದಾರೆ ಎಂಬುದಕ್ಕೆ ಈ ಕಾಲದ ಎಲ್ಲರೂ ಸಾಕ್ಷಿಯಾಗಿದ್ದಾರೆ. ಅವರಿಗೆ ಇಂತಹ ಮನಸ್ಥಿತಿ ಇರುವ ಕಾರಣದಿಂದಲೇ PTCL ಕಾಯ್ದೆಯ ಲೋಪ ಸರಿಪಡಿಸಲು ಸಾಧ್ಯವಾಯಿತು. ಇದರ ಜೊತೆಗೆ ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ತುರ್ತು ಪರಿಹಾರ ಒದಗಿಸಲು ರಾಜ್ಯಾದ್ಯಂತ ವಿಶೇಷ DCRE ಠಾಣೆಗಳನ್ನು ಸ್ಥಾಪಿಸುವ ಕೆಲಸವನ್ನು ಅವರು ಮಾಡಿದ್ದಾರೆ.
ಜೊತೆಗೆ ದೇಶದ ಆತ್ಮವಾದ ಸಂವಿಧಾನ ಮತ್ತು ಅದರ ಆಶಯಗಳಿಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಕರ್ನಾಟಕವನ್ನೇ ಸಂವಿಧಾನ ರಕ್ಷಣಾ ವೇದಿಕೆಯನ್ನಾಗಿ ಮಾರ್ಪಡಿಸಿದ ಮಹದೇವಪ್ಪನವರ ಕೆಲಸವು ದೇಶದ ಜನರಿಗೆ ಅದರಲ್ಲೂ ಇಲ್ಲಿನ ಬಹು ಜನರಿಗೆ ಅರ್ಥ ಆಗಬೇಕು.
ಮಹದೇವಪ್ಪನವರ ಸಂವಿಧಾನದ ಜಾಗೃತಿಯ ಪ್ರಯತ್ನಗಳು ನಂತರದಲ್ಲೇ ದೇಶೊಳಗೆ ಸಂವಿಧಾನದ ಕುರಿತ ದನಿಯೂ ಹೆಚ್ಚಾಗಿದ್ದನ್ನು ನಾವು ಕಾಣಬಹುದು. ಅದರಲ್ಲೂ ಮಕ್ಕಳಲ್ಲಿ ಕೋಮುದ್ವೇಷ ಬಿತ್ತುವ ಕಾರ್ಖಾನೆಗಳೇ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೂ ಅಭ್ಯಾಸ ಆಗುವ ರೀತಿಯಲ್ಲಿ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೇ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ವಾಚಿಸುವ ಪರಿಪಾಠಕ್ಕೆ ಚಾಲನೆ ನೀಡಿದ್ದು ನಿಜಕ್ಕೂ ಅರ್ಥಪೂರ್ಣ ನಡೆಯಾಗಿದೆ.
ಇನ್ನು ಬಾಬಾ ಸಾಹೇಬರು ಹೇಳಿದ ಸಮಾನತೆಯ ಧರ್ಮವಾದ ಬುದ್ಧ ಧರ್ಮದ ಮೌಲ್ಯಗಳನ್ನು ಪಸರಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಜರುಗಿದ ಬೌದ್ಧರ ಸಮ್ಮೇಳನದ ರುವಾರಿಯಾದ ಮಹದೇವಪ್ಪನವರು ಇದೇ ರೀತಿಯ ಸಮ್ಮೇಳನವನ್ನು ರಾಜ್ಯದ ನಾಲ್ಕು ಕಡೆ ಹಮ್ಮಿಕೊಳ್ಳುವ ಯೋಚನೆಯನ್ನು ಹೊಂದಿದ್ದು ಇದು ನಿಜವಾಗಲೂ ಅಂಬೇಡ್ಕರ್ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಂತಹ ವ್ಯಕ್ತಿಗಳ ನಡೆಯಾಗಿದೆ. ಇಷ್ಟಾದರೂ ಸಹ ಇಂತಹ ದುರಿತ ಕಾಲದಲ್ಲಿ ಪರಿಶಿಷ್ಟ ವರ್ಗದ ಇಂತಹ ನಾಯಕರು ಎದುರಿಸುವ ವಿರೋಧಾಬಾಸಗಳನ್ನು ಗಮನಿಸಿದರೆ, ಆತಂಕವಾಗುತ್ತದೆ.
ಅಹಿಂದ ವರ್ಗಗಳನ್ನು ಸಂಘಟಿಸಿ ಆ ಮೂಲಕ ಶೋಷಿತರು ಅಧಿಕಾರವನ್ನು ಹಿಡಿಯಬಹುದೆಂದು ಮಹದೇವಪ್ಪ-ಸಿದ್ದರಾಮಯ್ಯ – ಜಾರಕಿಹೊಳಿ – ಜಮೀರ್ ಅಹಮದ್ ಅಂತಹ ಜೋಡಿಯ ಮಾದರಿಗಳು ಈಗಾಗಲೇ ಸಾಬೀತು ಮಾಡಿವೆ. ಅದರಲ್ಲೂ ಜನರನ್ನು ಪ್ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಯಮ ತಾಳ್ಮೆಯನ್ನು ಮಹದೇವಪ್ಪನವರು ೪೦ ವರ್ಷಗಳ ಸಾರ್ವಜನಿಕ ಜೀವನದ ಉದ್ದಕ್ಕೂ ಪ್ರದರ್ಶನ ಮಾಡಿದ್ದಾರೆ. ಈ ಸಂಗತಿಯು ಮುಖ್ಯವಾಗಿ ದಲಿತ ಸಂಘಟನೆಯ ಮಿತ್ರರಿಗೆ ಚೆನ್ನಾಗಿ ತಿಳಿದಿದೆ.
ಹೀಗಿರುವಾಗಲೂ ಪರಿಶಿಷ್ಟ ವರ್ಗದ ನಾಯಕರುಗಳು ಹೆಚ್ಚಿನ ಸಾಧನೆ ಮಾಡಿದ ಹೊರತಾಗಿಯೂ ನೋವಿನ ಪರಿಸ್ಥಿತಿಯನ್ನು ಅನುಭವಿಸಿರುವ ಉದಾಹರಣೆಗಳನ್ನೂ ಇತಿಹಾಸದಿಂದಲೇ ನಾವು ನೆನೆಯಬಹುದು.
ಮಾಧ್ಯಮ ಸಂದರ್ಶನವೊಂದರಲ್ಲಿ ಮಹದೇವಪ್ಪ ಅವರು ಎಡಗೈ ಬಲಗೈ ವ್ಯತ್ಯಾಸಗಳ ಬಗ್ಗೆ ಏನು ಹೇಳುತ್ತೀರ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನಾನು ಎಡಗೈಯಲ್ಲ, ಬಲಗೈಯಲ್ಲ ಬದಲಿಗೆ ಅಂಬೇಡ್ಕರ್ ಕೈ’ ಎಂಬ ಮಾತನ್ನು ಸಾರ್ವಜನಿಕವಾಗಿ ಹೇಳುವಷ್ಟು ಹೊಣೆಗಾರಿಕೆಯನ್ನು ಹೊಂದಿರುವ ಓರ್ವ ಅಂಬೇಡ್ಕರ್ ವಾದಿಯನ್ನು ನಿರ್ದಾಕ್ಷಿಣ್ಯವಾಗಿ ಟೀಕೆಯ ಪರಿಧಿಯ ಒಳಗೆ ನಿಲ್ಲಿಸಿ ಅವರ ಬೌದ್ಧಿಕ ನಿಲುವುಗಳು ಮತ್ತು ಸೈದ್ಧಾಂತಿಕ ಗಟ್ಟಿತನವನ್ನು ಪರಿಗಣಿಸದೇ ಇರುವುದು ಜನಪರ ನಾಯಕರನ್ನು ಮತ್ತೆ ಉಳಿವಿಗಾಗಿ ರಾಜಕಾರಣ ಮಾಡಬೇಕಾದ ಪರಿಸ್ಥಿತಿಗೆ ನೂಕುವುದು ನಿಶ್ಚಿತ.
ಬಹುಶಃ ಒಳ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಇಂತಹದ್ದೊಂದು ಸಂದಿಗ್ಧತೆಯನ್ನು ಎದುರಿಸುತ್ತಿರುವ ಮಹದೇವಪ್ಪನವರು ಪರಿಶಿಷ್ಟ ಸಮುದಾಯಗಳು ಒಗ್ಗಟ್ಟಾಗಬೇಕಾದದ್ದು ಇಂದಿನ ಅಗತ್ಯ ಎಂಬುದನ್ನು ಪ್ರತಿಪಾದಿಸುತ್ತಲೇ ಇದ್ದಾರೆ. ಈ ಪ್ರತಿಪಾದನೆಯನ್ನೂ ಭಾರತ ಭಾಗ್ಯ ವಿಧಾತ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಮಾಡಿರುವ ಕಾರಣ, ಮಹದೇವಪ್ಪನವರ ನಿಲುವುಗಳಿಗೆ ಖಂಡಿತ ಮಹತ್ವ ಇದೆ ಎನಿಸುತ್ತದೆ.
ಬಹು ಮುಖ್ಯವಾಗಿ ಮನುವಾದಿಗಳು ಶೋಷಿತರನ್ನು ಒಡೆದು ಆಳುವ ಮತ್ತು ಸಂವಿಧಾನದ ಆಶಯಗಳಿಗೆ ಅಪಾಯ ಉಂಟು ಮಾಡುವ ಪ್ರಯತ್ನಗಳು ಇದೇ ಮೊದಲಲ್ಲ. ಇದೇ ಸಾಲಿಗೆ ಇದೀಗ ಒಳ ಮೀಸಲಾತಿ ಹೋರಾಟದ ವೇದಿಕೆಯನ್ನು ಅವರು ಬಳಸಿಕೊಳ್ಳುತ್ತಿದ್ದು, ಅವರ ಈ ಒಡಕಿನ ಪ್ರಯತ್ನಗಳನ್ನು ನಮ್ಮ ಶೋಷಿತರು ಹೋರಾಟ ಎಂದು ಭಾವಿಸದೇ ಅಲ್ಲಿನ ಅಪಾಯಗಳ ಬಗ್ಗೆ ಜಾಗೃತರಾಗಬೇಕು. ಇಲ್ಲವಾದರೆ ಹುಲಿಯನ್ನೇ ನುಂಗುವ ಹಸುಗಳಾಗಿರುವ ಮನುವಾದಿಗಳ ಕುತಂತ್ರಕ್ಕೆ ಮತ್ತೆ ಬಲಿಯಾಗಬೇಕಾದ್ದು ಪರಿಶಿಷ್ಟರೇ ಹೊರತು ಇನ್ಯಾರು ಅಲ್ಲ. !
ಇನ್ನು ಸಂವಾದಕ್ಕೆ ಸದಾ ಸಿದ್ಧವಿದ್ದು ಪಂಚೇಂದ್ರಿಯಗಳ ಸೂಕ್ಷ್ಮತೆಯನ್ನೂ ಮತ್ತು ಮಾನವೀಯತೆಯನ್ನೂ ಗಟ್ಟಿಯಾಗಿ ಮೈಗೂಡಿಸಿಕೊಂಡಿರುವ ಗಟ್ಟಿ ಪ್ರಜಾಪ್ರಭುತ್ವವಾದಿ ಮಹದೇವಪ್ಪನವರನ್ನು ನಮ್ಮ ಪರಿಶಿಷ್ಟ ಸಮುದಾಯಗಳು ಅವರು ಸಮುದಾಯಗಳನ್ನು ನೋಡುವಷ್ಟೇ ಪ್ರೀತಿಯಿಂದ ನೋಡಿದರೆ, ಅವರ ನೈತಿಕ ಬಲ ಹೆಚ್ಚುತ್ತದೆ. ಪರಿಶಿಷ್ಟ ವರ್ಗಗಳ ಪರವಾದ ಅವರ ದನಿಗೆ ಇನ್ನಷ್ಟು ಬಲ ಬರುತ್ತದೆ.
ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…
ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…
ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…
ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…
ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…
ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…